ಅಧಿಕಾರಿಗಳು ಹಾಗೂ ರಾಜಕಾರಣಿಗಳು ಮಧ್ಯ ರಾತ್ರಿವರೆಗೂ ಕೂಡ ಗುಂಡು ಪಾರ್ಟಿ ನಡೆಸಿದ್ದಾರೆ. ಕಮಿಷನ್ ದುಡ್ಡಲ್ಲಿ ಸರ್ಕಾರಿ ಜಾಗದಲ್ಲಿ ಪಾರ್ಟಿ ನಡೆದಿದೆ. 

ಕುಣಿಗಲ್‌ [ಸೆ.16]:  ಪಿಡಬ್ಲ್ಯೂಡಿ ಅಧಿಕಾರಿಗಳು ಗುತ್ತಿಗೆದಾರರಗಳಿಂದ ಬಂದ ಕಮಿಷನ್‌ ದುಡ್ಡಲ್ಲಿ ರಾಜಕಾರಣಿಗಳು ಸೇರಿದಂತೆ ಇತರ ಅಧಿಕಾರಿಗಳಿಗೆ ಗುಂಡು ಪಾರ್ಟಿ ಕೊಟ್ಟಘಟನೆ ಕುಣಿಗಲ್‌ ತಾಲೂಕಿನ ಮಾರ್ಕೋನಹಳ್ಳಿ ಪ್ರವಾಸಿ ಮಂದಿರದಲ್ಲಿ ತಡರಾತ್ರಿವರೆಗೂ ನಡೆದಿದೆ.

ಈ ಹಿಂದೆ ಕುಣಿಗಲ್‌ ಪಟ್ಟಣದ ಪಿಡಬ್ಲ್ಯುಡಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂಜಿನಿಯರ್‌ ದಿವಾಕರ್‌ ಸೇರಿದಂತೆ ಹಲವಾರು ಅಧಿಕಾರಿಗಳು ಈ ಕಚೇರಿಯಿಂದ ವರ್ಗಾವಣೆಗೊಂಡಿದ್ದರು. ಅಂತಹ ವ್ಯಕ್ತಿಗಳಿಗಾಗಿ ಕುಣಿಗಲ್‌ ಪಟ್ಟಣದ ಮಾರ್ಕೋನಹಳ್ಳಿ ಪ್ರವಾಸಿ ಮಂದಿರದಲ್ಲಿ ವಿಶೇಷವಾಗಿ ಬಾಡೂಟ ಗುಂಡು ಪಾರ್ಟಿಯನ್ನು ಏರ್ಪಡಿಸಲಾಗಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇಲಾಖೆಯಲ್ಲಿ ಬರುವ ಕಮಿಷನ್‌ ಹಣವನ್ನು ಸಂಗ್ರಹಿಸಿ ಅಧಿಕಾರಿಗಳು ಅ ಹಣದಿಂದ ಇತರ ಅಧಿಕಾರಿಗಳಿಗೆ ಗುತ್ತಿಗೆದಾರರಿಗೆ ಗುಂಡು ಪಾರ್ಟಿ ಕೊಟ್ಟಿದ್ದಾರೆ ಎಂದು ಸಾರ್ವಜನಿಕರ ಆರೋಪವಿದೆ.

ಮಾರ್ಕೋನಹಳ್ಳಿ ಜಲಾಶಯದ ಆವರಣದಲ್ಲಿ ಇರುವಂತಹ ಪ್ರವಾಸಿ ಮಂದಿರ ಸೇರಿದಂತೆ ಜಲಾಶಯಕ್ಕೆ ಇತ್ತೀಚೆಗೆ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ. ಇದ್ಯಾವುದರ ಪರಿವೇ ಇಲ್ಲದೆ ಪೊಲೀಸ್‌ ಅಧಿಕಾರಿಗಳು ಸೇರಿದಂತೆ ತಾಲೂಕಿನ ಜವಾಬ್ದಾರಿ ಇರುವ ಕೆಲವು ರಾಜಕಾರಣಿಗಳು ಗುಂಡು ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಲಾಗಿದೆ.