ಮಂಗಳೂರು [ಡಿ.29]:  ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕೆಲವೆಡೆ ಶನಿವಾರ ರಾತ್ರಿ ದಿಢೀರ್‌ ಮಳೆಯಾಗಿದೆ. 

ರಾತ್ರಿ ಸುಮಾರು 8.30ರ ವೇಳೆಗೆ ಮಂಗಳೂರು, ಮೂಲ್ಕಿ, ಮೂಡುಬಿದಿರೆ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಅಲ್ಪ ಮಳೆಯಾಗಿದೆ. 

ಭಾರೀ ಗುಡುಗು, ಸಿಡಿಲಿನೊಂದಿಗೆ ಮಳೆ ಸುರಿದದ್ದು ವಿಶೇಷವಾಗಿತ್ತು. ಕಾರ್ಕಳ ತಾಲೂಕಿನ ವಿವಿಧ ಭಾಗಗಳಲ್ಲಿ ಶನಿವಾರ ಸಂಜೆ 7 ಗಂಟೆಗೆ ಸಿಡಿಲು ಸಹಿತ ಹಠಾತ್‌ ಮಳೆಯಾಗಿದೆ. 

ಕುಕ್ಕುಂದೂರು, ಕಾರ್ಕಳ ನಗರ, ಹೆಬ್ರಿಯ ಕೆಲವೆಡೆ ಹಾಗೂ ಬಜಗೋಳಿಯ ಕೆಲವೆಡೆ ಮಳೆ ತಂಪೆರೆದಿದೆ. ಇದಕ್ಕೂ ಮುನ್ನ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕೆಲವೆಡೆ ಸಂಜೆ ಗುಡುಗು ಸಹಿತ ಸಾಧಾರಣ ಮಳೆಯಾಗಿದೆ. ಕಳೆದೆರೆಡು ದಿನದ ಹಿಂದೆ ಈ ಭಾಗದಲ್ಲಿ ಉತ್ತಮ ಮಳೆಯಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೆಲ ದಿನಗಳಿಂದ ಅಲ್ಪ ಬಿಡುವು ನೀಡಿದ್ದ ಮಳೆ ಇದೀಗ ಮತ್ತೆ ಅಬ್ಬರಿಸಲು ಶುರು ಮಾಡಿದೆ. ಚಳಿಗಾಲದಲ್ಲಿಯೂ ಮಳೆಯಾಗುತ್ತಿರುವುದು ವೈಪರೀತ್ಯ ಎನಿಸಿದೆ.