'ಬಿಜೆಪಿ ಅವಧಿಯಲ್ಲಿಯೇ ಮಿತಿ ಮೀರಿದ ಭ್ರಷ್ಟಾಚಾರ'
ನ್ಯಾಯಾಲಯದ ಆದೇಶ, ತೀರ್ಪು ಪರಿಶೀಲಿಸಿ ಕಾನೂನು ತಜ್ಞರ ಸಲಹೆ ಪಡೆದು ಅಸೆಸ್‌ಮೆಂಟ್ ನಂ. 38/460ಎ ಪ್ರಕರಣದಲ್ಲಿ ಕಾಂಪೌಂಡ್ ನಿರ್ಮಾಣ ಮಾಡಲು ಪರವಾನಗಿ ನೀಡಿದ್ದಾರೆ. ಕಚೇರಿ ದಾಖಲೆಯಲ್ಲಿ ಪುರಸಭಾ ನಿವೇಶನವೆಂದು ನಮೂದಾಗಿಲ್ಲ: ಎನ್.ಎಸ್.ಪದ್ಮನಾಭ
ಆನೇಕಲ್(ಮಾ.14): ಆನೇಕಲ್ ಪುರಸಭೆಯ ಬಿಜೆಪಿ ಆಡಳಿತಾವಧಿಯಲ್ಲಿ ಜಾತಿ, ಧರ್ಮ ಮೀರಿ ಅನೇಕ ಅಕ್ರಮಗಳು ನಡೆದಿವೆ. ಆ ಅವಧಿಯಲ್ಲಿನ ಕಡತಗಳ ಪರಿಶೀಲನೆ ಹಾಗೂ ನಿರ್ಣಯಗಳ ಬಗ್ಗೆ ಸಂಪೂರ್ಣ ತನಿಖೆ ಆಗಬೇಕಿದ್ದು, ಅವರು ಮಾಡಿರುವ ಆರೋಪಗಳು ಅವರಿಗೇ ಉರುಳಾಗಲಿವೆ ಎಂದು ಪುರಸಭಾಧ್ಯಕ್ಷ ಎನ್.ಎಸ್.ಪದ್ಮನಾಭ ತಿಳಿಸಿದ್ದಾರೆ.
ಅವರು ಪುರಸಭಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನ್ಯಾಯಾಲಯದ ಆದೇಶ, ತೀರ್ಪನ್ನು ಪರಿಶೀಲಿಸಿ ಕಾನೂನು ತಜ್ಞರ ಸಲಹೆಯನ್ನು ಪಡೆದು ಅಸೆಸ್‌ಮೆಂಟ್ ನಂ. 38/460ಎ ಪ್ರಕರಣದಲ್ಲಿ ಕಾಂಪೌಂಡ್ ನಿರ್ಮಾಣ ಮಾಡಲು ಪರವಾನಗಿ ನೀಡಿದ್ದಾರೆ. ಕಚೇರಿ ದಾಖಲೆಯಲ್ಲಿ ಪುರಸಭಾ ನಿವೇಶನವೆಂದು ನಮೂದಾಗಿಲ್ಲ ಎಂದು ಅವರು ತಿಳಿಸಿದರು.
'ಬಡ, ಮಧ್ಯಮ ವರ್ಗಕ್ಕೆ ಕೈಗೆಟುಕುವ ದರದಲ್ಲಿ ಶೀಘ್ರ ಪೆಟ್ರೋಲ್ ಲಭಿಸಲಿದೆ'
ಆಡಳಿತ ಪಕ್ಷದ ಕಾಂಗ್ರೆಸ್ ಸದಸ್ಯರಾದ ಮುನಾವರ್, ಕೃಷ್ಣ, ಮಹಂತೇಶ್, ಶ್ರೀನಿವಾಸ್, ರಾಜಪ್ಪ ಮುಖಂಡರಾದ ಲಕ್ಷ್ಮೇನಾರಾಯಣ್ ಪ್ರತ್ಯಾರೋಪದ ದಾಖಲೆಗಳನ್ನು ಬಿಡುಗಡೆ ಮಾಡಿದರು.