ಮಗು ಮೃತಪಟ್ಟ ಮರುದಿನವೇ ಕರ್ತವ್ಯಕ್ಕೆ ಹಾಜರ್!
ಮಗು ಮೃತಪಟ್ಟಮರುದಿನವೇ ಕರ್ತವ್ಯಕ್ಕೆ ಹಾಜರ್!| ಸಲಾಂ- ಹುಟ್ಟಿದ ತಿಂಗಳಲ್ಲೇ ಗಂಡು ಮಗು ಸಾವು
ಶಹಾಪುರ(ಏ.19): ತಿಂಗಳ ಹಿಂದಷ್ಟೇ ಹೊರಜಗತ್ತಿಗೆ ಕಾಲಿಟ್ಟಮಗುವಿನ ಸಾವು ಬರಸಿಡಿಲಿನಂತೆ ಬಂದೆರಗಿದರೂ, ಕೊರೋನಾ ವಿರುದ್ಧ ಹೋರಾಟವೇ ಮುಖ್ಯವೆಂದು ಮಗು ಮೃತಪಟ್ಟಮಾರನೇ ದಿನವೇ ಕರ್ತವ್ಯಕ್ಕೆ ಹಾಜರಾಗಿ ಪುತ್ರಶೋಕದ ಮಧ್ಯೆಯೂ ಕರ್ತವ್ಯ ನಿಭಾಯಿಸುತ್ತಿದ್ದಾರೆ ಇಲ್ಲೊಬ್ಬ ಅಧಿಕಾರಿ.
ಅವರೇ ಶಹಾಪುರ ನಗರಸಭೆಯಲ್ಲಿ 3 ವರ್ಷಗಳಿಂದ ಪರಿಸರ ಅಭಿಯಂತರರಾಗಿರುವ ಹರೀಶ್ ಸಜ್ಜನಶೆಟ್ಟಿ. ಮೂಲತಃ ಬೀದರ್ ಜಿಲ್ಲೆ ಭಾಲ್ಕಿ ತಾಲೂಕಿನ ಕೋನ ಮೇಳಕುಂದಾ ಗ್ರಾಮದ ಹರೀಶ ಸಜ್ಜನಶೆಟ್ಟಿ2 ವರ್ಷಗಳಿಂದೆ ಮದುವೆಯಾಗಿದ್ದರು. ಆದರೆ, ಈ ದಂಪತಿಗೆ ಹುಟ್ಟಿದ ತಿಂಗಳೊಪ್ಪತ್ತಿನಲ್ಲೇ ಮಗು ಕಳೆದುಕೊಂಡಿದ್ದು ಭಾರಿ ಆಘಾತಯುಂಟು ಮಾಡಿತ್ತು.
ನಿನ್ನೆ ರಾಜ್ಯದಲ್ಲಿ 25 ಕೇಸು: ಕೊಂಚ ನಿರಾಳ
ಎಲ್ಲೆಡೆ ಕೊರೋನಾ ಹೆಚ್ಚಳದಿಂದ ಮಾ.22ರಂದು ಜನತಾ ಕಫ್ರ್ಯೂ ಜಾರಿಯಲ್ಲಿತ್ತು. ಆದರೆ ಮಗು ಹುಟ್ಟಿದ ಸಂಭ್ರಮದಲ್ಲಿದ್ದ ಹರೀಶ್ ಮನೆಯಲ್ಲಿ ಮಾತ್ರ ಅವತ್ತು ಸೂತಕದ ಛಾಯೆ ಆವರಿಸಿತ್ತು. ಕಾಮಾಲೆ, ಬೆಳವಣಿಗೆ ಕುಂಠಿತಗೊಂಡು ನವಜಾತ ಶಿಶು ಮೃತಪಟ್ಟು ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿತ್ತು. ಈ ನಡುವೆ ಕೊರೋನಾ ಹೆಚ್ಚುತ್ತಿರುವ ವೇಳೆ ಜನರ ಆರೋಗ್ಯವೇ ಮುಖ್ಯ ಎಂದು ಹರೀಶ್ ರಾತೋರಾತ್ರಿಯೇ ಶಹಾಪುರಕ್ಕೆ ವಾಪಸ್ಸಾಗಿ ಕರ್ತವ್ಯಕ್ಕೆ ನಿಷ್ಠೆ ತೋರಿದ್ದು, ಅವರ ಕಾರ್ಯವೈಖರಿ ನಿಜಕ್ಕೂ ಶ್ಲಾಘನೀಯಕ್ಕೆ ಪಾತ್ರವಾಗಿದೆ.