ತುಮಕೂರು: ಜನತಾ ದರ್ಶನ ಸಭೆಗೆ ಕೆಎಸ್ಆರ್‌ಟಿಸಿ ಬಸ್‌ನಲ್ಲೇ ಬಂದ ಅಧಿಕಾರಿಗಳು..!

ಹುಲಿಯೂರುದುರ್ಗ ಗ್ರಾಮವು ತುಮಕೂರು ಜಿಲ್ಲಾ ಕೇಂದ್ರದಿಂದ 70 ಕಿಲೋ ಮೀಟರ್ ದೂರವಿದ್ದು, ಪ್ರತಿಯೊಬ್ಬ ಅಧಿಕಾರಿಗಳು ಪ್ರತ್ಯೇಕವಾಗಿ ಕಾರಿನಲ್ಲಿ ಪ್ರಯಣಿಸಿದ್ರೆ ಸಾವಿರಾರು ರೂಪಾಯಿ ವೆಚ್ಚವಾಗುತ್ತಿತ್ತು. ಬರ ಪರಿಸ್ಥಿತಿ ನಡುವೆ ಈ ರೀತಿಯ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಹೋಗಲು ನಿರ್ಧರಿಸಿದ ಜಿಲ್ಲಾಧಿಕಾರಿ ಶ್ರೀನಿವಾಸ್ 

Officials Came to the Janata Darshan Meeting in KSRTC Bus in Tumakuru grg

ವರದಿ: ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ತುಮಕೂರು 

ತುಮಕೂರು(ಅ.31): ಜನರ ಸಮಸ್ಯೆ ಆಲಿಸಲು ಜಿಲ್ಲಾಮಟ್ಟದ ಅಧಿಕಾರಿಗಳ ತಂಡ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಬಂದು ಅಚ್ಚರಿ ಮೂಡಿಸಿದ ಘಟನೆ ತುಮಕೂರಿನಲ್ಲಿ ನಡೆದಿದೆ. 

ಇಂದು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಜನತಾದರ್ಶನ ಸಭೆ ಏರ್ಪಡಿಸಲಾಗಿತ್ತು. ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗದ ಹುಲಿಯೂರಮ್ಮ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು, ಜನತಾ ದರ್ಶನ ಸಭೆಗೆ ಹೋಗಲು ಜಿಲ್ಲಾ ಮಟ್ಟದ 60ಕ್ಕೂ ಹೆಚ್ಚು ಅಧಿಕಾರಿ ಸಿದ್ಧತೆ ನಡೆಸಿದ್ರು. ಪ್ರತಿಯೊಬ್ಬರು ತಮ್ಮ ತಮ್ಮ ಇಲಾಖೆಯ ವಾಹನದಲ್ಲಿ ಹೋಗಲು ತಯಾರಾಗಿದ್ದರು, ಆದರೆ ವಿನೂತನ ಚಿಂತನೆ ನಡೆಸಿದ ಜಿಲ್ಲಾಧಿಕಾರಿ ಶ್ರೀನಿವಾಸ್ ಎಲ್ಲರೂ ಒಟ್ಟಾಗಿ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಹೋಗುವ ನಿರ್ಧಾರ ಮಾಡಿದ್ರು. 

ತುಮಕೂರು: ಮಹಿಳಾ ಪೊಲೀಸ್ ಅಧಿಕಾರಿ ಎದುರು ಡ್ರ್ಯಾಗನ್‌ ಹಿಡಿದು ಪುಡಿರೌಡಿಯ ಹುಚ್ಚಾಟ

ಹುಲಿಯೂರುದುರ್ಗ ಗ್ರಾಮವು ತುಮಕೂರು ಜಿಲ್ಲಾ ಕೇಂದ್ರದಿಂದ 70 ಕಿಲೋ ಮೀಟರ್ ದೂರವಿದ್ದು, ಪ್ರತಿಯೊಬ್ಬ ಅಧಿಕಾರಿಗಳು ಪ್ರತ್ಯೇಕವಾಗಿ ಕಾರಿನಲ್ಲಿ ಪ್ರಯಣಿಸಿದ್ರೆ ಸಾವಿರಾರು ರೂಪಾಯಿ ವೆಚ್ಚವಾಗುತ್ತಿತ್ತು. ಬರ ಪರಿಸ್ಥಿತಿ ನಡುವೆ ಈ ರೀತಿಯ ದುಂದು ವೆಚ್ಚಕ್ಕೆ ಕಡಿವಾಣ ಹಾಕಲು ನಿರ್ಧರಿಸಿದ ಜಿಲ್ಲಾಧಿಕಾರಿ ಶ್ರೀನಿವಾಸ್ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಹೋಗಲು ನಿರ್ಧಾರ ಮಾಡಿದ್ರು. ಜಿಲ್ಲಾಧಿಕಾರಿ ಜೊತೆಗೆ ಎಡಿಸಿ ಶಿವಾನಂದ್,  ಜಿಲ್ಲಾ ಪಂಚಾಯ್ತಿ ಸಿಇಒ ಪ್ರಭು,  ಡಿಎಫ್ಓ ಅನುಪಮ, ಎಸಿ ಗೌರವ್ ಕುಮಾರ್ ಶೆಟ್ಟಿ ಸೇರಿದಂತೆ ಎಲ್ಲಾ ಅಧಿಕಾರಿಗಳು ಒಟ್ಟಾಗಿ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಪ್ರಯಣಿಸಿದ್ರು.

Latest Videos
Follow Us:
Download App:
  • android
  • ios