Asianet Suvarna News Asianet Suvarna News

ರೋಗದ ಭೀತಿ: ನದಿಯಲ್ಲಿನ ನೀರು ಖಾಲಿ ಮಾಡಿಸಿದ ಅಧಿಕಾರಿಗಳು

ನೀರು ಕುಡಿಯುವುದರಿಂದ ಜನರು ಆನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇತ್ತು. ಹೀಗಾಗಿ ನೀರನ್ನು ಖಾಲಿ ಮಾಡಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡ ಅಧಿಕಾರಿಗಳು. 

Officials Emptied the Water in the River For Fear of Disease at Chittapur in Kalaburagi grg
Author
First Published Jun 4, 2023, 1:27 PM IST

ಚಿತ್ತಾಪುರ(ಜೂ.04):  ಚಿತ್ತಾಪುರ ಪಟ್ಟಣದ ಹಾಗೂ ನದಿ ದಂಡೆಯ ಗ್ರಾಮಗಳ ಕುಡಿಯುವ ನೀರಿನ ಜೀವ ಜಲವಾಗಿರುವ ಕಾಗೀಣಾ ನದಿಯಲ್ಲಿ ಶೇಖರಣೆಗೊಂಡ ನೀರು ಕಲುಷಿತಗೊಂಡು ಸಾಂಕ್ರಾಮಿಕ ರೋಗದ ಭೀತಿಯ ಕುರಿತಾಗಿ ಕನ್ನಡಪ್ರಭ ಪತ್ರಿಕೆಯಲ್ಲಿ ಜೂ.1ರಂದು ಪ್ರಕಟಗೊಂಡಿದ್ದ ಸುದ್ದಿಗೆ ಸ್ಪಂಧಿಸಿದ ಅಧಿಕಾರಿಗಳು ಶೇಖರಿಸಿಟ್ಟಿದ್ದ ನೀರನ್ನು ಹರಿ ಬಿಟ್ಟು ಜನರ ಆರೋಗ್ಯದ ಕುರಿತು ಮುನ್ನೆಚ್ಚರಿಕೆ ವಹಿಸಿದ್ದಾರೆ.

ಬೇಸಿಗೆ ಕಾಲದಲ್ಲಿ ಕ್ಷೇತ್ರದ ಜನರಿಗೆ ಕುಡಿಯುವ ನೀರಿಗೆ ತೊಂದರೆ ಉಂಟಾಗಬಾರದು ಎಂದು ಕ್ಷೇತ್ರದ ಶಾಸಕರಾಗಿರುವ ಪ್ರಿಯಾಂಕ್‌ ಖರ್ಗೆ ಸೂಚನೆ ಮೇರೆಗೆ ಕಾಗೀಣಾ ನದಿಯಲ್ಲಿ ನೀರು ಶೇಖರಣೆಗೊಳಿಸಲಾಗಿತ್ತು. ಆದರೆ, ಆ ನದಿಯಲ್ಲಿ ಬೆಳೆದಿರುವ ಹುಲ್ಲು, ಜೇಕು ಮತ್ತು ಗಿಡಗಳಿಂದ ನದಿಯಲ್ಲಿನ ನೀರು ಹಸಿರು ಬಣ್ಣಕ್ಕೆ ತಿರುಗಿತ್ತು.

ಒಡಿಶಾ ದುರ್ಘಟನೆ: ನಮಗೆ ಸನ್ಮಾನ ಬೇಡವೆಂದ ಖಂಡ್ರೆ, ರಹೀಂ ಖಾನ್

ಇದೇ ನೀರನ್ನು ನದಿ ದಂಡೆಯ ಅನೇಕ ಗ್ರಾಮಗಳ ಜನರು ಮತ್ತು ಚಿತ್ತಾಪುರ ಪಟ್ಟಣದ ಶುದ್ಧ ಕುಡಿವ ನೀರಿನ ಘಟಕಕ್ಕೆ ಪೂರೈಕೆಯಾಗಿ ಅಲ್ಲಿ ಶುದ್ಧೀಕರಣಗೊಂಡರು ನೀರಿನಲ್ಲಿ ವಾಸನೆ ಬರುತ್ತಿತ್ತು. ಈ ನೀರು ಕುಡಿಯುವುದರಿಂದ ಜನರು ಆನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇತ್ತು. ಹೀಗಾಗಿ ಅಧಿಕಾರಿಗಳು ನೀರನ್ನು ಖಾಲಿ ಮಾಡಿ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Follow Us:
Download App:
  • android
  • ios