*  2029ರಲ್ಲೇ ಕೇಂದ್ರ ಬಜೆಟ್‌ನಲ್ಲಿ ಸಬ್‌ ಅರ್ಬನ್‌ ರೈಲು ಘೋಷಣೆ*  2020ರಲ್ಲಿ ಅನುಮೋದನೆ*  2,190 ದಿನದಲ್ಲಿ ಕಾಮಗಾರಿ ಪೂರ್ಣಕ್ಕೆ ಗಡುವು 

ಬೆಂಗಳೂರು(ಮಾ.08): ರಾಜಧಾನಿ ಬೆಂಗಳೂರ ನಗರದಲ್ಲಿ ಸಂಚಾರ ದಟ್ಟಣೆ(Tarffic) ಸಮಸ್ಯೆ ನಿವಾರಣೆಗೆ ಕೇಂದ್ರ ಸರ್ಕಾರ ‘ಸಬ್‌ಅರ್ಬನ್‌ ರೈಲು ಯೋಜನೆ’(Suburban Rail Project) ಘೋಷಣೆ ಮಾಡಿ 500 ದಿನ ಕಳೆದಿದೆ. ಆದರೆ, ಈವರೆಗೂ ಯಾವುದೇ ರೀತಿಯ ಸಿವಿಲ್‌ ಕಾಮಗಾರಿಗಳು ಆರಂಭವಾಗಿಲ್ಲ.

ಬೆಂಗಳೂರು(Bengaluru) ನಗರಕ್ಕೆ ಸಬ್‌ಅರ್ಬನ್‌ ರೈಲು ಸೇವೆ ಒದಗಿಸುವ ಸಂಬಂಧ 2019ರ ಕೇಂದ್ರ ಬಜೆಟ್‌ನಲ್ಲಿ(Budget) ಘೋಷಣೆ ಮಾಡಿತ್ತು. ಅಲ್ಲದೆ, 2020ರ ಅಕ್ಟೋಬರ್‌ 21ರಂದು ರೈಲ್ವೆ ಮಂಡಳಿ ಯೋಜನೆಗೆ ಅನುಮೋದನೆ ನೀಡಿತ್ತು. ಯೋಜನೆಯ ಅನುಷ್ಠಾನವನ್ನು ನಿರ್ವಹಿಸುವಂತೆ ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮ(ಕೆ-ರೈಡ್‌)ಕ್ಕೆ ವಹಿಸಿತ್ತು. ಜತೆಗೆ, ಮುಂದಿನ ಆರು ವರ್ಷದಲ್ಲಿ (2,190 ದಿನ) ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಗಡುವು ನೀಡಿತ್ತು.

Bengaluru Suburban Rail: ಹೀಲಲಿಗೆ-ಯಲಹಂಕ-ರಾಜಾನುಕುಂಟೆ ಸಬ್‌ಅರ್ಬನ್‌ ರೈಲು ಕಾಮಗಾರಿ ಶೀಘ್ರ

ಅಲ್ಲದೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ(Airport) ಸಂಪರ್ಕ ಕಲ್ಪಿಸುವ ಯೋಜನೆಯನ್ನು ಮೂರು ವರ್ಷದಲ್ಲಿ (1,095 ದಿನ)ದಲ್ಲಿ ಅಂತಿಮಗೊಳಿಸಲು ಸೂಚಿಸಿತ್ತು. ಆದರೆ, ಮಾ.6ಕ್ಕೆ ಯೋಜನೆ ಘೋಷಣೆ ಮಾಡಿ 500 ದಿನಗಳ ಕಳೆದಿವೆ. ಯೋಜನೆಗೆ ಸಂಬಂಧಿಸಿದಂತೆ ಈವರೆಗೂ ಸಿವಿಲ್‌ ಕಾಮಗಾರಿ ಪ್ರಾರಂಭವಾಗಿಲ್ಲ. ಈ ಬೆಳವಣಿಗೆ ಬೆಂಗಳೂರು ನಗರಕ್ಕೆ ಸಬ್‌ಅರ್ಬನ್‌ ರೈಲು ಯೋಜನೆ ನಿಗದಿತ ಸಮಯದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಹುಸಿಯಾಗಿದೆ ಎಂದು ನಗರದ ರೈಲ್ವೆ ಪರ ಹೋರಾಟಗಾರರು ಮತ್ತು ಸಿಟಿಜನ್‌ ಫಾರ್‌ ಸಿಟಿಜನ್‌ ಸಂಘಟನೆಯ ರಾಜ್‌ಕುಮಾರ್‌ ದುಗ್ಗಾರ್‌ ಆರೋಪಿಸಿದ್ದಾರೆ.

ಸಬ್‌ಅರ್ಬನ್‌ ರೈಲು ಯೋಜನೆ ನಿಗದಿತ ಸಮಯದಲ್ಲಿ ಪೂರ್ಣಗೊಂಡರೆ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗುತ್ತಿತ್ತು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಸ್ತೆ ಮಾರ್ಗಕ್ಕೆ ಬದಲು ರೈಲು ಸೇವೆಯನ್ನು ಹೆಚ್ಚು ಪ್ರಯಾಣಿಕರು ಬಳಕೆ ಮಾಡಿಕೊಳ್ಳುವುದಕ್ಕೆ ಅವಕಾsಶವಿತ್ತು. ಆದ್ದರಿಂದ ಯೋಜನೆಯನ್ನು ಶೀಘ್ರದಲ್ಲಿ ಪ್ರಾರಂಭಿಸಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು.

ಶೇ.20ರಷ್ಟು ಕಾರ್ಯ ಪೂರ್ಣ: ಕೆ-ರೈಡ್‌

ನಗರದಲ್ಲಿ ಸಬ್‌ಅರ್ಬನ್‌ ರೈಲು ಯೋಜನೆಗೆ ಭೂಸ್ವಾಧೀನ, ಸರ್ವೇ ಕಾರ್ಯ, ಟೆಂಟರ್‌ಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಬೈಯ್ಯಪ್ಪನಹಳ್ಳಿ- ಚಿಕ್ಕಬಾಣವಾರ(ಸಂಪಿಗೆ) ಮಾರ್ಗದಲ್ಲಿ ಸಿವಿಲ್‌ ಕಾಮಗಾರಿಗಾಗಿ ಟೆಂಡರ್‌(Tender) ಕರೆಯಲಾಗಿದೆ. ಹೀಲಳಿಗೆ-ರಾಜಾನುಗುಂಟೆ(ಕನಕ) ಮಾರ್ಗದ ಕಾಮಗಾರಿಗೆ ಟೆಂಟರ್‌ ಕರೆಯಲು ಸಿದ್ಧತೆ ನಡೆಸಲಾಗುತ್ತಿದೆ. ಫ್ರೆಂಚ್‌ ಮತ್ತು ಜಪಾನ್‌ ಬ್ಯಾಂಕ್‌ಗಳಿಂದ ಸಾಲ ಪಡೆದುಕೊಳ್ಳುವುದಕ್ಕೆ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ. ಮುಂದಿನ ಎರಡು ತಿಂಗಳಲ್ಲಿ ಸಿವಿಲ್‌ ಕಾಮಗಾರಿ ಪ್ರಾರಂಭವಾಗಲಿದ್ದು, ಈವರೆಗೂ ಶೇ.20ರಷ್ಟು ಕಾರ್ಯಗಳು ಪೂರ್ಣಗೊಳಿಸಿದ್ದೇವೆ. ಅಲ್ಲದೆ, ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಕೆ-ರೈಡ್‌ನ ಅಧಿಕಾರಿಗಳು ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರಕ್ಕೆ ಸಬ್‌ಅರ್ಬನ್‌, ಮೆಟ್ರೋ ರೈಲು ವಿಸ್ತರಣೆ

ಚಿಕ್ಕಬಳ್ಳಾಪುರ: ಬೆಂಗಳೂರಿಗೆ ಪರ್ಯಾಯವಾಗಿ ಚಿಕ್ಕಬಳ್ಳಾಪುರವನ್ನು ಉಪ ನಗರವಾಗಿ ಅಭಿವೃದ್ಧಿ ಪಡಿಸುವ ದಿಕ್ಕಿನಲ್ಲಿ ತಮ್ಮ ಚಿಂತನೆ ಇದ್ದು, ದೇವನಹಳ್ಳಿವರೆಗೂ ಬರಲಿರುವ ಸಬ್‌ಅರ್ಬನ್‌ ಹಾಗೂ ಮೆಟ್ರೋ ರೈಲು ಸಂಪರ್ಕವನ್ನು ಚಿಕ್ಕಬಳ್ಳಾಪುರಕ್ಕೂ ವಿಸ್ತರಿಸಲು ಎಲ್ಲ ಪ್ರಯತ್ನ ಮಾಡಲಾಗುವುದೆಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌ ತಿಳಿಸಿದರು.

ದೇವನಹಳ್ಳಿಗೆ 3 ವರ್ಷದಲ್ಲಿ ಸಬ್‌ಅರ್ಬನ್‌ ರೈಲು

ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ ಹಾಗೂ ಒಕ್ಕಲಿಗರ ಸಂಘದ ಸಯೋಗದೊಂದಿಗೆ ಕಳೆದ ವರ್ಷದ ಜೂ.27 ರಂದು ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ದಿನಾಚರಣೆಯಲ್ಲಿ ಮಾತನಾಡಿದ್ದ ಅವರು, ಬೆಂಗಳೂರಿಗೆ ಪರ್ಯಾಯವಾಗಿ ಚಿಕ್ಕಬಳ್ಳಾಪುರ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದರು.

ಕ್ಷೇತ್ರದಲ್ಲಿ ದುಡಿಯುವ ಜನತೆಗೆ ಉದ್ಯೋಗ ಕಲ್ಪಿಸಬೇಕಿದೆ. ಅದಕ್ಕಾಗಿ ವಿಶೇಷ ಕೈಗಾರಿಕೆಗಳನ್ನು ಜಿಲ್ಲೆಗೆ ತರುವ ಪ್ರಯತ್ನ ನಡೆದಿದೆ. ಸದ್ಯದಲೇ ಕೆಲ ಕೈಗಾರಿಕೆಗಳು ಬರಲಿವೆ. ಜಿಲ್ಲೆಯ ಜನರ ಸಮಗ್ರ ಅಭಿವೃದ್ಧಿ ಆಗಬೇಕಾದರೆ ಶಿಕ್ಷಣ, ಆರೋಗ್ಯ, ಕೈಗಾರಿಕೆ ಹಾಗೂ ನೀರಾವರಿ ಕ್ಷೇತ್ರಗಳಿಗೆ ಒತ್ತು ಕೊಡಬೇಕಿದ್ದು, ಆ ನಿಟ್ಟಿನಲ್ಲಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು.