Asianet Suvarna News Asianet Suvarna News

ಬ್ಲಾಕ್ ಫಂಗಸ್ : ಬೌರಿಂಗ್‌ನಲ್ಲಿ ಬೆಡ್ ಭರ್ತಿ

  • ಬ್ಲ್ಯಾಕ್ ಫಂಗಸ್ ಬೆಡ್ ಭರ್ತಿ
  • ಬೆಂಗಳೂರಿನಲ್ಲಿ ಏರಿಕೆಯಾದ ಬ್ಲ್ಯಾಕ್ ಫಂಗಸ್ ಸೋಂಕು
  • ಬೌರಿಂಗ್ ಆಸ್ಪತ್ರೆಯಲ್ಲಿ ಖಾಲಿ ಇಲ್ಲ ಬೆಡ್‌ಗಳು
Number Of Black Fungus Cases  Raise in Bengaluru  snr
Author
Bengaluru, First Published May 19, 2021, 7:13 AM IST

ಬೆಂಗಳೂರು (ಮೇ.19): ಬ್ಲ್ಯಾಕ್‌ ಫಂಗಸ್‌ ಸೋಂಕಿತರಿಗೆ ಚಿಕಿತ್ಸೆ ನೀಡಲು ಬೌರಿಂಗ್‌ ಆಸ್ಪತ್ರೆಯಲ್ಲಿ 10 ಬೆಡ್‌ಗಳ ವಿಶೇಷ ಚಿಕಿತ್ಸಾ ಘಟಕ ಮಾಡಲಾಗಿದೆ.

ಈ ಸೇವೆ ಪ್ರಾರಂಭವಾದ ಸೋಮವಾರವೇ ಬೆಡ್‌ಗಳು ಭರ್ತಿಯಾಗಿವೆ. ಇನ್ನು ಉಳಿದ ಐದು ಪ್ರಾದೇಶಿಕ ಕೇಂದ್ರಗಳು ಗುರುವಾರದ ನಂತರವಷ್ಟೇ ಪ್ರಾರಂಭವಾಗಬೇಕಾಗಿದೆ. 

ಹೀಗಾಗಿ ಬ್ಲ್ಯಾಕ್‌ ಫಂಗಸ್‌ ರೋಗಿಗಳಿಗೆ ಸೂಕ್ತ ಬೆಡ್‌ ಸಿಗುತ್ತಿಲ್ಲ. 15-20 ದಿನಗಳ ಸುದೀರ್ಘ ಚಿಕಿತ್ಸೆಯಾಗಿರುವುದರಿಂದ ಸರ್ಕಾರ ಹೆಚ್ಚುವರಿ ಬೆಡ್‌ ವ್ಯವಸ್ಥೆ ಮಾಡಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ.

ಬ್ಲ್ಯಾಕ್ ಫಂಗಸ್‌ಗೂ ಔಷಧಿ ಕೊರತೆ: ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಕುಮಾರಸ್ವಾಮಿ

ಇನ್ನು ಸೋಂಕಿಗೆ ಒಳಗಾದವರಿಗೆ ಸೂಕ್ತ ಚಿಕಿತ್ಸೆ ನೀಡಲು ಅಗತ್ಯವಾದ   ಔಷಧವು ಪೂರೈಕೆಯಾಗದೆ ಇರುವುದು ಸೋಂಕಿತರ ಜೀವಕ್ಕೆ ಕುತ್ತಾಗಿ ಪರಿಣಮಿಸಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios