Asianet Suvarna News Asianet Suvarna News

ಸಾರಿಗೆ ಸಂಸ್ಥೆ ಸಿಬ್ಬಂದಿಗೆ ಬರೀ ಅರ್ಧ ಸಂಬಳ..!

ಹಣ ಬಿಡುಗಡೆ ಮಾಡ ಸರ್ಕಾರ| ಹೋರಾಟಕ್ಕೆ ಅಣಿಯಾದ ನೌಕರರು| ಪ್ರತಿದಿನ ಸರಾಸರಿ 4 ಕೋಟಿ ಮಾತ್ರ ಆದಾಯ, ಇದರಿಂದ ಸಂಬಳ ನೀಡಲು ಕಷ್ಟ| ಅರ್ಧ ಸಂಬಳಕ್ಕೆ ಸರ್ಕಾರದ ಮುಂದೆ ಕೈಚಾಚಿ ಕುಳಿತ ಸಂಸ್ಥೆ| 

NWKRTC Employees Did Not Full Salary grg
Author
Bengaluru, First Published Jan 29, 2021, 1:18 PM IST
  • Facebook
  • Twitter
  • Whatsapp

ಶಿವಾನಂದ ಗೊಂಬಿ

ಹುಬ್ಬಳ್ಳಿ(ಜ.29):  ಕೊರೋನಾ ಅನ್‌ಲಾಕ್ ಹಿನ್ನೆಲೆಯಲ್ಲಿ ‘ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ’ಯ ಬಸ್‌ಗಳು ರಸ್ತೆಗಿಳಿದಿವೆಯಾದರೂ ಸಂಸ್ಥೆಯ ಆರ್ಥಿಕ ಪರಿಸ್ಥಿತಿ ಮಾತ್ರ ಇನ್ನೂ ಸರಿದಾರಿಗೆ ಬರುತ್ತಿಲ್ಲ. ಹೀಗಾಗಿ ನೌಕರರಿಗೆ ಪೂರ್ಣ ಪ್ರಮಾಣದ ಸಂಬಳ ನೀಡಲು ಸಂಸ್ಥೆಗೆ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಅರ್ಧ ಸಂಬಳ ಮಾತ್ರ ನೀಡಿರುವ ಸಂಸ್ಥೆ ಇನ್ನರ್ಧ ಸಂಬಳಕ್ಕೆ ಸರ್ಕಾರದ ಮುಂದೆ ಕೈಚಾಚಿ ಕುಳಿತಿದೆ.

ಅತ್ತ ಎರಡು ದಿನದೊಳಗೆ ನೌಕರರ ಸಂಬಳಕ್ಕೆ ವ್ಯವಸ್ಥೆ ಮಾಡುವುದಾಗಿ ಹೇಳಿದ್ದ ಸರ್ಕಾರ ಕೂಡ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಈ ಎಲ್ಲದರ ನಡುವೆ ಪೂರ್ಣ ಸಂಬಳ ನೀಡುವಂತೆ ನೌಕರರು ಹೋರಾಟಕ್ಕೆ ಅಣಿಯಾಗಿದ್ದಾರೆ.

ಲಾಕ್‌ಡೌನ್‌ ನಂತರ ವಾಯವ್ಯ ಸಾರಿಗೆ ಸಂಸ್ಥೆಯ ಎಲ್ಲ ಬಸ್‌ಗಳ ಪುನಾರಂಭ

ಸಂಬಳ ನೀಡದಿರಲು ಕಾರಣವೇನು?:

ಕೊರೋನಾ ಬಳಿಕ ಬಸ್‌ ಸಂಚಾರ ಶುರುವಾಗಿದೆಯಾದರೂ ಮೊದಲಿನಷ್ಟು ಆದಾಯವಾಗುತ್ತಿಲ್ಲ. ಪ್ರತಿದಿನ ಕನಿಷ್ಠವೆಂದರೂ 5.5 ರಿಂದ  6 ಕೋಟಿ ಆದಾಯ ಬಂದಲ್ಲಿ ಮಾತ್ರ ಸಂಸ್ಥೆಯನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯ. ಆದರೆ ಈಗ ಪ್ರತಿದಿನ ಸರಾಸರಿ 4 ಕೋಟಿ ಮಾತ್ರ ಆದಾಯ ಬರುತ್ತಿದೆ. ಇದರಿಂದ ಸಂಬಳ ನೀಡಲು ಕಷ್ಟವಾಗುತ್ತಿದೆ. ಶಿರಸಿ, ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ಹಾವೇರಿ, ಗದಗ, ಹುಬ್ಬಳ್ಳಿ, ಧಾರವಾಡ ಹಾಗೂ ನಗರ ಸಾರಿಗೆ ಹೀಗೆ 6 ಜಿಲ್ಲೆಗಳ 9 ವಿಭಾಗಗಳನ್ನೊಳಗೊಂಡ ದೊಡ್ಡ ನಿಗಮ ಇದಾಗಿದ್ದು ಸರಿಸುಮಾರು 23250 ನೌಕರರಿದ್ದಾರೆ.
 

Follow Us:
Download App:
  • android
  • ios