* ಕೊರೋನಾ ಹಿನ್ನೆಲೆ ಸರಳವಾಗಿ ಆಚರಿಸಲು ಜಿಲ್ಲಾಡಳಿತ ನಿರ್ಧಾರ* ಹಾಸನ ನಗರದಲ್ಲಿ ದೀಪಾಲಂಕಾರ ಹಾಗೂ ಪುಷ್ಪಲಂಕಾರ ವ್ಯವಸ್ಥೆ * ದಸರಾ ಆಚರಣೆಯ ಮಾರ್ಗ ಸೂಚಿ ಪ್ರಕಟಿಸಿದ ರಾಜ್ಯ ಸರ್ಕಾರ
ಹಾಸನ(ಅ.08): ಈ ಬಾರಿ ಹಾಸನಾಂಬೆ(Hasanabe) ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಅ.28 ರಿಂದ ನ.6 ರವರೆಗೆ ನಡೆಯಲಿದ್ದು, ಕೊರೋನಾ(Coronavirus) ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದೆ.
ಪರಿಣಾಮವಾಗಿ ಈ ಬಾರಿಯೂ ಸಾರ್ವಜನಿಕರಿಗೆ ದೇವಿಯ ನೇರ ದರ್ಶನ ಇರುವುದಿಲ್ಲ. ಕಳೆದ ಬಾರಿಯಂತೆ ನಗರದ 7-8 ಕಡೆ ಎಲ್‌ಇಡಿ ದೊಡ್ಡ ಪರದೆ ಅಳವಡಿಸುವ ಮೂಲಕ ಹಾಸನಾಂಬೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.
ಗುರುವಾರ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಹಾಸನಾಂಬಾ ಉತ್ಸವಕ್ಕೆ ಚಾಲನೆ ನೀಡಲು ಈ ಬಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಹಾಗೂ ಆದಿಚುಂಚನಗಿರಿಯ ನಿರ್ಮಲಾನಂದ ಸ್ವಾಮೀಜಿ(Niramalanand Swamiji) ಅವರನ್ನು ಆಹ್ವಾನಿಸಲಾಗುವುದು. ದೇವಿಗೆ ನೆರವೇರಿಸುವ ಪೂಜೆಯನ್ನು ಆನ್‌ಲೈನ್ ಮೂಲಕ ಪ್ರಸಾರ ಮಾಡಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಶಾಸಕ ಪ್ರೀತಂ ಗೌಡ ವಿರುದ್ಧ ಗಂಭೀರ ಆರೋಪ : ಹಾಸನಾಂಬೆ ಮುಂದೆ ಆಣೆ ಮಾಡಲು ಸವಾಲು
ರಾಜ್ಯ ಸರ್ಕಾರ ದಸರಾ ಆಚರಣೆಯ ಮಾರ್ಗ ಸೂಚಿಯನ್ನು ಪ್ರಕಟಿಸಿದ್ದು, ಜೊತೆಗೆ ಜಿಲ್ಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಕೊರೋನಾ ಸೋಂಕಿನ ದರ ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಈ ಬಾರಿಯೂ ಹಾಸನಾಂಬಾ ನೇರ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡದಿರಲು ತೀರ್ಮಾನಿಸಿರುವುದಾಗಿ ತಿಳಿಸಿದರು.
ನಗರದಲ್ಲಿ ದೀಪಾಲಂಕಾರ ಹಾಗೂ ಪುಷ್ಪಲಂಕಾರ ವ್ಯವಸ್ಥೆ ಮಾಡಲಾಗುತ್ತದೆ. ವಿಶೇಷ ಪೂಜೆ ಹೊರತುಪಡಿಸಿ ಧಾರ್ಮಿಕ ಕಾರ್ಯಕ್ರಮಗಳು ಮಾತ್ರ ನಡೆಯಲಿದೆ. ಕಳೆದ ಬಾರಿಯಂತೆ ನಗರದ 7-8 ಕಡೆ ಎಲ್‌ಇಡಿ ದೊಡ್ಡ ಪರದೆ ಅಳವಡಿಸುವ ಮೂಲಕ ಹಾಸನಾಂಬೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ವಿದ್ಯುತ್ ದೀಪಾಲಂಕಾರ, ಹೂವಿನ ಅಲಂಕಾರಗಳು, ಉತ್ಸವ ಕುರಿತ ಫ್ಲೆಕ್ಸ್ ಹಾಕಲಾಗುವುದು ಎಂದರು.ಹಾಸನಾಂಬಾ ಉತ್ಸವದಲ್ಲಿ ಯಾವುದೇ ಸಂಪ್ರದಾಯಗಳು, ಆಚರಣೆಗಳು ಮತ್ತು ವಿಜೃಂಭಣೆಗೆ ಕೊರತೆಯಾಗದಂತೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
