ಯಾವ ಮನುಷ್ಯ ಸೋಲನ್ನು ಹೆದರಿಸುತ್ತಾನೋ ಅವನು ಒಬ್ಬ ಉತ್ತಮ ರಾಜಕರಣೆಯಾಗುತ್ತಾನೆ ಎಂದು ಎಚ್‌. ಡಿ. ದೇವೇಗೌಡ ಹೇಳಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ತಾವು ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಿಂದ ನಿಲ್ಲುತ್ತೇನೆಂದು ಅಂದುಕೊಂಡಿರಲಿಲ್ಲ. ವಿಧಿ ನನ್ನನ್ನು ಇಲ್ಲಿಗೆ ಕರೆ ತಂದಿತು. ಫಲಿತಾಂಶ ನನ್ನ ಪರವಾಗಿ ಬಂದಿಲ್ಲ. ಆದರೂ ಕುಂದಿಲ್ಲ ಎಂದಿದ್ದಾರೆ.

ತುಮಕೂರು(.05): ತಾವು ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಿಂದ ನಿಲ್ಲುತ್ತೇನೆಂದು ಅಂದುಕೊಂಡಿರಲಿಲ್ಲ. ವಿಧಿ ನನ್ನನ್ನು ಇಲ್ಲಿಗೆ ಕರೆ ತಂದಿತು. ಫಲಿತಾಂಶ ನನ್ನ ಪರವಾಗಿ ಬಂದಿಲ್ಲ. ಆದರೂ ಕುಂದಿಲ್ಲ. ಕೆಲವೊಂದು ಬಾರಿ ದೈವದ ಆಟ ಇರುತ್ತದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದರು.

ಅವರು ತುಮಕೂರಿನಲ್ಲಿ ಜಿಲ್ಲಾ ಜೆಡಿಎಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ ನಾನು ಯಾವುದೋ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಯಾವ ಮನುಷ್ಯ ಸೋಲನ್ನು ಹೆದರಿಸುತ್ತಾನೋ ಅವನು ಒಬ್ಬ ಉತ್ತಮ ರಾಜಕರಣೆಯಾಗುತ್ತಾನೆ ಎಂದರು. ರಾಜಕೀಯದಲ್ಲಿ ನಾನು ಹಲವು ಏಳು ಬೀಳುಗಳನ್ನು ಕಂಡಿದ್ದೇನೆ. ಈ ಪಕ್ಷವನ್ನು ಬೆಳಸಬೇಕಾದರೆ ಯುವಕರು ಪಾತ್ರ ದೊಡ್ಡದು ಎಂದರು. ನಾನು ಪಕ್ಷವನ್ನು ಕಟ್ಟಲು ಅನೇಕ ಹೋರಾಟ ಮಾಡಿದ್ದೇನೆ. 15 ಚುನಾವಣೆಗೆ ನಿಂತಿದ್ದೇನೆ ಎಂದರು.

ಯಾರೊಬ್ಬರಿಗೂ ‘ಮಹಾತ್ಮ’ ಪದ ಬಳಸಬಾರದು:

ದೇಶದಲ್ಲಿ ಗಾಂಧೀಜಿಯವರನ್ನು ಹೊರೆತುಪಡಿಸಿ ಇನ್ಯಾರಿಗೂ ‘ಮಹಾತ್ಮ’ ಎಂಬ ಪದ ಬಳಕೆ ಮಾಡಬಾರದು ಎಂದ ಅವರು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿಗೆ ಯಾರೊಬ್ಬರು ಸಾಟಿಯಿಲ್ಲ. ಅವರನ್ನು ಯಾರೊಂದಿಗೂ ಹೋಲಿಕೆ ಮಾಡಬಾರದು. ಯಾರಿಗೂ ಆ ಪದವನ್ನು ಬಳಕೆ ಮಾಡುವ ಅಧಿಕಾರ ಇಲ್ಲ. ಕಾಂಗ್ರೆಸ್‌ಗೂ ಇಲ್ಲ, ನನಗೂ ಇಲ್ಲ ಎಂದರು.

ಸಂಸತ್‌ ಭವನದ ಮುಂದೆ ಪ್ರತಿಭಟನೆ ಎಚ್ಚರಿಕೆ:

ಉತ್ತರ ಕರ್ನಾಟಕದಲ್ಲಿ ಜನ ಸಾಯತ್ತಿದ್ದಾರೆ. ಕೇಂದ್ರ ಸರ್ಕಾರ ಕಣ್ಣುಮುಚ್ವಿ ಕುಳಿತಿದೆ. .5 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿ ಅಂತಾ ಕೇಂದ್ರಕ್ಕೆ ಪತ್ರ ಬರೆದೆ. ಯಾವುದೇ ಉತ್ತರ ಬರಲಿಲ್ಲ. ಯಡಿಯೂರಪ್ಪನವರಿಗೂ ಪತ್ರ ಬರಿಯುತ್ತೇನೆ. ಬಡವರ ಕಷ್ಟಕ್ಕೆ ಸ್ಪಂದಿಸುವಂತೆ ಕೇಳುತ್ತೇನೆ. ಅವರು ಈ ರಾಜ್ಯದ 6.5 ಕೋಟಿ ಜನರ ಮುಖ್ಯಮಂತ್ರಿ. ನಮ್ಮಲ್ಲಿ ರಾಜಕೀಯ ಭಿನ್ನಾಭಿಪ್ರಾಯ ಇರಬಹುದು. ಆದರೆ ಬಡವರಿಗೆ ಮೋಸ ಮಾಡಬಾರದು. ನೆರೆ ಪರಿಹಾರಕ್ಕಾಗಿ ಒತ್ತಾಯ ಮಾಡುತ್ತೇನೆ. ಅದಕ್ಕೂ ಬಗ್ಗದಿದ್ದಾಗ ಸಂಸತ್‌ ಭವನದ ಮುಂದೆ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು.

ಮೋದಿ ತಪ್ಪಿನಿಂದ ಆರ್ಥಿಕತೆ ಕುಸಿತ:

ಕೆಲ ತಪ್ಪುಗಳಿಂದ ಮೋದಿ ಇವತ್ತಿನ ಆರ್ಥಿಕ ಸ್ಥಿತಿಗೆ ಕಾರಣವಾಗಿದ್ದಾರೆ. ಇದಕ್ಕೆ ನಾನಾಗಲಿ, ಮನಮೋಹನ್‌ ಸಿಂಗ್‌ ಕಾರಣರಲ್ಲ. ಈ ಕೆಟ್ಟಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಒಂದು ರುಪಾಯಿ ಕೊಟ್ಟಿಲ್ಲ. ಇಲ್ಲಿ ಎಲ್ಲರಲ್ಲೂ ಮನವಿ ಮಾಡತ್ತೇನೆ ಎಂದರು. ಮೂರು ದಿವಸ ಕಲಾಪ ಇಟ್ಟುಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಮಾಡುತ್ತಿದ್ದಾರೆ. 3 ದಿನಕ್ಕೆ 9 ತಿಂಗಳ ಬಜೆಟ್‌ ಅಪ್ರುವಲ್‌ ಮಾಡಬೇಕು ಎಂದರು.

ತುಮಕೂರು: ಸೋತ ಕ್ಷೇತ್ರದಿಂದಲೇ ಪಕ್ಷ ಕಟ್ಟೋಕೆ ಸಜ್ಜಾದ ದೇವೇ ಗೌಡ್ರು..!

ಫ್ರೀಡಂ ಪಾರ್ಕಿನಲ್ಲಿ ಧರಣಿ ಮಾಡೋಣ. ಎಲ್ಲರೂ ಸೇರಿ ಶಾಂತಿಯುತ ಪ್ರತಿಭಟನೆ ಮಾಡೋಣ. ತಾವೆಲ್ಲರೂ ಭಾಗವಹಿಸಬೇಕೆಂದು ಮನವಿ ಮಾಡಿದ ಗೌಡರು, ಇನ್ನು ಮೂರ್ನಾಕು ತಿಂಗಳಲ್ಲಿ ದೈವೆಚ್ಚೆ ಏನೋ ನಡೆಯುತ್ತದೆ. ಮಧ್ಯಂತರ ಚುನಾವಣೆ ಬರುವುದು ಗ್ಯಾರಂಟಿ. ಅದಕ್ಕೆಲ್ಲಾ ನೀವೆಲ್ಲಾ ತಯಾರಾಗಬೇಕು ಎಂದು ಕರೆ ನೀಡಿದರು.

ನಾನು ಹುಟ್ಟು ಹೋರಾಟಗಾರ. ಯಾವುದಕ್ಕೂ ಜಗ್ಗುವುದಿಲ್ಲ. ಹೆಣ್ಣು ಮಕ್ಕಳಿಗೆ ಮತ್ತು ಮುಸ್ಲಿಂ ಜನಾಂಗಕ್ಕೆ ರಿಸರ್ವವೇಷನ್‌ ತಂದಿದ್ದು ನಾನು. ನಾಯಕ ಸಮುದಾಯಕ್ಕೆ ಮೀಸಲಾತಿ ತಂದವನು ನಾನೇ ಕಾಲ ಬರುತ್ತದೆ ಎಲ್ಲದಕ್ಕು ಎಂದು ದೇವೇ ಗೌಡ ಹೇಳಿದ್ದಾರೆ.

ಕುರ್ಚಿಯೇ ಕೊಡೆಯಾಯ್ತು:

ಮಾಜಿ ಪ್ರಧಾನಿ ದೇವೇಗೌಡರ ಕಾರ್ಯಕ್ರಮಕ್ಕೆ ಮಳೆ ಅಡ್ಡಿಯಾದ ಘಟನೆ ನಡೆಯಿತು.ತುಮಕೂರು ಜಿಲ್ಲಾ ಜೆಡಿಎಸ್‌ ಕಚೇರಿ ಆವರಣದಲ್ಲಿ ಸಮಾವೇಶ ನಡೆಯುತ್ತಿದ್ದಂತೆ ಮಳೆ ಆರಂಭವಾಯಿತು. ಕೂಡಲೇ ಕಾರ್ಯಕರ್ತರು ಛೇರ್‌ಗಳನ್ನು ತಮ್ಮ ತಲೆ ಮೇಲೆ ಇಟ್ಟುಕೊಂಡರು. ಸುಮಾರು 15 ನಿಮಿಷ ಸುರಿದ ಮಳೆ ಬಳಿಕೆ ನಿಂತಿತು.

ಯಡಿಯೂರಪ್ಪ ಅವ್ರಿಗೆ ಹಣಕಾಸಿನ ಜ್ಞಾನ ಇಲ್ಲ..! ಸಿದ್ದು ವ್ಯಂಗ್ಯ

ಕಾರ್ಯಕ್ರಮದ ಉದ್ಘಾಟನೆ ವೇಳೆ ಮಳೆ ಆಗಮಿಸಿದ್ದರಿಂದ ಕಾರ್ಯಕರ್ತರು ಹಾಗೂ ಮುಖಂಡರು ಕುರ್ಚಿಗಳ ಆಶ್ರಯ ಪಡೆದರು, ಮಾಜಿ ಪ್ರಧಾನಿ ದೇವೇಗೌಡ ಅವರು ಛತ್ರಿ ಆಶ್ರಯ ಪಡೆದರು.