Asianet Suvarna News Asianet Suvarna News

ಸಕಲೇಶಪುರ: ಓಲ್ಡ್‌ ಮಕ್ನಾ ಆನೆ ಸೆರೆ ಕಾರ್ಯಾಚರಣೆ ಯಶಸ್ವಿ

ಹಾಸನ-ಚಿಕ್ಕಮಗಳೂರಲ್ಲಿ ತೀವ್ರ ದಾಂಧಲೆ ನಡೆಸುತ್ತಿದ್ದ ಈ ಆನೆಯನ್ನು 2022ರ ಜೂ.29ರಂದು ಸೆರೆ ಹಿಡಿದು ಬಂಡೀಪುರಕ್ಕೆ ಬಿಡಲಾಗಿತ್ತು. ಆದರೆ ಒಂದೇ ತಿಂಗಳಲ್ಲಿ ವಾಪಸ್‌ ಮಲೆನಾಡಿಗೆ ಆಗಮಿಸಿದ ಈ ಆನೆ ಮಲೆನಾಡಿನ ವಿವಿಧೆಡೆ ಮತ್ತೆ ತನ್ನ ಉಪಟಳ ಮುಂದುವರಿಸಿತ್ತು. ಆಹಾರಕ್ಕಾಗಿ ಮನೆಗಳಿಗೆ ನುಗ್ಗುವುದು, ನ್ಯಾಯಬೆಲೆ ಅಂಗಡಿಗೆ ನುಗ್ಗಿ ಅಕ್ಕಿ ಹಾಳು ಮಾಡುವ ಅನೇಕ ಘಟನೆಗಳು ನಡೆದಿದ್ದವು.

Old Makna Elephant Capture Operation Successful at Sakleshpur in Hassan grg
Author
First Published May 20, 2023, 9:43 AM IST

ಸಕಲೇಶಪುರ(ಮೇ.20): ವರ್ಷದ ಹಿಂದೆ ಸೆರೆ ಸಿಕ್ಕು ಬಂಡೀಪುರಕ್ಕೆ ಸ್ಥಳಾಂತರಗೊಂಡಿದ್ದರೂ ಕೇವಲ ಒಂದೇ ತಿಂಗಳ ಅವಧಿಯಲ್ಲಿ ವಾಪಸ್‌ ಮಲೆನಾಡಿಗೆ ಬಂದು ತನ್ನ ಪುಂಡಾಟ ಮುಂದುವರಿಸಿದ್ದ ಒಂಟಿ ಸಲಗವೊಂದನ್ನು ಅರಣ್ಯ ಇಲಾಖೆ ಮತ್ತೆ ಸೆರೆಹಿಡಿದಿದೆ. ‘ಓಲ್ಡ್‌ ಮಕ್ನಾ’ (ದಂತ ಇಲ್ಲದ ವಯಸ್ಸಾದ ಗಂಡಾನೆ) ಹೆಸರಲ್ಲಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಈ ಆನೆಯನ್ನು ಶುಕ್ರವಾರ ಸಕಲೇಶಪುರದ ಬಾಗೆ ಬಳಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.

ಹಾಸನ-ಚಿಕ್ಕಮಗಳೂರಲ್ಲಿ ತೀವ್ರ ದಾಂಧಲೆ ನಡೆಸುತ್ತಿದ್ದ ಈ ಆನೆಯನ್ನು 2022ರ ಜೂ.29ರಂದು ಸೆರೆ ಹಿಡಿದು ಬಂಡೀಪುರಕ್ಕೆ ಬಿಡಲಾಗಿತ್ತು. ಆದರೆ ಒಂದೇ ತಿಂಗಳಲ್ಲಿ ವಾಪಸ್‌ ಮಲೆನಾಡಿಗೆ ಆಗಮಿಸಿದ ಈ ಆನೆ ಮಲೆನಾಡಿನ ವಿವಿಧೆಡೆ ಮತ್ತೆ ತನ್ನ ಉಪಟಳ ಮುಂದುವರಿಸಿತ್ತು. ಆಹಾರಕ್ಕಾಗಿ ಮನೆಗಳಿಗೆ ನುಗ್ಗುವುದು, ನ್ಯಾಯಬೆಲೆ ಅಂಗಡಿಗೆ ನುಗ್ಗಿ ಅಕ್ಕಿ ಹಾಳು ಮಾಡುವ ಅನೇಕ ಘಟನೆಗಳು ನಡೆದಿದ್ದವು.

ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಹಾಸನದಿಂದ ಸ್ಪರ್ಧಿಸಿದರೆ ಪ್ರಜ್ವಲ್‌ ನಿಲ್ಲಲ್ಲ: ಭವಾನಿ ರೇವಣ್ಣ

ಈ ಹಿನ್ನೆಲೆಯಲ್ಲಿ ಜನ ಈ ಆನೆಯನ್ನು ಮತ್ತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು. ಅದರಂತೆ ಸಾಕಾನೆ ಅಭಿಮನ್ಯು ನೇತೃತ್ವದಲ್ಲಿ ಶುಕ್ರವಾರ ಕಾರ್ಯಾಚರಣೆ ಆರಂಭಿಸಿದ ಮೂರೇ ಗಂಟೆಯಲ್ಲಿ ಒಂಟಿ ಸಲಗವನ್ನು ಸೆರೆ ಹಿಡಿಯಲಾಯಿತು. ರಾಷ್ಟ್ರೀಯ ಹೆದ್ದಾರಿ 75ರ ಸಮೀಪದ ಒಸ್ಸೂರು ಎಸ್ಟೇಟ್‌ನ ಮಠಸಾಗರ ಬಳಿ ಈ ಕಾಡಾನೆ ಸೆರೆ ಸಿಕ್ಕಿದೆ.

Follow Us:
Download App:
  • android
  • ios