ವಾಪಸ್ ಮನೆಗೆ ಬರುವಾಗ ನಂದಮ್ಮ ಅವರಿಗೆ ಬಸ್ಸಿನಲ್ಲೇ ಎದೆನೋವು ಕಾಣಸಿಕೊಂಡಿತ್ತು. ತಕ್ಷಣವೇ ಸಮೀಪದ ಕಲ್ಲದೇವನಹಳ್ಳಿ ಆರೋಗ್ಯ ಕೇಂದ್ರಕ್ಕೆ ದಾಖಲಿಸುವಾಗಲೇ ಸಾವನ್ನಪ್ಪಿದ ನಂದಮ್ಮ 

ಯಾದಗಿರಿ(ಮೇ.27):  ಬಸ್‌ನಲ್ಲಿ ಪ್ರಯಾಣಿಸುವಾಗಲೇ ಹೃದಯಾಘಾತದಿಂದ ವೃದ್ಧೆಯೊಬ್ಬಳು ಸಾವನ್ನಪ್ಪಿದ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕಲ್ಲದೇನಹಳ್ಳಿಯಲ್ಲಿ ಇಂದು(ಶನಿವಾರ) ನಡೆದಿದೆ. ನಂದಮ್ಮ ಹೊರಟ್ಟಿ(60) ಎಂಬಾಕೆಯೇ ಮೃತಪಟ್ಟ ದುರ್ದೈವಿಯಾಗಿದ್ದಾಳೆ. 

ಹುಣಸಗಿ ತಾಲೂಕಿನ ವಜ್ಜಲ ಗ್ರಾಮದವರಾದ ನಂದಮ್ಮ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಕಲಬುರಗಿ ನಗರದ ಆಸ್ಪತ್ರೆಗೆ ಹೋಗಿದ್ದಳು. ನಂದಮ್ಮ ಸುರಪುರದಿಂದ ಸ್ವಂತ ಗ್ರಾಮ ವಜ್ಜಲಕ್ಕೆ ಬಸ್‌ನಲ್ಲಿ ಬರುತ್ತಿದ್ದಳಂತೆ. 

ಬರ್ತ್‌ಡೇ ದಿನವೇ ಹಾರ್ಟ್‌ಅಟ್ಯಾಕ್ ಆಗಿ ಬಾಲಕ ಸಾವು, ಮೃತದೇಹದ ಪಕ್ಕದಲ್ಲೇ ಕೇಕ್ ಕತ್ತರಿಸಿದ ಪೋಷಕರು!

ವಾಪಸ್ ಮನೆಗೆ ಬರುವಾಗ ನಂದಮ್ಮ ಅವರಿಗೆ ಬಸ್ಸಿನಲ್ಲೇ ಎದೆನೋವು ಕಾಣಸಿಕೊಂಡಿತ್ತು. ತಕ್ಷಣವೇ ಸಮೀಪದ ಕಲ್ಲದೇವನಹಳ್ಳಿ ಆರೋಗ್ಯ ಕೇಂದ್ರಕ್ಕೆ ದಾಖಲಿಸುವಾಗಲೇ ನಂದಮ್ಮ ಸಾವನ್ನಪ್ಪಿದ್ದಾಳೆ. ನಂತರ ನಂದಮ್ಮ ಮೃತಪಟ್ಟಿರುವುದಾಗಿ ವೈದ್ಯರು ಕುಟುಂಸ್ಥರಿಗೆ ತಿಳಿಸಿದ್ದಾರೆ.