Asianet Suvarna News Asianet Suvarna News

ಮಳೆಹಾನಿ ಪ್ರದೇಶಕ್ಕೆ ಅಧಿಕಾರಿಗಳು ಭೇಟಿ ನೀಡಿ; ಶಾಸಕ ಅಮೃತ ದೇಸಾಯಿ ಸೂಚನೆ

  • ಮಳೆಹಾನಿ ಪ್ರದೇಶಕ್ಕೆ ಅಧಿಕಾರಿಗಳು ಭೇಟಿ ನೀಡಿ
  • ಅಧಿಕಾರಿಗಳಿಗೆ ಶಾಸಕ ಅಮೃತ ದೇಸಾಯಿ ಸೂಚನೆ
  • ರೈತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ತಾಕೀತು
Officials visit rain damaged areas MLA Amrita Desai notice dharwad rav
Author
First Published Oct 15, 2022, 12:15 PM IST

ಧಾರವಾಡ (ಅ.15) : ಸತತ ಮಳೆಯಿಂದಾಗಿ ತಾಲೂಕಿನಾದ್ಯಂತ ಸೋಯಾಬಿನ್‌, ಹೆಸರು ಸೇರಿದಂತೆ ಇತರೆ ಬೆಳೆಗಳಿಗೆ ಹಾನಿ ಸಂಭವಿಸಿದೆ. ಅ​ಧಿಕಾರಿಗಳು ಕೂಡಲೇ ಬೆಳೆಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಶಾಸಕ ಅಮೃತ ದೇಸಾಯಿ ತಿಳಿಸಿದರು.

ಶಾಸಕ ಅಮೃತ ದೇಸಾಯಿಗೆ ಇನ್ನೂ ವಯಸ್ಸಿದೆ; ನನಗೆ ಸಪೋರ್ಟ್‌ ಮಾಡಲಿ - ತವನಪ್ಪ ಅಷ್ಟಗಿ

ಶುಕ್ರವಾರ ಜಿಲ್ಲಾಧಿ​ಕಾರಿ ಕಚೇರಿಯ ಸಭಾಭವನದಲ್ಲಿ ಮಳೆಯಿಂದ ಧಾರವಾಡ ತಾಲೂಕಿನಲ್ಲಿ ಉಂಟಾದ ಬೆಳೆಹಾನಿ ಕುರಿತು ಜರುಗಿದ ಸಭೆಯಲ್ಲಿ ಮಾತನಾಡಿದರು. ಮಳೆಯಿಂದಾಗಿ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳು ಹಾಗೂ ತಾಲೂಕಿನ ರೈತರ ಹೊಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಹ ಬಹಳಷ್ಟುಹಾಳಾಗಿವೆ. ಮಳೆಯಿಂದ ಹಾನಿಯಾದ ಮನೆಗಳನ್ನು ತ್ವರಿತವಾಗಿ ಪರಿಶೀಲನೆ ನಡೆಸಿ, ಸೂಕ್ತ ಪರಿಹಾರ ನೀಡಬೇಕು ಎಂದರು.

ಜಿಲ್ಲಾಧಿ​ಕಾರಿ ಗುರುದತ್ತ ಹೆಗಡೆ ಮಾತನಾಡಿ, ಜಿಲ್ಲಾಮಟ್ಟದ ಅ​ಧಿಕಾರಿಗಳು ತಾಲೂಕು ಮಟ್ಟದ ಅಧಿ​ಕಾರಿಗಳ ಜತೆ ಚರ್ಚಿಸಿ ಬೆಳೆ ಮತ್ತು ಮನೆ ಹಾನಿಗೆ ಸಂಬಂ​ಧಿಸಿದಂತೆ ಸೂಕ್ತ ಪರಿಶೀಲನೆ ನಡೆಸಲಾಗಿದೆ. ಪರಿಹಾರ ಹಣ ಅರ್ಹ ಫಲಾನುಭವಿಗಳ ಖಾತೆಗೆ ಜಮೆಯಾಗುವಂತೆ ಕ್ರಮವಹಿಸಲಾಗುತ್ತಿದೆ. ಮನೆ ಮತ್ತು ಬೆಳೆ ಹಾನಿಯ ವಿಷಯದಲ್ಲಿ ಅಧಿ​ಕಾರಿಗಳು ನಿರ್ಲಕ್ಷ್ಯ ತೋರಿದಲ್ಲಿ ಕ್ರಮಕೈಗೊಳ್ಳುವುದಾಗಿ ಎಂದು ಎಚ್ಚರಿಸಿದರು.

ಮಳೆಯಿಂದಾಗಿರುವ ಹಾನಿಗಳ ಕುರಿತು ಬೆಳೆ, ಮನೆ ಹಾಗೂ ರಸ್ತೆ ಸಮೀಕ್ಷೆ ಕುರಿತು ಅಧಿ​ಕಾರಿಗಳ ತಂಡ ರಚಿಸಿ ತಕ್ಷಣ ಕಾರ್ಯಪ್ರವೃತ್ತರಾಗುವಂತೆ ಕ್ರಮ ವಹಿಸಲಾಗಿದೆ. ತಹಸೀಲ್ದಾರ್‌ರು ಮನೆ ಅಥವಾ ಬೆಳೆ ಹಾನಿ ಕುರಿತು ದೂರು ಬಂದಲ್ಲಿ ತಕ್ಷಣ ಖುದ್ದು ಭೇಟಿ ನೀಡಿ ಪರಿಹರಿಸಲು ಸೂಚಿಸಲಾಗಿದೆ. ಪರಿಹಾರ ಜಮೆ ಮಾಡುವಲ್ಲಿ ಅತ್ಯಂತ ಕರಾರುವಕ್ಕಾಗಿ ಕೆಲಸ ಮಾಡುವಂತೆ ಎಲ್ಲ ಹಂತದ ಅಧಿ​ಕಾರಿಗಳಿಗೆ ನಿರ್ದೇಶನ ನೀಡಲಾಗುತ್ತಿದೆ. ಇಷ್ಟಾಗಿಯೂ ಯಾವುದೇ ಲೋಪ ಕಂಡು ಬಂದಲ್ಲಿ ಅಥವಾ ಸಾರ್ವಜನಿಕ ದೂರುಗಳು ತನಿಖೆಯಲ್ಲಿ ಸತ್ಯಾಸತ್ಯತೆ ಕಂಡುಬಂದರೆ ಕಠಿಣ ಕ್ರಮಕೈಗೊಳ್ಳಲಾಗುವುದೆಂದು ಜಿಲ್ಲಾಧಿ​ಕಾರಿ ತಿಳಿಸಿದರು.

ಧಾರವಾಡದಲ್ಲಿ ಹೆಸರು ಹಾಗೂ ಉದ್ದಿನ ಕಾಳು ಖರೀದಿ ಕೇಂದ್ರ ಆರಂಭ

ಚರ್ಮಗಂಟಿಗೆ ಚಿಕಿತ್ಸೆ:

ತಾಲೂಕಿನ ವಿವಿಧೆಡೆ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿರುವ ವರದಿಯಾಗಿದೆ. ಮಾರಡಗಿ, ಹೆಬ್ಬಳ್ಳಿ, ಚಂದನಮಟ್ಟಿಗ್ರಾಮದಲ್ಲಿ ಹೆಚ್ಚು ಕಾಣಿಸಿಕೊಂಡಿದೆ. ತುರ್ತು ಕ್ರಮವಹಿಸಿ ಅವುಗಳನ್ನು ರಕ್ಷಿಸಬೇಕಿದೆ. ಪಶು ಸಂಗೋಪನೆ ಇಲಾಖೆ ಅ​ಧಿಕಾರಿಗಳು ಜಾನುವಾರುಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಲಸಿಕೆ ನೀಡಬೇಕು ಎಂದು ಶಾಸಕ ಅಮೃತ ದೇಸಾಯಿ ಸೂಚಿಸಿದರು. ಸಭೆಯಲ್ಲಿ ಪಂಚಾಯತ್‌ ರಾಜ್‌ ಇಲಾಖೆ ಎಂಜಿನಿಯರ್‌ ಎಸ್‌.ಎನ್‌. ಗೌಡರ್‌, ಪಿಡಬ್ಲ್ಯೂಡಿ ಎಂಜಿನಿಯರ್‌ ಡಾ. ಮುರಳೀಧರರಾವ್‌, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಉಮೇಶ ಕೊಂಡಿ, ತಹಸೀಲ್ದಾರ್‌ ಸಂತೋಷ ಹಿರೇಮಠ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಇದ್ದರು.

Follow Us:
Download App:
  • android
  • ios