ಬೆಳಗಾವಿ: ಮಹಾರಾಷ್ಟ್ರ ಆರೋಗ್ಯ ವಿಮೆ ಸೇವಾ ಕೇಂದ್ರ, ಆಸ್ಪತ್ರೆಗಳಿಗೆ ನೋಟಿಸ್‌

ಈ ಸಂಬಂಧ ನಾನು ಪೊಲೀಸ್‌ ಅಧಿಕಾರಿಗಳ ಜೊತೆಗೆ ಚರ್ಚಿಸಿದ್ದು, ಸದ್ಯ 4 ಸೇವಾ ಕೇಂದ್ರ ಕಾರ್ಯಾರಂಭಗೊಂಡಿವೆ. ಈಗಾಗಲೇ 30 ಅರ್ಜಿಗಳು ಬಂದಿವೆ ಎಂಬ ಮಾಹಿತಿಯಿದೆ. ಇನ್ನೂ ಒಂದು ಸೇವಾ ಕೇಂದ್ರ ಆರಂಭವಾಗಲಿದೆ. ಈ ಸೇವಾ ಕೇಂದ್ರಗಳಿಗೆ ಆರೋಗ್ಯ ಇಲಾಖೆಯ ಕೆಪಿಇ ಕಾಯ್ದೆ ಅನ್ವಯ ನೋಟಿಸ್‌ ಜಾರಿಗೊಳಿಸಲಾಗುವುದು: ಜಿಲ್ಲಾಧಿಕಾರಿ ನಿತೇಶ ಪಾಟೀಲ 

Notice to Hospitals For Maharashtra Health Insurance Service in Belagavi grg

ಬೆಳಗಾವಿ(ಜ.12):  ಮಹಾರಾಷ್ಟ್ರ ಸರ್ಕಾರದ ಮಹಾತ್ಮ ಜ್ಯೋತಿರಾವ್‌ ಫುಲೆ ಜನಾರೋಗ್ಯ ವಿಮೆ ಯೋಜನೆ ಜಾರಿಗೊಳಿಸಲು ಬೆಳಗಾವಿಯಲ್ಲಿ ಸ್ಥಾಪಿಸಲಾದ ಸೇವಾ ಕೇಂದ್ರಗಳಿಗೆ ಹಾಗೂ ಸಂಬಂಧಿಸಿದ ಆಸ್ಪತ್ರೆಗಳಿಗೆ ನೋಟಿಸ್‌ ಜಾರಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

ಮಹಾರಾಷ್ಟ್ರ ಸರ್ಕಾರದ ವಿಮೆ ಯೋಜನೆಯನ್ನು ಬೆಳಗಾವಿಯಲ್ಲಿ ಜಾರಿಗೊಳಿಸುತ್ತಿರುವುದನ್ನು ತಡೆಯುವಂತೆ ಆಗ್ರಹಿಸಿ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾಸಮಿತಿ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಬೆಳಗಾವಿಯಲ್ಲಿ ಮರಾಠಿಗರಿಗೆ ಮಹಾರಾಷ್ಟ್ರ ಸರ್ಕಾರ ವೈದ್ಯಕೀಯ ನೆರವು

ಮನವಿ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿ, ಈ ಸಂಬಂಧ ನಾನು ಪೊಲೀಸ್‌ ಅಧಿಕಾರಿಗಳ ಜೊತೆಗೆ ಚರ್ಚಿಸಿದ್ದು, ಸದ್ಯ 4 ಸೇವಾ ಕೇಂದ್ರ ಕಾರ್ಯಾರಂಭಗೊಂಡಿವೆ. ಈಗಾಗಲೇ 30 ಅರ್ಜಿಗಳು ಬಂದಿವೆ ಎಂಬ ಮಾಹಿತಿಯಿದೆ. ಇನ್ನೂ ಒಂದು ಸೇವಾ ಕೇಂದ್ರ ಆರಂಭವಾಗಲಿದೆ. ಈ ಸೇವಾ ಕೇಂದ್ರಗಳಿಗೆ ಆರೋಗ್ಯ ಇಲಾಖೆಯ ಕೆಪಿಇ ಕಾಯ್ದೆ ಅನ್ವಯ ನೋಟಿಸ್‌ ಜಾರಿಗೊಳಿಸಲಾಗುವುದು. ಅಲ್ಲದೇ, ಈ ಯೋಜನೆಯನ್ನು ಯಾವ ಆಧಾರದ ಮೇಲೆ ನೀವು ಕರ್ನಾಟಕದಲ್ಲಿ ಜಾರಿಗೊಳಿಸುತ್ತಿದ್ದೀರಿ ಎಂದು ಸಂಬಂಧಿತ ಎರಡು ಆಸ್ಪತ್ರೆಗಳಿಗೂ ನೋಟಿಸ್‌ ನೀಡಲಾಗುವುದು ಎಂದು ಹೇಳಿದರು.

Latest Videos
Follow Us:
Download App:
  • android
  • ios