*  ಘಟನೆ ಹರಿಹರ-ಶಿವಮೊಗ್ಗ ರಾಜ್ಯ ಹೆದ್ದಾರಿಯ ಹಗನವಾಡಿ ಬಳಿ ನಡೆದ ಘಟನೆ*  ಡಾಬಾದವರಿಂದ ರಕ್ಷಣಾ ಕಾರ್ಯ *  ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ  

ದಾವಣಗೆರೆ(ಫೆ.27): ಪ್ರಯಾಣಿಕರಿದ್ದ ಅಪೆ ಆಟೋಗೆ(Auto) ಟ್ರ್ಯಾಕ್ಟರ್‌ವೊಂದು(Tractor) ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ವೃದ್ಧೆಯೊಬ್ಬಳು ಸಾವನ್ನಪ್ಪಿ(Death), ಐವರಿಗೆ ಗಂಭಿರವಾದ ಗಾಯಗಳಾದ ಘಟನೆ ಹರಿಹರ-ಶಿವಮೊಗ್ಗ ರಾಜ್ಯ ಹೆದ್ದಾರಿಯ ಹಗನವಾಡಿ ಬಳಿ ನಿನ್ನೆ(ಶನಿವಾರ) ನಡೆದಿದೆ.

ಮೃತ ವೈದ್ಧೆಯ ಹೆಸರು ತಿಳಿದು ಬಂದಿಲ್ಲ. ಜಿಲ್ಲೆಯ ಹರಿಹರದಿಂದ(Harihara) ಭಾನುವಳ್ಳಿ ಗ್ರಾಮಕ್ಕೆ ತೆರಳಿತ್ತಿದ್ದ ಆಟೋ‌‌ರಿಕ್ಷಾಗೆ ಪಕ್ಕದ ರಸ್ತೆಯಿಂದ ಬಂದ ಟ್ರ್ಯಾಕ್ಟರ್ ಆಟೋಗೆ ಡಿಕ್ಕಿ(Collision) ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಆಟೋರಿಕ್ಷಾದಲ್ಲಿ 6ಕ್ಕೂ ಹೆಚ್ಚು ವಿದ್ಯಾರ್ಥಿಗಳು(Students), ವಯಸ್ಕರು‌ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.

Road Accident: ಒಂದೇ ಬೈಕ್‌ನಲ್ಲಿ ಬೆಳಗಾವಿಯ ನಾಲ್ವರು ಸ್ನೇಹಿತರು.. ಮೃತ್ಯು ಅಪ್ಪಿಕೊಂಡರು

ಅಪಘಾತವಾದ(Accident) ಸಂದರ್ಭದಲ್ಲಿ ರಸ್ತೆ ಬದಿ ಇದ್ದ ಡಾಬಾದವರಿಂದ ರಕ್ಷಣಾ ಕಾರ್ಯ ನಡೆದಿದೆ. ಘಟನೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರಿಗೆ ಗಂಭಿರವಾದ ಗಾಯಗಳಾಗಿವೆ. ಅಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಆಸ್ಪತ್ರೆಯಲ್ಲಿ(Hospital) ದಾಖಲಿಸಿ ಚಕಿತ್ಸೆ ಕೊಡಿಸಲಾಗುತ್ತಿದೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 

ಬಸ್‌, ಬೈಕ್‌ ಮಧ್ಯೆ ಮುಖಾಮುಖಿ ಡಿಕ್ಕಿ: ಇಬ್ಬರು ಸಾವು

ಆಲಮಟ್ಟಿ(Almatti): ಬೈಕ್‌ ಹಾಗೂ ಖಾಸಗಿ ಬಸ್‌ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ(Accident) ಇಬ್ಬರು ಸಾವನ್ನಪ್ಪಿದ ಘಟನೆ ಆಲಮಟ್ಟಿ-ನಿಡಗುಂದಿ ರಸ್ತೆಯ ರಾಷ್ಟ್ರೀಯ ಹೆದ್ದಾರಿ-13ರ ಗಂಗಾ ಇಂಟರ್‌ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ ಬಳಿ ಫೆ.17 ರಂದು ನಡೆದಿತ್ತು. ಮೃತರಿಬ್ಬರು ನಿಡಗುಂದಿ ತಾಲೂಕಿನ ಅಬ್ಬಿಹಾಳ ಗ್ರಾಮದ ಸುನೀಲ ಮಲ್ಲಪ್ಪ ಮಂಕಣಿ (24) ಹಾಗೂ ಯಲ್ಲನಗೌಡ ಬಸನಗೌಡ ಮಂಕಣಿ (23) ಎಂದು ಗುರುತಿಸಲಾಗಿತ್ತು. 

ಬೆಂಗಳೂರಿಗೆ(Bengaluru) ತೆರಳುತ್ತಿದ್ದ ಖಾಸಗಿ ಬಸ್‌(Private Bus) ಹಾಗೂ ಬೈಕ್‌(Bike) ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿ ಈ ಘಟನೆ ಸಂಭವಿಸಿದೆ. ಆಲಮಟ್ಟಿಯಿಂದ(Almatti) ಮರಳಿ ತಮ್ಮೂರು ಅಬ್ಬಿಹಾಳಕ್ಕೆ ತೆರಳುತ್ತಿದ್ದ ಬೈಕ್‌, ವಿಜಯಪುರದಿಂದ(Vijayapura) ಬೆಂಗಳೂರಗೆ ಹೊರಟಿದ್ದ ಖಾಸಗಿ ಬಸ್‌ ಮಧ್ಯೆ ಈ ಅಪಘಾತ ಸಂಭವಿಸಿತ್ತು. ಈ ಕುರಿತು ನಿಡಗುಂದಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಅರುಣಕುಮಾರ ಕೋಳೂರ, ಸಿಪಿಐ ಸೋಮಶೇಖರ್‌ ಜುಟ್ಟಲ, ಪಿಎಸ್‌ಐ ಚಂದ್ರಶೇಖರ ಹೆರಕಲ್ಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. 

ಲಾರಿ-ಕಾರು ಡಿಕ್ಕಿಯಾಗಿ ನಗರದ ನಾಲ್ವರು ವಿದ್ಯಾರ್ಥಿಗಳು ಸಾವು

ಹೊಸಕೋಟೆ(Hosakote): ಲಾರಿ ಮತ್ತು ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೆಂಗಳೂರಿನ ನಾಲ್ವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹೊಸಕೋಟೆ ಪೊಲೀಸ್‌ ಠಾಣಾ ವ್ಯಾಪ್ತಿಯ ಅಟ್ಟೂರು ಗೇಟ್‌ ಬಳಿ ಫೆ.16 ರ ನಸುಕಿನ 2 ಗಂಟೆ ಸುಮಾರಿಗೆ ನಡೆದಿತ್ತು. 

Road Accidents: ಬೆಂಗ್ಳೂರಲ್ಲಿ ಅಪಘಾತ ತಗ್ಗಿಸಲು ಅಭಿಯಾನ: ಸಚಿವ ಶ್ರೀರಾಮುಲು

ಬೆಂಗಳೂರಿನ ಗಾರ್ಡನ್‌ ಸಿಟಿ ಕಾಲೇಜಿನ ಎಂಬಿಎ ವಿದ್ಯಾರ್ಥಿಗಳಾದ ವೆಂಕಟ್‌, ಸಿರಿಲ್‌, ವೈಷ್ಣವಿ ಹಾಗೂ ಭರತ್‌ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅಂಕಿರೆಡ್ಡಿ ಹಾಗೂ ಮುತ್ತುಕೃಷ್ಣ ತೀವ್ರ ಗಾಯಗೊಂಡಿದ್ದರು.

ವಿದ್ಯಾರ್ಥಿಗಳು ಕೋಲಾರದ ನರಸಾಪುರ ಬಳಿ ಇರುವ ಕಾಫಿ ಡೇಗೆ ಆಗಮಿಸಿದ್ದರು. ಬೆಂಗಳೂರಿನತ್ತ ವಾಪಸ್‌ ತೆರಳುವ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಕೋಲಾರ-ಬೆಂಗಳೂರು 75ರ ಅಟ್ಟೂರು ಗೇಟ್‌ ಬಳಿ ಕಾರು ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದು ರಸ್ತೆ ದಾಟಿ ಎದುರುಗಡೆ ಬರುತ್ತಿದ್ದ ಲಾರಿಗೆ ರಭಸವಾಗಿ ಡಿಕ್ಕಿ ಹೊಡೆದಿತ್ತು. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿ ಸಿಲುಕಿದ್ದ ಮೃತ ದೇಹಗಳನ್ನು ಹೊರತೆಗೆಯಲು ಪೊಲೀಸರು ಹರಸಾಹಸ ಪಡುವಂತಾಗಿತ್ತು. ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಲಕ್ಷ್ಮೇ ಗಣೇಶ್‌, ವೃತ್ತ ನಿರೀಕ್ಷಕ ಮಂಜುನಾಥ್‌ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೊಸಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.