ಬೆಂಗಳೂರು(ಜ.20): ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ನೌಕರರಿಗೆ ವೇತನ ಹೊರತುಪಡಿಸಿ, ಓಟಿ, ಬಾಟಾ ಸೇರಿದಂತೆ ಇತರೆ ಭತ್ಯೆ ಹಾಗೂ ಆರ್ಥಿಕ ಸೌಲಭ್ಯಗಳನ್ನು ಪಾವತಿಸದಂತೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು ನಿಗಮದ ಎಲ್ಲ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚಿಸಿದ್ದಾರೆ.

ರಾಜ್ಯ ಸರ್ಕಾರ ವಿಧಿಸಿರು ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಈ ನಿಟ್ಟಿನಲ್ಲಿ ವೇತನ ಹೊರತುಪಡಿಸಿ ಇತರೆ ಭತ್ಯೆ ಹಾಗೂ ಅರ್ಥಿಕ ಸೌಲಭ್ಯಗಳನ್ನು ನೀಡದಂತೆ ತಿಳಿಸಿದ್ದಾರೆ. 

BMTC ನೌಕರರಿಗಿಲ್ಲ ಸಂಬಳ: ಹಬ್ಬದ ಟೈಂನಲ್ಲೇ ವೇತನ ನೀಡದೇ ಸತಾಯಿಸುತ್ತಿರುವ ಇಲಾಖೆ

ಕೊರೋನಾ ಹಿನ್ನೆಲೆಯಲ್ಲಿ ಬಸ್‌ಗಳಿಗೆ ಪ್ರಯಾಣಿಕರ ಸಂಖ್ಯೆ ಕುಸಿತವಾಗಿದೆ. ಹೀಗಾಗಿ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಬಸ್‌ ಕಾರ್ಯಾಚರಣೆ ಮಾಡಲಾಗುತ್ತಿದೆ. ಇದರಿಂದ ಸಾಕಷ್ಟು ನೌಕರರಿಗೆ ಕರ್ತವ್ಯವೇ ಸಿಗುತ್ತಿಲ್ಲ. ಕೆಲ ನೌಕರರ ರಜೆಗಳು ಖಾಲಿಯಾದ ಹಿನ್ನೆಲೆಯಲ್ಲಿ ವೇತನ ರಹಿತ ಬಲವಂತದ ರಜೆ ನೀಡಲಾಗುತ್ತಿದೆ. ಇದರಿಂದ ವೇತನವೂ ಕಡಿತವಾಗುತ್ತಿದ್ದು, ಜೀವನ ದೂಡುವುದು ಕಷ್ಟವಾಗಿದೆ. ಇದೀಗ ಭತ್ಯೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಾರಿಗೆ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.