ಗೈರಾಗಬೇಕಿದ್ದ ವಿದ್ಯಾರ್ಥಿನಿಯ ಮನವೊಲಿಸಿ ಪರೀಕ್ಷೆ ಬರೆಸಿದ ಅಧಿಕಾರಿಗಳು
ಶನಿವಾರ ನಡೆದ ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷೆಗೆ ಗೈರಾಗಬೇಕಿದ್ದ ವಿದ್ಯಾರ್ಥಿನಿಯ ಮನವೊಲಿಸಿ, ಸಾರಿಗೆ ಸೌಲಭ್ಯ ಕಲ್ಪಿಸಿ, ಪರೀಕ್ಷೆಗೆ ಹಾಜರಾಗುವಂತೆ ಮಾಡಿರುವ ಘಟನೆ ಮೈಸೂರಿನಲ್ಲಿ ಜರುಗಿದೆ.
ಮೈಸೂರು(ಜೂ.28): ಶನಿವಾರ ನಡೆದ ಎಸ್ಸೆಸ್ಸೆಲ್ಸಿ ಗಣಿತ ಪರೀಕ್ಷೆಗೆ ಗೈರಾಗಬೇಕಿದ್ದ ವಿದ್ಯಾರ್ಥಿನಿಯ ಮನವೊಲಿಸಿ, ಸಾರಿಗೆ ಸೌಲಭ್ಯ ಕಲ್ಪಿಸಿ, ಪರೀಕ್ಷೆಗೆ ಹಾಜರಾಗುವಂತೆ ಮಾಡಿರುವ ಘಟನೆ ಮೈಸೂರಿನಲ್ಲಿ ಜರುಗಿದೆ.
ಶ್ರೀರಂಗಪಟ್ಟಣ ತಾಲೂಕಿನ ಹಂಪಾಪುರ ಗ್ರಾಮದ ಸಂಗೀತ ಎಂಬಾಕೆಗೆ ಗೈರಾಗುತ್ತಿದ್ದ ವಿದ್ಯಾರ್ಥಿನಿ. ಗಣಿತ ವಿಷಯವನ್ನು ಬರೆಯಲು ಡಿ. ಬನುಮಯ್ಯ ಬಾಲಕರ ಪ್ರೌಢಶಾಲಾ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕಿದ್ದು ಶ್ರೀರಂಗಪಟ್ಟಣ ತಾಲೂಕಿನ ಹಂಪಾಪುರ ಗ್ರಾಮದ ಸಂಗೀತಳು ಗೈರು ಹಾಜರಾಗುವ ಸಂಭವವಿತ್ತು.
ಚಾಮರಾಜೇಂದ್ರ ಮೃಗಾಲಯದ ಹಲವು ಪ್ರಾಣಿಗಳ ದತ್ತು ಪಡೆದ RBI
ಇದನ್ನು ದಕ್ಷಿಣವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಸಾರಿಗೆ ನೋಡನ್ ಅಧಿಕಾರಿ ಮಂಜುನಾಥ್ ಅವರು ಪರಿಶೀಲಿಸಿ, ದೂರವಾಣಿಯ ಮೂಲಕ ವಿದ್ಯಾರ್ಥಿನಿ ಮತ್ತು ಪೋಷಕರನ್ನು ಸಂಪರ್ಕಿಸಿ, ಅವರ ಮನವೊಲಿಸಿ ವಲಯ ವ್ಯಾಪ್ತಿಯ ಖಾಸಗಿ ಶಾಲಾ ವಾಹನವನ್ನು ಬಿಇಒ ರಾಮಾರಾಧ್ಯ ಅವರ ಮಾರ್ಗದರ್ಶನದಲ್ಲೆ ಸಜ್ಜುಗೊಳಿಸಿ ವಿದ್ಯಾರ್ಥಿಯನ್ನು ಸಕಾಲದಲ್ಲಿ ಪರೀಕ್ಷೆ ಕೇಂದ್ರಕ್ಕೆ ಹಾಜರಾಗುವಂತೆ ಮಾಡಲಾಯಿತು.
ಅಲ್ಲದೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ತಂಡದ ಸದಸ್ಯರಾದ ಎಂ.ಕೆ. ನಾಗೇಶ್, ಟಿಪಿಒ ಸರೋಜಿನಿ, ಬಿಆರ್‌ಪಿಗಳಾದ ಲಂಕೇಶ್, ಶ್ರೀಕಂಠಶಾಸ್ತ್ರೀ ಮತ್ತು ಕೇಂದ್ರದ ಪರೀಕ್ಷಾ ಸಿಬ್ಬಂದಿ ವಿದ್ಯಾರ್ಥಿನಿಯನ್ನು ಬರಮಾಡಿಕೊಂಡು, ಧೈರ್ಯತುಂಬಿ ಪರೀಕ್ಷೆ ಬರೆಯುವಂತೆ ಪ್ರೇರೇಪಿಸಲಾಯಿತು.