ಬ್ಲಾಕ್‌ಮೇಲ್ ಮಾಡುವುದು ಸರಿಯಲ್ಲ : ಕೈ ನಾಯಕ ಪರಮೇಶ್ವರ್
- ಪಂಚಮಸಾಲಿಗಳು ಸೆಪ್ಟೆಂಬರ್ ಒಳಗಡೆ ತಮ್ಮನ್ನು ಒಬಿಸಿ ಪಟ್ಟಿಗೆ ಸೇರಿಸಿ ಅನ್ನುವುದು ಬ್ಲಾಕ್‌ಮೇಲ್
- ಹಾಗೆ ಎಲ್ಲರೂ ಬ್ಲಾಕ್‌ಮೇಲ್ ಮಾಡಲು ಹೋದರೆ ಸಂವಿಧಾನಕ್ಕೆ ಬೆಲೆ ಇರುವುದಿಲ್ಲ
ತುಮಕೂರು (ಆ.12): ಪಂಚಮಸಾಲಿಗಳು ಸೆಪ್ಟೆಂಬರ್ ಒಳಗಡೆ ತಮ್ಮನ್ನು ಒಬಿಸಿ ಪಟ್ಟಿಗೆ ಸೇರಿಸಿ ಅನ್ನುವುದು ಬ್ಲಾಕ್‌ಮೇಲ್ ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಹೇಳಿದರು.
ಹಾಗೆ ಎಲ್ಲರೂ ಬ್ಲಾಕ್‌ಮೇಲ್ ಮಾಡಲು ಹೋದರೆ ಸಂವಿಧಾನಕ್ಕೆ ಬೆಲೆ ಇರುವುದಿಲ್ಲ. ಕಾನೂನಿಗೂ ಬೆಲೆ ಇರುವುದಿಲ್ಲ ಎಂದರು. ಹಾಗೆಯೇ ಜನರ ಒತ್ತಾಯ ತಡೆದುಕೊಳ್ಳುವ ಶಕ್ತಿ ಸರ್ಕಾರಕ್ಕೂ ಇರಬೇಕು ಎಂದು ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ಮಹಿಳೆಯರಿಗೆ ಕೈ ಬಳೆ ಕೊಡಿಸಿ ತೊಡಿಸಿದ ಪರಮೇಶ್ವರ್
ಒಬಿಸಿ ವರ್ಗಗಳ ಪಟ್ಟಿಸಿದ್ಧತೆ ನಿರ್ಧಾರ ಅಧಿಕಾರ ರಾಜ್ಯಕ್ಕೆ ಕೊಟ್ಟಿರುವುದು ಸ್ವಾಗತಾರ್ಹ. ಹಿಂದಿನ ಪ್ರಧಾನಿ ಮನಮೋಹನಸಿಂಹ್ ಇದ್ದಾಗಲೂ ಈ ಪ್ರಸ್ತಾವನೆ ಇತ್ತು. ಒಂದೊಂದು ರಾಜ್ಯದಲ್ಲಿ ಒಂದೊಂದು ಸಮುದಾಯಗಳು ಬೇರೆ ಬೇರೆ ಹೆಸರಿಟ್ಟುಕಂಡಿವೆ. ಅಂಥವರಿಗೆ ಒಬಿಸಿ ಪಟ್ಟಿಯಲ್ಲಿ ಸೇರಿಸಲು ಗೊಂದಲವಾಗುತ್ತಿತ್ತು ಎಂದು ತಿಳಿಸಿದರು.