ಉತ್ತರಕನ್ನಡ: ಅಡಿಕೆ ಬೆಳೆಗೆ ಕಂಟಕವಾದ ಮಳೆ, ಕಂಗಾಲಾದ ರೈತ..!
ಉತ್ತರಕನ್ನಡ ಜಿಲ್ಲೆಯ ಶಿರಸಿ, ಯಲ್ಲಾಪುರ, ಹೊನ್ನಾವರ, ಕುಮಟಾ, ಅಂಕೋಲಾ ಭಾಗದಲ್ಲಿ ಅತೀ ಹೆಚ್ಚು ಅಡಿಕೆ ಬೆಳೆಯಲಾಗುತ್ತಿದೆ. ಈ ವರ್ಷ ಸಾವಿರ ಎಕರೆಗೂ ಅಧಿಕ ಪ್ರದೇಶದಲ್ಲಿ ಅಡಿಕೆ ಬೆಳೆ ಕೊಳೆ ರೋಗಕ್ಕೆ ಸಿಲುಕಿದೆ ಎಂದು ಅಂದಾಜಿಸಲಾಗಿದ್ದು, ಅಡಿಕೆ ಬೆಳೆಗಾರರಂತೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಅಡಿಕೆ ಕೊನೆ ಕೊಯಲಿಗೆ ಬಂದಿದ್ದರೂ ಕೊಯಲಿಗೂ ಮುನ್ನ ಉದುರಿ ಬೀಳುತ್ತಿರುವುದು ರೈತರಿಗೆ ಆತಂಕ ತಂದಿದೆ.
ಉತ್ತರಕನ್ನಡ(ಜು.30): ಉತ್ತರಕನ್ನಡ ಜಿಲ್ಲೆಯಲ್ಲಿ ಬಹುತೇಕ ರೈತರು ಹೆಚ್ಚಾಗಿ ಅಡಿಕೆ ಬೆಳೆಯನ್ನು ಬೆಳೆದು ಉತ್ತಮ ಇಳುವರಿ ಪಡೆಯುತ್ತಾರೆ. ಇದಕ್ಕಾಗಿ ಈ ಭಾಗದ ರೈತರು ಸಾಲ ಸೂಲ ಮಾಡಿಯಾದ್ರೂ ಎಕರೆಗಟ್ಟಲೆ ಪ್ರದೇಶದಲ್ಲಿ ಅಡಿಕೆ ಬೆಳೆಯುತ್ತಾರೆ. ಪ್ರತೀ ವರ್ಷವೂ ಅಡಿಕೆ ಇಳುವರಿ ಪಡೆದು ರೈತ ಕೊಂಚ ಮಟ್ಟಿಗಾದರೂ ಸಂತೃಪ್ತಿಯಾಗುತ್ತಿದ್ದರು. ಆದರೆ, ಈ ವರ್ಷದ ಅತೀ ಮಳೆಗೆ ನೀರು ನಿಂತು ಅಡಿಕೆಗೆ ಕೊಳೆ ರೋಗ ಭಾದೆ ಉಂಟಾಗಿದೆ. ಹೀಗಾಗಿ ರೈತ ಕಂಗಾಲಾಗಿದ್ದಾನೆ.
ಜಿಲ್ಲೆಯ ಶಿರಸಿ, ಯಲ್ಲಾಪುರ, ಹೊನ್ನಾವರ, ಕುಮಟಾ, ಅಂಕೋಲಾ ಭಾಗದಲ್ಲಿ ಅತೀ ಹೆಚ್ಚು ಅಡಿಕೆ ಬೆಳೆಯಲಾಗುತ್ತಿದೆ. ಈ ವರ್ಷ ಸಾವಿರ ಎಕರೆಗೂ ಅಧಿಕ ಪ್ರದೇಶದಲ್ಲಿ ಅಡಿಕೆ ಬೆಳೆ ಕೊಳೆ ರೋಗಕ್ಕೆ ಸಿಲುಕಿದೆ ಎಂದು ಅಂದಾಜಿಸಲಾಗಿದ್ದು, ಅಡಿಕೆ ಬೆಳೆಗಾರರಂತೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಅಡಿಕೆ ಕೊನೆ ಕೊಯಲಿಗೆ ಬಂದಿದ್ದರೂ ಕೊಯಲಿಗೂ ಮುನ್ನ ಉದುರಿ ಬೀಳುತ್ತಿರುವುದು ರೈತರಿಗೆ ಆತಂಕ ತಂದಿದೆ.
UTTARA KANNADA: ಜಲಪಾತಗಳಿಗೆ ನಿರ್ಬಂಧ, ಕಡಲಿಗೆ ಬರದ ಪ್ರವಾಸಿಗರು!
ಅಡಿಕೆ ಮರವನ್ನು ಸುಮಾರು ಐದಾರು ವರ್ಷಗಳ ಕಾಲ ಪೋಷಿಸಿ ಬೆಳಸಿ ಫಲ ಕೊಡುವವರೆಗೆ ಕಾದು ನಂತರ ಅದರ ಲಾಭವನ್ನು ಪಡೆಯುವ ವೇಳೆ ರೈತನಿಗೆ ಅತಿವೃಷ್ಠಿಯಿಂದಾಗಿ ಬರುವ ಬೆಳೆಯೂ ಸಹ ಕೈಗೆ ಸಿಗದೆ, ಮಾಡಿದ ಸಾಲ ತೀರಿಸಲಾಗದೆ, ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ.
ಈ ಬಗ್ಗೆ ಅಡಿಕೆ ಬೆಳೆಗಾರರನ್ನು ಕೇಳಿದ್ರೆ 2019 ರಿಂದ ಇಲ್ಲಿಯವರೆಗೆ ನಮಗೆ ಮಾಡಿದ ಸಾಲ ತೀರಿಸಲು ಆಗುತ್ತಿಲ್ಲ. ಸ್ವಂತ ಅಡಿಕೆ ತೋಟವಿದ್ರೂ ನಾವು ಬೇರೆ ಕೂಲಿ ಕೆಲಸಕ್ಕೆ ಹೋಗಿ ಜೀವನ ಮಾಡುವಂತಾಗಿದೆ. ಅಡಿಕೆ ಬೆಳೆಗೆ ಕೊಳೆ ರೋಗ ಬಂದು ಎಲ್ಲಾ ನಾಶವಾಗಿದೆ. ಸರ್ಕಾರ ನಮಗೆ ಸರಿಯಾದ ರೀತಿಯಲ್ಲಿ ಪರಿಹಾರ ನೀಡಬೇಕೆಂದು ಕೃಷಿಕ ಸುಬ್ರಾಯ ಗೌಡ ಅಳಲು ತೋಡಿಕೊಂಡಿದ್ದಾರೆ.