Asianet Suvarna News Asianet Suvarna News

ಉತ್ತರ ಕನ್ನಡ ಜಿಲ್ಲೆಯಲ್ಲಿ ಇನ್ನೂ ನಿಲ್ಲದ ರಣಮಳೆ..!

ಗೇರುಸೊಪ್ಪ ಜಲಾಶಯದಿಂದಲೂ ನೀರನ್ನು ಹೊರಬಿಡಲಾಗುತ್ತಿದ್ದು, ಗುಂಡಬಾಳಾ ನದಿಗೆ ನರೆ ಬಂದಿದೆ. ಲಿಂಗನಮಕ್ಕಿ ಜಲಾಶಯದ ರೇಡಿಯಲ್ ಗೇಟ್‌ ಮೂಲಕ ಶನಿವಾರ ಬೆಳಗ್ಗೆ 41,870ಕ್ಕೂ ಸೆಕ್ಸ್ ನೀರು ಹೊರಬಿಡಲಾಗಿದ್ದು, ಶರಾವತಿ ನದಿ ತೀರದುದ್ದಕ್ಕೂ ಪ್ರವಾಹದ ಭೀತಿ ಎದುರಾಗಿದೆ. ಹೊನ್ನಾವರ ತಾಲೂಕಿನ ಹಲವು ಮನೆಗಳಿಗೆ ನೀರು ನುಗ್ಗಿದ್ದು, 227 ಕುಟುಂಬಗಳ 670 ಸಂತ್ರಸ್ತರು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.

not yet stop rain in uttara kannada grg
Author
First Published Aug 4, 2024, 10:47 AM IST | Last Updated Aug 5, 2024, 11:00 AM IST

ಕಾರವಾರ/ಬೆಂಗಳೂರು(ಆ.04):  ರಾಜ್ಯದ ಇತರೆಡೆ ಮಳೆಯ ಅರ್ಭಟ ಕಡಿಮೆಯಾಗಿದ್ದರೂ, ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಶನಿವಾರವೂ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದ್ದು, ಕದ್ರಾ ಜಲಾಶಯದಿಂದ ನೀರು ಹೊರಬಿಡಲಾಗಿದೆ. ಇದರಿಂದಾಗಿ ಕಾಳಿ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. 

ಇದೇ ವೇಳೆ, ಗೇರುಸೊಪ್ಪ ಜಲಾಶಯದಿಂದಲೂ ನೀರನ್ನು ಹೊರಬಿಡಲಾಗುತ್ತಿದ್ದು, ಗುಂಡಬಾಳಾ ನದಿಗೆ ನರೆ ಬಂದಿದೆ. ಲಿಂಗನಮಕ್ಕಿ ಜಲಾಶಯದ ರೇಡಿಯಲ್ ಗೇಟ್‌ ಮೂಲಕ ಶನಿವಾರ ಬೆಳಗ್ಗೆ 41,870ಕ್ಕೂ ಸೆಕ್ಸ್ ನೀರು ಹೊರಬಿಡಲಾಗಿದ್ದು, ಶರಾವತಿ ನದಿ ತೀರದುದ್ದಕ್ಕೂ ಪ್ರವಾಹದ ಭೀತಿ ಎದುರಾಗಿದೆ. ಹೊನ್ನಾವರ ತಾಲೂಕಿನ ಹಲವು ಮನೆಗಳಿಗೆ ನೀರು ನುಗ್ಗಿದ್ದು, 227 ಕುಟುಂಬಗಳ 670 ಸಂತ್ರಸ್ತರು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.

ಶಿರಾಡಿ ಭೂಕುಸಿತಕ್ಕೆ ಅವೈಜ್ಞಾನಿಕ ರಸ್ತೆ ಕಾಮಗಾರಿಯೇ ಕಾರಣ..!

ಇದೇ ವೇಳೆ, ತುಂಗಭದ್ರಾ ನದಿಗೂ 1.70 ಲಕ್ಷ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದ್ದು, ಹಂಪಿ ಸುತ್ತಮುತ್ತಲಿನ ಸ್ಥಾರಕ ಹಾಗೂ ಪಂಪಾ ಸರೋವರ, ಆನೆಗೊಂದಿಯ ಹಲವೆಡೆ ನೀರು ನುಗ್ಗಿದ್ದು, ಪ್ರವಾಹ ಪರಿಸ್ಥಿತಿ ಯಥಾಸ್ಥಿತಿ ಮುಂದುವರಿದಿದೆ.

ಈ ಮಧ್ಯೆ, ಭದ್ರಾವತಿಯ ಜೆಪಿಎಸ್ ಕಾಲೋನಿ ಮೆಸ್ಕಾಂ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ನೌಕರ ರಾಜು ಎಂಬುವರು ಭದ್ರಾ ನದಿಗೆ ಆಕಸ್ಮಿಕವಾಗಿ ಬಿದ್ದು, ಕೊಚ್ಚಿ ಹೋಗಿದ್ದು, ಮೃತದೇಹದ ಹುಡುಕಾಟ ನಡೆಸಲಾಗುತ್ತಿದೆ.

Latest Videos
Follow Us:
Download App:
  • android
  • ios