ಬೆಂಗಳೂರು[ಡಿ.25]  ಧಾಮ್ ಧೂಮ್ ಅಂಥ ಮದ್ವೆ ಆಗೋ ಯೊಚನೆ ಇದ್ದವರು ಈ ಸುದ್ದಿ ಓದಲೇಬೇಕು.  ವಾಲಗದ ಸೌಂಡ್ , ನಾದಸ್ವರ, ಬ್ಯಾಂಡ್ , ಡೊಳ್ಳು ಕುಣಿತಕ್ಕೆ ನಿರ್ಬಂಧ ಹಾಕಲಾಗಿದೆ. 

ಮಾಲಿನ್ಯ ನಿಯಂತ್ರಣ ಮಂಡಳಿ ಜಯಮಹಲ್ ಪ್ಯಾಲೇಸ್ ಗೆ ನೋಟಿಸ್  ನೀಡಿದ್ದು  ಮದುವೆ , ರಿಸೆಪ್ಶನ್ ಸಂದರ್ಭದಲ್ಲಿ ಸೌಂಡ್ ಪೊಲ್ಯುಶನ್ ಮಾಡದಂತೆ ತಿಳಿಸಿದೆ. ಸೌಂಡ್ ಮಾಡಿದ ಸಂದರ್ಭ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ.

ಜಯಮಹಲ್ ಪ್ಯಾಲೇಸ್ ನಲ್ಲಿ ಸಾಮಾನ್ಯ ವಾಗಿ ಮದ್ವೆ ,  ರಿಸೆಪ್ಶನ್ , ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ವಾಲಗದ ಸದ್ದು, ಮ್ಯೂಸಿಕ್ ನಾದಸ್ವರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಡೊಳ್ಳು ಕುಣಿತದಿಂದ ಸೌಂಡ್ ಪೊಲ್ಯುಷನ್ ಆಗುತ್ತಿದೆ ಎಂದು ನೋಟಿಸ್ ನೀಡಿದೆ.

ಜೀವನವೆಲ್ಲ ಕೂಡಿಟ್ಟು ಮದ್ವೆ ಮಾಡೋರಿಗೆ ಅಂಬಾನಿ ಮನೆ ಮದುವೆ ಪಾಠ!

ನೋಟಿಸ್ ನೋಡಿ ಜಯಮಹಲ್ ಪ್ಯಾಲೇಸ್ ಹೋಟೆಲ್ ಸಿಬ್ಬಂದಿ  ತಬ್ಬಿಬ್ಬಾಗಿದ್ದಾರೆ. ಮದುವೆ ವಾಲಗದ  ಶಬ್ದಕ್ಕೆ ನೋಟಿಸ್ ನೀಡಿದರೆ ಹೇಗೆ? ನಾವೇನು ಡಿಜೆ ಸೌಂಡ್ ಹಾಕಿದ್ದೇವಾ? ಎಂದು ಪ್ರಶ್ನೆ ಮಾಡಿದ್ದಾರೆ. ಒಟ್ಟಿನಲ್ಲಿ ಇದು ಹೊಸದೊಂದು ಚರ್ಚೆಗೆ ವೇದಿಕೆ ಕಲ್ಪಿಸಿಕೊಟ್ಟರೆ ಅಚ್ಚರಿ ಇಲ್ಲ.