Asianet Suvarna News

ಇನ್ನು ಅಂತರ್‌ ಜಿಲ್ಲಾ ಪ್ರಯಾಣಕ್ಕೆ ಅಗತ್ಯವಿಲ್ಲ ಪಾಸ್?

ಇಂದಿನಿಂದ(ಮೇ.18) ರಿಂದ ಲಾಕ್‌ಡೌನ್‌ 4.0 ಆರಂಭ| ಲಾಕ್‌ಡೌನ್‌ ಸಂಬಂಧ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ| ಬೆಂಗಳೂರಲ್ಲಿ ಹೋಟೆಲ್, ಸಲೂನ್ ತೆಗೆಯಲು ರಾಜ್ಯ ಸರ್ಕಾರ ಚಿಂತನೆ| ಸಾಮಾಜಿಕ ಅಂತರ ಕಾಯ್ದುಕೊಂದು ಮುಂಜಾಗ್ರತಾ ಕ್ರಮ ವಹಿಸಿ‌ ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದ ಎಲ್ಲ ಕಡೆ ಸಲೂನ್, ಹೋಟೆಲ್‌ ಬಹುತೇಕ ಓಪನ್ ಸಾಧ್ಯತೆ|

Not Required Pass to Inter District Travel
Author
Bengaluru, First Published May 18, 2020, 11:33 AM IST
  • Facebook
  • Twitter
  • Whatsapp

ಬೆಂಗಳೂರು(ಮೇ.18): ಮೂರನೇ ಹಂತದ ಲಾಕ್‌ಡೌನ್‌ ನಿನ್ನೆಗೆ(ಮೇ. 17)ಕ್ಕೆ ಮುಗಿದಿದೆ. ಇಂದಿನಿಂದ(ಮೇ.18) ರಿಂದ ಲಾಕ್‌ಡೌನ್‌ 4.0 ಆರಂಭವಾಗಿದೆ. ಹೀಗಾಗಿ ಲಾಕ್‌ಡೌನ್‌ ಸಂಬಂಧ ಕೇಂದ್ರ ಸರ್ಕಾರ ಕೆಲವೊಂದು ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ. 

ಹೀಗಾಗಿ ಕರ್ನಾಟಕ ಲಾಕ್‌ಡೌನ್ 4.0 ಸಂಬಂಧ ಇಂದು(ಸೋಮವಾರ) ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸುತ್ತಿದ್ದಾರೆ. ಈ ಸಭೆಯಲ್ಲಿ ಕೆಲವೊಂದು ಸಡಿಲಿಕೆಗಳ ಮಹತ್ವದ ನಿರ್ಣಯಗಳು ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.  

ಲಾಕ್‌ಡೌನ್ 4.0: ಬಸ್, ಆಟೋ, ಟ್ಯಾಕ್ಸಿ ರಸ್ತೆಗಿಳಿಯೋದು ಪಕ್ಕಾ!

ರಾಜ್ಯದ ವಿವಿಧ ಜಿಲ್ಲೆಗಳನ್ನು ಸೋಂಕಿಗೆ ಅನುಗುಣವಾಗಿ ವಿಂಗಡಿಸಿದ್ದ ರೆಡ್, ಆರೇಂಜ್, ಗ್ರೀನ್ ಝೋನ್  ಗಳನ್ನು ಕೈ ಬಿಡುವ ಸಾಧ್ಯತೆ ಇದ್ದು, ಕಂಟೈನ್ಮೆಂಟ್, ಬಫರ್ ಝೋನ್ ಗಳಾಗಿ ಮಾತ್ರ ವಿಂಗಡಣೆ ಮಾಡುವ ಸಾಧ್ಯತೆ ಇದೆ. ಅಂತರ್‌ಜಿಲ್ಲಾ ನಿರ್ಬಂಧವನ್ನ ತೆರವುಗೊಳಿ, ಅಂತರ್‌ಜಿಲ್ಲಾ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗುತ್ತದೆ ಎಂದು ಹೇಳಲಾಗಿದೆ. 

ಅಂತರ್‌ ರಾಜ್ಯಗಳಲ್ಲಿ ಸೀಮಿತ ಬಸ್ ಸಂಚಾರಕ್ಕೆ ಅವಕಾಶ, ಆದರೆ, ಅಂತರ್‌ ರಾಜ್ಯದಿಂದ ಬರುವ ಪ್ರಯಾಣಿಕರಿಗೆ ಕ್ವಾರಂಟೈನ್ ಬಹುತೇಕ ಕಡ್ಡಾಯವಾಗಲಿದೆ. ಧಾರ್ಮಿಕ ಸ್ಥಳಗಳು, ಪ್ರಾರ್ಥನೆ ಎಲ್ಲವೂ ಬಹುತೇಕ ಬಂದ್ ಮುಂದುವರಿಯಲಿವೆ. ಶಾಪಿಂಗ್‌ ಮಾಲ್, ಪಬ್, ಬಾರ್ ಗಳಿಗೆ ನಿರ್ಬಂಧ ಬಹುತೇಕ ಮುಂದುವರಿಕೆ ಹೇರಲಾಗುತ್ತದೆ. 

ಬೆಂಗಳೂರಲ್ಲಿ ಹೋಟೆಲ್, ಸಲೂನ್ ತೆಗೆಯಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ.  ಸಾಮಾಜಿಕ ಅಂತರ ಕಾಯ್ದುಕೊಂದು ಮುಂಜಾಗ್ರತಾ ಕ್ರಮ ವಹಿಸಿ‌ ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಉಳಿದ ಎಲ್ಲ ಕಡೆ ಸಲೂನ್, ಹೋಟೆಲ್‌ ಬಹುತೇಕ ಓಪನ್ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

Follow Us:
Download App:
  • android
  • ios