ಮೈಸೂರು(ಜೂ.10): ಸರ್ಕಾರಿ ರಸ್ತೆ ಇದೆ ಎಂದು ಹೇಳಿ ರೈತ ಮಹಿಳೆಯೊಬ್ಬರಿಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ಬೆಳೆಯನ್ನು ಗ್ರಾಮದ ಅಧಿಕಾರಿಗಳು ಸಂಪೂರ್ಣ ನಾಶಪಡಿಸಿದ್ದಾರೆ.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಹೋಬಳಿ ನಾಗನಹಳ್ಳಿ ಪಾಳ್ಯದ ಗ್ರಾಮದ ರೈತ ಮಹಿಳೆ ಲಕ್ಷ್ಮಮ್ಮ ಎಂಬ ಮಹಿಳೆಯ 24 ಗುಂಟೆ ಜಮೀನನ್ನು ಹೊಂದಿದ್ದು, ಇದರ ಪಕ್ಕದಲ್ಲೇ ಸರ್ಕಾರಕ್ಕೆ ಸೇರಿದ ಒಂದು ಚಿಕ್ಕ ಹಾದಿ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ 48 ಗಂಟೆಗಳಲ್ಲಿ ರಾಜ್ಯದಲ್ಲಿ ಭಾರಿ ಮಳೆ

ತಹಸೀಲ್ದಾರ್‌ ಅವರಿಂದ ಯಾವುದೇ ಆದೇಶವನ್ನು ಪಡೆಯದೇ ಏಕಾಏಕಿ ರೈತ ಮಹಿಳೆಯ ತಂಬಾಕು ಬೆಳೆಯನ್ನು ನಾಶ ಮಾಡಿರುವ ಬಗ್ಗೆ ರೈತ ಮಹಿಳೆ ಲಕ್ಷ್ಮಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ನನಗೆ ನ್ಯಾಯ ದೊರಕಿಸಬೇಕೆಂದು ಪತ್ರಿಕೆಯ ಮೂಲಕ ಅಳಲು ತೋಡಿಕೊಂಡಿದ್ದಾಳೆ.

ಆರ್‌ಐ ಧನಂಜಯ್ ಮಾತನಾಡಿ, ನಾವು ದಾರಿ ಇರುವ ಬಗ್ಗೆ ಸರ್ವೆ ಮಾಡಿ ತೋರಿಸಿದ್ದೇವೆ ಹೊರತು, ಇದನ್ನು ತೆರವುಗೊಳಿಸುವ ಯಾವುದೇ ಆದೇಶ ನೀಡಿಲ್ಲ ಎಂದು ತಿಳಿಸಿದ್ದಾರೆ.