ಬೆಳಗಾವಿ(ಡಿ.07): ವಿವಿಧ ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಂದೆ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಈಗಲೇ ನಿವಾರಿಸುವ ಕಲ್ಪನೆಯಿಂದ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜಂಟಿ ಸಮೀಕ್ಷೆ ನಡೆಸಿದ್ದಾರೆ. 

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಕೆಲಸ ನಡೆಯುವ ಪ್ರದೇಶ ವೀಕ್ಷಿಸಿದ ಅಧಿಕಾರಿಗಳು, ಒಮ್ಮೆ ಕೆಲಸ ಪೂರ್ಣಗೊಂಡ ನಂತರ ಮತ್ತೆ ಮತ್ತೆ ಅಗೆಯುವ ಸಂದರ್ಭವನ್ನು ತಪ್ಪಿಸಲು ಸಮಾಲೋಚನೆ ನಡೆಸಿದ್ದಾರೆ. ವಿವಿಧ ಇಲಾಖೆಗಳಿಂದ ಮುಂದಿನ ದಿನಗಳಲ್ಲಿ ಯಾವ ಯಾವ ಯೋಜನೆಗಳು ಜಾರಿಯಾಗಲಿವೆ ಎನ್ನುವುದರ ಕುರಿತು ಚರ್ಚಿಸಿ, ಅದಕ್ಕೆ ತಕ್ಕಂತೆ ಈಗಲೇ ಭೂಗತ ಕೇಬಲ್ ಗಳನ್ನು ಅಳವಡಿಸುವುದು ಸೇರಿದಂತೆ ಎಲ್ಲ ರೀತಿಯ ಮೂಲಭೂತ ಕೆಲಸಗಳನ್ನು ಪೂರ್ಣಗೊಳಿಸಲು ನಿರ್ಧರಿಸಲಾಯಿತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸ್ಮಾರ್ಟ್ ಸಿಟಿ ಯೋಜನೆಯ ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಸಮಗ್ರ ವಿವರವನ್ನು ಸ್ಮಾರ್ಟ್‌ಸಿಟಿ ಎಂಡಿ ಶಶಿಧರ ಕುರೇರ ಅವರು ಎಲ್ಲ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಶೀಘ್ರವಾಗಿ ತಮ್ಮ ತಮ್ಮ ಇಲಾಖೆಯ ಕಾರ್ಯ ಯೋಜನೆಯ ಮಾಹಿತಿ ಒದಗಿಸುವಂತೆ ತಿಳಿಸಿದರು. 

ಬೆಳಗಾವಿ ನಗರದ ವಿವಿಧೆಡೆ ನಡೆಯುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳು ಬೆಳಗಾವಿ ಸ್ಮಾರ್ಟ್‌ಸಿಟಿ ಪಿಎಂಸಿ ಅವ್ಯ ವಹಾರ, ಅನುಭವ ಕೊರತೆ, ಇಂಟಿಗ್ರೇಟೆಡ್ ಕಮಾಂಡೆಂಟ್ ಕಂಟ್ರೋಲ್ ಸೆಂಟರ್ ಗುತ್ತಿಗೆದಾರರ ವಿರುದ್ಧ ಹಲವಾರು ಬಾರಿ ದೂರು ನೀಡಲಾಗಿತ್ತು. 

ಬೆಳಗಾವಿ ಸ್ಮಾರ್ಟ್‌ಸಿಟಿಯ ಅನುದಾನದ 1000 ಕೋಟಿ ಅನುದಾನದಲ್ಲಿ 350 ಕೋಟಿ ಅನುದಾನ ಸ್ಮಾರ್ಟ್ ರಸ್ತೆಗೆ ದುಂದು ವೆಚ್ಚ ಮಾಡಿದ್ದಾರೆ ಎಂದು ಬಿಜೆಪಿ ನಗರ ಘಟಕದ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಟೋಪ ಣ್ಣವರ ಕೇಂದ್ರ ನಗರಾಭಿವೃದ್ಧಿ ಇಲಾಖೆಗೆ ದೂರು ಸಲ್ಲಿಸಿದ್ದರು. ಈ ದೂರಿನ ಆಧಾರದ ಮೇಲೆ ತನಿಖೆ ನಡೆಸಿ ಕ್ರಮ ಜರುಗಿಸುವಂತೆ ಬೆಳಗಾವಿ ಸ್ಮಾರ್ಟ್‌ಸಿಟಿ ಕಂಪನಿಗೆ ಆದೇಶ ಹೊರಡಿಸಿದೆ ಎಂದು ರಾಜಕುಮಾರ ಟೋಪಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಪಿಎಂಸಿ ಹಾಗೂ ಬೆಳಗಾವಿ ಸ್ಮಾರ್ಟ್‌ಸಿಟಿ ಒಪ್ಪಂದದ ಪ್ರಕಾರ ರಸ್ತೆ ತಜ್ಞರು ಇರಬೇಕು. ಆದರೆ ರಸ್ತೆ ತಜ್ಞ ಇಲ್ಲದೆ ಸ್ಮಾರ್ಟ್ ರಸ್ತೆ ಯ ಮೇಲೆ 350 ವೆಚ್ಚ ಮಾಡಿ ಸ್ಮಾರ್ಟ್‌ಸಿಟಿಯ ಸಂಪೂರ್ಣ ಹಾಳು ಮಾಡಿದ್ದಾರೆ. ಸ್ಮಾರ್ಟ್‌ಸಿಟಿ ರಸ್ತೆಯ ಕಾಮಗಾರಿಗಳು ಗುತ್ತಿಗೆದಾರರು ಸಿದ್ದಪಡಿಸಿದ ರಸ್ತೆ ನೀಲನಕ್ಷೆಯನ್ನು ಪಿಎಂಸಿಯ ತಂಡದ ನಾಯಕ ಒಪ್ಪಿಗೆ ನೀಡುತ್ತಿದ್ದಾರೆ. ಇದು ಅವೈಜ್ಞಾನಿಕ. ಪಿಎಂಸಿ ಹೊರಗಿನ ಕಂಪನಿ ಇವರು ಸ್ಮಾರ್ಟ್‌ಸಿಟಿಯ ಅನುದಾನ ದುರ್ಬಳಕೆ ಮಾಡಿಕೊಂಡು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಪಿಎಂಸಿಯಲ್ಲಿರುವ ತಂಡಗಳಿಗೆ ಯಾವುದೇ ಸ್ಮಾರ್ಟ್‌ಸಿಟಿ ಜ್ಞಾನವಿಲ್ಲ. ಕಮಾಂಡೆಂ ಟ್ ಆ್ಯಂಡ್ ಕಂಟ್ರೋಲ್ ಸೆಂಟರ್ ನಲ್ಲಿ 45 ಕೋಟಿ ವೆಚ್ಚದ ಕಾಮಗಾರಿಗೆ ತಿಳಿವಳಿಕೆ ಇಲ್ಲದ ವ್ಯಕ್ತಿಯನ್ನು ನಿಯುಕ್ತಿ ಮಾಡಿದ್ದಾರೆ. ಅವರು ಪ್ರೊಫೆಸರ್ ಒಬ್ಬರ ಹತ್ತಿರ ಸಲಹೆ ಕೇಳುತ್ತಿದ್ದಾರೆ. ಪರಿಶೀಲನೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಲು ದೂರು ನೀಡಿದ್ದರು.