ಮಹಿಳೆಯರಿಗೆ ಕೈ ಬಳೆ ಕೊಡಿಸಿ ತೊಡಿಸಿದ ಪರಮೇಶ್ವರ್

  • ಗ್ರಾಮದೇವತೆ ಉತ್ಸವದಲ್ಲಿ ಪಾಲ್ಗೊಂಡಿದ್ದ ಮಹಿಳೆಯರಿಗೆ ಅಣ್ಣನ ರೀತಿ ಶಾಸಕ ಡಾ.ಜಿ ಪರಮೇಶ್ವರ್ ಕೈ ಬಳೆಗಳನ್ನು ಕೊಡಿಸಿದರು
  •  ಕೈ ಬಳೆಗಳನ್ನು ಕೊಡಿಸಿ ಮುಂದೆ ನಿಂತು ತೊಡಿಸಿದ ಪರಮೇಶ್ವರ್
Congress Leader Parameshwar gifted Bangles For women in tumbadi utsav snr

ಕೊರಟಗೆರೆ (ಆ.05): ಗ್ರಾಮದೇವತೆ ಉತ್ಸವದಲ್ಲಿ ಪಾಲ್ಗೊಂಡಿದ್ದ ಮಹಿಳೆಯರಿಗೆ ಅಣ್ಣನ ರೀತಿ ಶಾಸಕ ಡಾ.ಜಿ ಪರಮೇಶ್ವರ್ ಕೈ ಬಳೆಗಳನ್ನು ಕೊಡಿಸಿ ಮುಂದೆ ನಿಂತು ತೊಡಿಸಿದ ಅಪರೂಪದ ಘಟನೆ ತಾಲೂಕಿನ ತುಂಬಾಡಿ ಗ್ರಾಮದಲ್ಲಿ ನಡೆಯಿತು.

ತುಂಬಾಡಿ ಗ್ರಾಮದ ಗ್ರಾಮದೇವತೆ ಮಾರಮ್ಮ ಉತ್ಸವದಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಬರುವಾಗ ಉತ್ಸವದಲ್ಲಿ ಒಟ್ಟಿದ್ದ ಬಳೆ ಅಂಗಡಿಯ ಮುಂದೆ ನೂರಾರು ಹೆಣ್ಣೆ ಮಕ್ಕಳು ಬಳೆಗಳನ್ನು ಕೊಂಡುಕೊಳ್ಳುವುದನ್ನು ಕಂಡ ಶಾಸಕರು ಅಲ್ಲಿದ್ದ ಹೆಣ್ಣು ಮಕ್ಕಳಿಗೆ ತಾವೇ ಮುಂದೆ ನಿಂತು ಅಣ್ಣ ರೀತಿ ಬಳೆಗಳನ್ನು ತೊಡಿಸುವುದಾಗಿ ತಿಳಿಸಿ ಬಳೆ ತೊಡಿಸುವವರಿಗೆ ಹಣ ನೀಡಿ ಎಲ್ಲರಿಗೂ ಅವರು ಕೇಳುವಷ್ಟು ಬಳೆಗಳನ್ನು ನೀಡುವಂತೆ ತಿಳಿಸಿ ಮುಂದೆ ನಿಂತು ಬಳೆ ತೊಡಿಸಿದರು. 

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನಕ್ಕೆ ಕಾರಣ ಕೊಟ್ಟ ಮಾಜಿ ಉಪಮುಖ್ಯಮಂತ್ರಿ

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ ಕೊರೋನಾದಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಗ್ರಾಮದೇವತೆಗಳಿಗೆ ಪೂಜೆ ಸಲ್ಲಿಸಿದರೆ ಗ್ರಾಮವು ರೋಗ ಮುಕ್ತವಾಗುವುದು ಎಂದು ಎಂದು ಹಲವು ವರ್ಷಗಳಿಂದ ಜನರಲ್ಲಿ ನಂಬಿಕೆ ಇದ್ದು ಅದಕ್ಕಾಗಿ ಈ ವಿಶೇಷ ಉತ್ಸವ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ತಮ್ಮದೇ ಮಾಸ್ಕ್ ಧರಿಸಿ ಎಂದು ಹೇಳಿದರು. 

ಈ ವೇಳೆ ಹಲವು ಮುಖಂಡರು ಹಾಜರಿದ್ದರು. 

Latest Videos
Follow Us:
Download App:
  • android
  • ios