Asianet Suvarna News Asianet Suvarna News

ಮಠಾಧೀಶರ ಹೋರಾಟ ತಡೆದರೆ ರಾಜ್ಯಕ್ಕೆ ಬೆಂಕಿ ಹತ್ತುತ್ತೆ : Pramod Muthalik ಎಚ್ಚರಿಕೆ

ಮಠಾಧೀಶರ ಒಕ್ಕೂಟ ಜೂ. 12ರಂದು ಕರೆಕೊಟ್ಟಿರುವ ಹೋರಾಟ  ತಡೆದರೆ ರಾಜ್ಯಾದ್ಯಂತ ಬೆಂಕಿ ಹೊತ್ತುತ್ತದೆ.. ಹುಷಾರ್ ! ಎಂದು ಪ್ರಮೋದ ಮುತಾಲಿಕ್ ರಾಜ್ಯ ಸರಕಾರವನ್ನು ಎಚ್ಚರಿಸಿದ್ದಾರೆ

north karnataka pontiff Basavakalyan chalo rally on june 12th gow
Author
Bengaluru, First Published Jun 4, 2022, 2:27 PM IST

ವರದಿ : ಶರಣಯ್ಯ ಹಿರೇಮಠ, ಏಷ್ಯಾನೇಟ್ ಸುವರ್ಣ ನ್ಯೂಸ್   

ಕಲಬುರಗಿ (ಜೂ 4): ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಆಂಜನೇಯ ದೇವಸ್ಥಾನವನ್ನು ಧ್ವಂಸಮಾಡಿ ಮಸೀದಿ ನಿರ್ಮಾಣ ಮಾಡಿದ್ದೆ ಟಿಪ್ಪುಸುಲ್ತಾನ್. ಈಗ ಅಲ್ಲಿ ಆಂಜನೇಯನಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು. ಜೊತೆಗೆ  ಮಠಾಧೀಶರ ಒಕ್ಕೂಟ ಜೂ. 12ರಂದು ಕರೆಕೊಟ್ಟಿರುವ ಹೋರಾಟ ತಡೆದರೆ ಬೆಂಕಿ ಬೀಳುತ್ತೆ ಎಂದು ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ. 

ಕಲ್ಬುರ್ಗಿಯಲ್ಲಿ ಇಂದು ಸುವರ್ಣನ್ಯೂಸ್ ಜೊತೆ ಮಾತನಾಡಿದ ಅವರು, ಹಿಂದೂಪರ ಸಂಘಟನೆಗಳಿಂದ ಶ್ರೀರಂಗಪಟ್ಟಣ ಚಲೋ ಹಮ್ಮಿಕೊಂಡಿರುವುದುರಲ್ಲಿ ತಪ್ಪೇನಿದೆ? ಸರ್ಕಾರ ಅವರನ್ನು ತಡೆದರುವುದರಲ್ಲಿ ತಪ್ಪಿದೆ ಎಂದರು. 

ಶ್ರೀರಂಗಪಟ್ಟಣದಲ್ಲಿ ಆಂಜನೇಯ ದೇವಸ್ಥಾನ ಭಗ್ನ ಮಾಡಿ ಮಸೀದಿ ನಿರ್ಮಾಣ ಮಾಡಿದ್ದೇ ಟಿಪ್ಪು ಸುಲ್ತಾನ್.‌ ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಅದು ದೇವಸ್ಥಾನ ಎನ್ನುವುದಕ್ಕೆ ಬೇಕಾದ ಎಲ್ಲಾ ಕುರುಹುಗಳು ಅಲ್ಲಿ ಸಿಕ್ಕಿವೆ. ಈ ಹೋರಾಟ ಇಂದು ನಿನ್ನೆಯದಲ್ಲ.. ಕಳೆದ 20 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಈಗ ಈ ಹೋರಾಟ ಪೀಕ್ ಹಂತಕ್ಕೆ ಬಂದು ನಿಂತಿದೆ ಎಂದರು.

ಖಾಸಗಿ ಪ್ಲೇ ಸ್ಕೂಲ್ ಗಳಿಗೆ ಸೆಡ್ಡು ಹೊಡೆದ Udupiಯ ಹವಾನಿಯಂತ್ರಿತ ಅಂಗನವಾಡಿ 

ವಿ.ಹೆಚ್.ಪಿ, ಬಜರಂಗದಳ ಕಾರ್ಯಕರ್ತರು ಅಲ್ಲಿ ಪೂಜೆ ಮಾಡುವುದಕ್ಕಾಗಿ ತೆರಳುತ್ತಿದ್ದಾರೆ.‌ ಸರ್ಕಾರ ಇವರನ್ನು ತಡೆದಿದ್ದು  ತಪ್ಪು. ಸರಕಾರ ಮಸೀದಿ ಒಳಗಡೆ ಅತಿಕ್ರಮಣ ಮಾಡಿರುವವರನ್ನು ತಡೆಯಬೇಕಿತ್ತು. ಅಲ್ಲಿ ನಮಾಜ್ ಮಾಡುತ್ತಿರುವುದು,  ಮದರಸ ಮಾಡಿದ್ದು ಅಕ್ರಮವಾಗಿ. ಇದು ಪ್ರಾಚ್ಯವಸ್ತು ಇಲಾಖೆ ಕಟ್ಟಡ. ಯಾರು ಅತಿಕ್ರಮಣ ಮಾಡುವಂತಿಲ್ಲ.  ಆದ್ರೂ ಒಳಗಡೆ ಹೇಗೆ ನಮಾಜ್ ಮಾಡುತ್ತಿದ್ದಾರೆ ? ಅದನ್ನು ತಡೆಯುವುದು ಸರಕಾರದ ಕೆಲಸ ಅಲ್ಲವೇ ಎಂದು ಮುತಾಲಿಕ್ ಖಾರವಾಗಿ ಪ್ರಶ್ನಿಸಿದರು. 

ಅದನ್ನು ತಡೆಯುವುದು ಬಿಟ್ಟು ಪೂಜೆ ಮಾಡುತ್ತಿರುವರನ್ನು ತಡೆಯುತ್ತಿರುವುದು ಅಕ್ಷ್ಯಮ್ಯ.  ಏನಾದ್ರೂ ಗಲಭೆಗಳಾದ್ರೆ ಇದಕ್ಕೆ ಸರಕಾರವೇ ನೇರ ಹೊಣೆಯಾಗಲಿದೆ ಎಂದು ಅವರು ಎಚ್ಚರಿಕೆ ನೀಡಿದರು. 

ಕಲ್ಯಾಣದಲ್ಲಿ ನಿರ್ಭಂದಕ್ಕೆ ಆಕ್ರೋಶ: ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ ಬಸವಣ್ಣನವರ ಅನುಭವ ಮಂಟಪವನ್ನು ಪೀರಪಾಶಾ ದರ್ಗಾ ಮಾಡಲಾಗಿದೆ ಎಂದು ಆರೋಪಿಸಿ ಇದೇ 12 ರಂದು ಹಲವು ಮಠಾಧೀಶರು ಬಸವಕಲ್ಯಾಣ ಚಲೋ ಹಮ್ಮಿಕೊಂಡಿದ್ದಾರೆ. ಇದರ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಳ್ಳಲು ನಾನು ಇಂದು ಬಸವಕಲ್ಯಾಣಕ್ಕೆ ತೆರಳಬೇಕಿತ್ತು. ಆದ್ರೆ ಬೀದರ ಜಿಲ್ಲಾಡಳಿತ ನಿರ್ಭಂಧ ಹೇರಿದೆ ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು. 

ಪ್ರತಿಷ್ಠಿತ Spelling Bee ಪ್ರಶಸ್ತಿ ಮುಡಿಗೇರಿಸಿಕೊಂಡ ಭಾರತ ಮೂಲದ ಹರಿಣಿ ಲೋಗನ್!

ಬಸವಕಲ್ಯಾಣಕ್ಕೆ ತೆರಳಲು ನಮಗೆ ನಿರ್ಬಂಧ ವಿಧಿಸಿದ್ದು ಸರಿಯಲ್ಲ. ಮುಸ್ಲಿಂ ವೋಟಿಗಾಗಿ ಕಾಂಗ್ರೆಸ್,ಜೆಡಿಎಸ್ ನವರು ಈ ಹಿಂದೆ ನಿರ್ಬಂಧ ವಿಧಿಸಿದ್ದರು. ಬಿಜೆಪಿಯವರೂ ಈಗ ಅದೇ ದಾರಿನಲ್ಲಿ ಸಾಗುತ್ತಿರುವುದು ನಮಗೆ ಸಿಟ್ಟು ತರಿಸುತ್ತಿದೆ. ನೀವು ತಡೆದಿರುವುದು ಮುತಾಲಿಕ್ ಗೆ ಮಾತ್ರ ಅಲ್ಲ,  ಸತ್ಯವನ್ನು ತಡೆಯುತ್ತಿದ್ದೀರಿ, ಹಿಂದುತ್ವವನ್ನು ತಡೆಯುತ್ತಿದ್ದಿರಿ. ನಿಮಗೆ ತಾಕತ್ತಿದ್ದರೆ ಕಿಡಿಗೇಡಿಗಳನ್ನು ತಡೆಯಿರಿ ಎಂದು ಮುತಾಲಿಕ್ ಸರಕಾರಕ್ಕೆ ಸವಾಲು ಹಾಕಿದರು. 

ಯಾರು ತಪ್ಪಿತಸ್ಥರು ? ಯಾರು ಗಲಭೆಕೋರರು ಅವರನ್ನು ತಡೆಯಿರಿ. ಅಂಥವರನ್ನು ತಡೆಯುವ ತಾಕತ್ತು ಇಲ್ಲದ ನೀವು ನಮ್ಮನ್ನ ತಡಿತಿರಾ ? ನಾವೇನು ಕೈಯಲ್ಲಿ ಬಾಂಬು , ಬಂದೂಕು ತಲವಾರ್ ಹಿಡಿದುಕೊಂಡು ಹೋಗುತ್ತಿದ್ದೇವಾ ? ಅನುಭವ ಮಂಟಪಕ್ಕಾಗಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲಿಸಲು ನಾವು ಹೋಗುತ್ತಿದ್ದೇವೆ. ನಮ್ಮ ಮೇಲಿನ ನಿರ್ಬಂಧ ಅಕ್ಷಮ್ಯ ಅಪರಾಧ ಎಂದರು. 

ರಾಜ್ಯಕ್ಕೆ ಬೆಂಕಿ ಹತ್ತುತ್ತೆ ಹುಷಾರ್: ಮಠಾಧೀಶರ ಒಕ್ಕೂಟ ಜೂ. 12ರಂದು ಕರೆಕೊಟ್ಟಿರುವ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. 12ನೇ ತಾರೀಖಿನ ಹೋರಾಟ ತಡೆದರೆ ರಾಜ್ಯಾದ್ಯಂತ ಬೆಂಕಿ ಹೊತ್ತುತ್ತದೆ.. ಹುಷಾರ್ ! ಎಂದು ಪ್ರಮೋದ ಮುತಾಲಿಕ್ ರಾಜ್ಯ ಸರಕಾರವನ್ನು ಎಚ್ಚರಿಸಿದರು. ಅದನ್ನು ತಡೆಯುವ ಕೆಲಸಕ್ಕೆ ಮುಂದಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ.‌ ಅವರ ಬಳಿ ಇದು ಅನುಭವ ಮಂಟಪ ಅನ್ನುವಂತಹ ದಾಖಲೆಗಳಿವೆ. ಆ ಹೋರಾಟಗಾರರೊಂದಿಗೆ ಚರ್ಚಿಸುವ ಕೆಲಸ ಮಾಡಿ , ತಡೆಯುವಂತಹ ಕೆಲಸ ಮಾಡಿದರೆ ಹುಷಾರ್ ಎಂದು ಎಚ್ಚರಿಕೆ ನೀಡಿದರು.

Follow Us:
Download App:
  • android
  • ios