ನೃತ್ಯ ತರಂಗ ಡಾನ್ಸ್ ಫೆಸ್ಟಿವಲ್: 10 ನೃತ್ಯ ಸಂಸ್ಥೆಗಳಿಂದ 98 ನೃತ್ಯ ಕಲಾವಿದರು ಭಾಗಿ

ನಗರದ ಪ್ರತಿಷ್ಠಿತ ನಾಟ್ಯ ಸಂಸ್ಥೆಯಾದ ಸಂಜೀವಿನಿ ಕಲಾ ಸಂಸ್ಥೆಯ ವತಿಯಿಂದ ಇತ್ತೀಚಿಗೆ ನಯನ ಸಭಾಂಗಣದಲ್ಲಿ ಮೊಟ್ಟಮೊದಲ ಬಾರಿಗೆ ನೃತ್ಯ ತರಂಗ ಡಾನ್ಸ್ ಫೆಸ್ಟಿವಲ್‌ ಆಯೋಜಿಸಲಾಗಿತ್ತು. 

Nritya Taranga Dance Festival 98 dance artists from 10 dance institutes participated gvd

ಬೆಂಗಳೂರು (ಜು.12): ನಗರದ ಪ್ರತಿಷ್ಠಿತ ನಾಟ್ಯ ಸಂಸ್ಥೆಯಾದ ಸಂಜೀವಿನಿ ಕಲಾ ಸಂಸ್ಥೆಯ ವತಿಯಿಂದ ಇತ್ತೀಚಿಗೆ ನಯನ ಸಭಾಂಗಣದಲ್ಲಿ ಮೊಟ್ಟಮೊದಲ ಬಾರಿಗೆ ನೃತ್ಯ ತರಂಗ ಡಾನ್ಸ್ ಫೆಸ್ಟಿವಲ್‌ ಆಯೋಜಿಸಲಾಗಿತ್ತು. ಡಾನ್ಸ್‌ ಫೆಸ್ಟಿವಲ್‌ನಲ್ಲಿ ಕಲಾರ್ನವಾ-ಒಶನ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್, ಶ್ರೀ ರಾಜರಾಜೇಶ್ವರಿ ಕಲಾನಿಕೇತನ, ರಸ ಸ್ಫೂರ್ತಿ, ಬೃಂದಾವನ ಕಲಾನಿಕೇತನ, ಶ್ರೀ ಲಲಿತಾ ಕಲಾನಿಕೇತನ, ಶಿವಗಂಗಾ ನೃತ್ಯ ವಿದ್ಯಾಲಯ, ನಾಟ್ಯ ಸನಿದ್ಧಿ, ಶ್ರೀ ಶಿವಲೀಲ ಸಂಗೀತ ಮತ್ತು ನೃತ್ಯ ಸಂಸ್ಥೆ, ಸಂಜೀವಿನಿ ಕಲಾ ಸಂಸ್ಥೆ ಸೇರಿದಂತೆ ಸುಮಾರು 10 ನೃತ್ಯ ಸಂಸ್ಥೆಗಳಿಂದ 98 ನೃತ್ಯ ಕಲಾವಿದರು ತಮ್ಮ ನೃತ್ಯ ಕಲಾ ಪ್ರದರ್ಶನ ಮಾಡಿದರು. 

ಭಾಗವಹಿಸಿದ ಎಲ್ಲ ಕಲಾವಿದರಿಗೆ ಹಾಗೂ ಗುರುಗಳಿಗೆ ನೂಪುರನಾದ ಪ್ರಶಸ್ತಿಯನ್ನು ಸಂಜೀವಿನಿ ಕಲಾ ಸಂಸ್ಥೆಯ ಅಧ್ಯಕ್ಷೆ ವಿದುಷಿ ಡಾ.ತನುಜಾ ರಾಜ್ ಹಾಗೂ ಪತಿ, ಸಂಸ್ಥೆಯ ಕಾರ್ಯಾದರ್ಶಿ ಎಂ.ವಿ.ಬಸವರಾಜ್ ಅವರು ಪ್ರದಾನ ಮಾಡಿ ಗೌರವಿಸಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಿದುಷಿ ನಿರ್ಮಲಾ ಜಗದೀಶ, ವಿದುಷಿ ರೇಖಾ ಜಗದೀಶ್ ಹಾಗೂ ಕೋಲಾರ್ ರಮೇಶ್ ಕಾರ್ಯಕ್ರಮ ಉದ್ಘಾಟಿಸಿ ಯಶಸ್ವಿಗೊಳಿಸಿದರು. 

ಇದೊಂದೆ ವಿಷಯಕ್ಕೆ ರಶ್ಮಿಕಾ ಮಂದಣ್ಣ ನಾಚುವುದಂತೆ..: ಆದರೂ ಇದು ನಿಮಗಾಗಿ ಎಂದಿದ್ಯಾಕೆ ನ್ಯಾಷನಲ್ ಕ್ರಶ್!

ಮೊಟ್ಟಮೊದಲ ಬಾರಿಗೆ ನೃತ್ಯ ತರಂಗ ಡಾನ್ಸ್ ಫೆಸ್ಟಿವಲ್‌ ಆಯೋಜಿಸಿದ್ದು, ಸುಮಾರು 10 ನೃತ್ಯ ಸಂಸ್ಥೆಗಳಿಂದ 98 ನೃತ್ಯ ಕಲಾವಿದರು ತಮ್ಮ ನೃತ್ಯ ಕಲಾ ಪ್ರದರ್ಶನ ಮಾಡಿದ್ದಾರೆ. ಫೆಸ್ಟಿವಲ್‌ನಲ್ಲಿ ಭಾಗವಹಿಸಿದ್ದ ಎಲ್ಲ ಕಲಾವಿದರಿಗೆ ಹಾಗೂ ಗುರುಗಳಿಗೆ ಗೌರವ ಸನ್ಮಾನ ಮಾಡಲಾಗಿದೆ. ಕಾರ್ಯಕ್ರಮ ಯಶಸ್ವಿಗೊಳಿಸಿದ ಎಲ್ಲ ಕಲಾವಿದರಿಗೆ ಹಾಗೂ ಗುರುಗಳಿಗೆ ಸಂಸ್ಥೆ ವತಿಯಿಂದ ಧನ್ಯವಾದಗಳು.
- ವಿದುಷಿ ಡಾ.ತನುಜಾ ರಾಜ್, ಸಂಜೀವಿನಿ ಕಲಾ ಸಂಸ್ಥೆಯ ಅಧ್ಯಕ್ಷೆ.

Latest Videos
Follow Us:
Download App:
  • android
  • ios