Asianet Suvarna News Asianet Suvarna News

Bitcoin Scam: ಬಿಟ್‌ ಕಾಯಿನ್‌ ತಪ್ಪಿತಸ್ಥರನ್ನು ಬಿಡಲ್ಲ​: ಬಿ.ವೈ.ರಾಘವೇಂದ್ರ!

*ಉಪ ಚುನಾವಣೆ ನಂತರ ವಿಪಕ್ಷಕ್ಕೆ ಯಾವುದೇ ವಿಷಯ ಇಲ್ಲ, 
*ಈಗ ಮೊಸರಲ್ಲಿ ಕಲ್ಲು ಹುಡುಕುತ್ತಿವೆಯಷ್ಟೇ: ಲೇವಡಿ
*ಸಂಬಂಧಿಸಿದ ತನಿಖಾ ಸಂಸ್ಥೆಗಳು ಕ್ರಮ ಕೈಗೊಳ್ಳುತ್ತವೆ 
*ತನಿಖೆ ಸಂದರ್ಭದಲ್ಲಿ ನಾವು ಹೇಳಿಕೆ ನೀಡುವುದು ಸರಿಯಲ್ಲ

nobody will be beard in bitcoin scam said BJP MP B Y Raghavendra in Davangere
Author
Bengaluru, First Published Nov 12, 2021, 1:33 AM IST
  • Facebook
  • Twitter
  • Whatsapp

ದಾವಣಗೆರೆ(ನ.12): ಬಿಟ್‌ ಕಾಯಿನ್‌ ಪ್ರಕರಣದಲ್ಲಿ (Bitcoin Scam) ಯಾರನ್ನೂ, ಯಾವುದನ್ನೂ ಮುಚ್ಚಿಡುವ ಪ್ರಶ್ನೆಯೇ ಇಲ್ಲ ಎಂದು ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ (Basavraj Bommai) ಸ್ಪಷ್ಟಪಡಿಸಿದ್ದು, ಜಾರಿ ನಿರ್ದೇಶನಾಲಯ ಸೇರಿ ವಿವಿಧ ಇಲಾಖೆಗಳ ತನಿಖೆ ನಡೆದ ಬಗ್ಗೆ ಮಾಧ್ಯಮಗಳಲ್ಲೇ ಗಮನಿಸುತ್ತಿದ್ದೇವೆ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ (B Y Raghavendra) ಹೇಳಿದರು.
ನಗರದ ಜಿಎಂಐಟಿ (GMIT) ಬಳಿ ತಮ್ಮ ಕುಟುಂಬ ಒಡೆತನದ ಕಿಯಾ ಶೋ ರೂಂ (Kia Showroom) ಉದ್ಘಾಟನೆಗೆ ಆಗಮಿಸಿದ್ದ ವೇಳೆ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 2-3 ವರ್ಷದಿಂದಲೂ ಸಂಬಂಧಿಸಿದ ಇಲಾಖೆಗಳಿಂದ ತನಿಖೆ ನಡೆಯುತ್ತಲೇ ಇದೆ. ವಿಪಕ್ಷಗಳು ದಾಖಲೆ ಇಲ್ಲವೆಂಬುದಾಗಿ ಹೇಳುತ್ತಿದ್ದ ಬೆನ್ನಲ್ಲೇ, ಮಾಧ್ಯಮಗಳಲ್ಲಿ (Media) ದಾಖಲೆಗಳ ಬಹಿರಂಗಗೊಂಡಿರುವುದನ್ನು ಗಮನಿಸಿದ್ದೇನೆ ಎಂದು ತಿಳಿಸಿದರು.

ಸಂಬಂಧಿಸಿದ ತನಿಖಾ ಸಂಸ್ಥೆಗಳು ಕ್ರಮ ಕೈಗೊಳ್ಳುತ್ತವೆ

ಯಾರೇ ತಪ್ಪಿತಸ್ಥರಿದ್ದರೂ ಕಾನೂನಿನಿಂದ ಹೊರತಲ್ಲ. ಶಿಕ್ಷೆಯೂ ತಪ್ಪಿದ್ದಲ್ಲವೆಂದು ದೆಹಲಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹೇಳಿದ್ದನ್ನು ಗಮನಿಸಿದ್ದೇನೆ. 2 ವರ್ಷ ಹಿಂದಿನ ಹಗರಣ ಅದು. ಆಗಿನಿಂದಲೂ ತನಿಖೆ ನಡೆಯುತ್ತಿದೆ. ಈಗ ಒಂದು ರೂಪ, ಹಂತಕ್ಕೆ ತನಿಖೆ ತಲುಪಿದೆ. ತನಿಖೆ ಸಂದರ್ಭದಲ್ಲಿ ನಾವು ಹೇಳಿಕೆ ನೀಡುವುದು ಸರಿಯಲ್ಲ. ವಿಶೇಷವಾಗಿ ಮೇಲ್ಮನೆ ಚುನಾವಣೆ (Karnataka MLC Election) ಸಂದರ್ಭದಲ್ಲಿ ಇದೆಲ್ಲಾ ಸರಿಯಲ್ಲ ಎಂದು ಆಕ್ಷೇಪಿಸಿದರು. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ನಾಯಕತ್ವವನ್ನು ನಾಡಿನ ಜನ ಒಪ್ಪಿದ್ದಾರೆ, ಆಶೀರ್ವದಿಸಿದ್ದಾರೆ. ಬಿಟ್‌ ಕಾಯಿನ್‌ ವಿಚಾರದಲ್ಲಿ ಸಂಬಂಧಿಸಿದ ಇಲಾಖೆಗಳು, ತನಿಖಾ ಸಂಸ್ಥೆಗಳು (Agency) ಕ್ರಮ ಕೈಗೊಳ್ಳುತ್ತವೆ. ಎಂದರು.

ವಿಷಯವೇ ಇಲ್ಲದ ವಿಪಕ್ಷಗಳ ನಿತ್ಯ ಮಿಥ್ಯಾರೋಪ!

ಮೊನ್ನೆ ಮೊನ್ನೆಯಷ್ಟೇ ಹಾನಗಲ್‌, ಸಿಂಧಗಿ ಉಪ ಚುನಾವಣೆ (Sindgi-Hangal byelection) ಮುಗಿದಿದೆ. ಈಗ ವಿಧಾನಪರಿಷತ್‌ ಚುನಾವಣೆ ಶುರುವಾಗಿದೆ. ತಾವು ಮಾಡಿದ್ದ ಅಭಿವೃದ್ಧಿ ಕೆಲಸ, ಕಾರ್ಯಕ್ರಮಗಳನ್ನು ಹೇಳಿಕೊಳ್ಳುವ ಸ್ಥಿತಿಯಲ್ಲಿ ಕಾಂಗ್ರೆಸ್‌ ಸೇರಿ ವಿಪಕ್ಷಗಳು ಇಲ್ಲ. ಹಾಗಾಗಿ, ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿವೆಯಷ್ಟೇ. ಇದರಿಂದ ಏನೂ ಪ್ರಯೋಜನವಾಗದು ಎಂದು ರಾಘವೇಂದ್ರ ಅವರು ಹೇಳಿದರು.

Bitcoin Scam: ರಾಜ್ಯಕ್ಕೆ 3ನೇ ಬಿಜೆಪಿ ಸಿಎಂ ಖಚಿತ: ಪ್ರಿಯಾಂಕ್‌!

ರೈತ ಪರ, ಜನಪರ, ಅಭಿವೃದ್ಧಿ ಪರ ಮಸೂದೆ ತರಲು ವಿಧಾನಸಭೆ (LA) ಹಾಗೂ ವಿಧಾನ ಪರಿಷತ್‌ (LC) ಎರಡೂ ಕಡೆ ಸ್ಪಷ್ಟಬಹುಮತವನ್ನು ಮತದಾರರು ನೀಡಿದರೆ ಅನುಕೂಲ. ಈ ನಿಟ್ಟಿನಲ್ಲಿ ಡಿಸೆಂಬರ್‌ನಲ್ಲಿ ನಡೆಯುವ ವಿಪ ಚುನಾವಣೆಯಲ್ಲಿ ಪ್ರಜ್ಞಾವಂತ ಮತದಾರರು ಬಿಜೆಪಿಯನ್ನು (BJP) ಗೆಲ್ಲಿಸುವ ಮೂಲಕ ಮೇಲ್ಮನೆಯಲ್ಲೂ ಬಲ ತಂದುಕೊಡುತ್ತಾರೆ ಎಂದು ಅವರು ತಿಳಿಸಿದರು.

Covid 19: ಎಚ್ಚರ! ಕೊರೋನಾ ಇನ್ನೂ ಮುಗಿದಿಲ್ಲ: ಕೇಂದ್ರ

ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯನವರು (Siddaramaiah) ಹಿರಿಯರು. ಅಂತಹವರ ಬಗ್ಗೆ ನಾನು ಹೇಳಿಕೆ ಕೊಡಲು ಸಣ್ಣವನಾಗುತ್ತೇನೆ. ಅದಕ್ಕೆ ಅಷ್ಟೊಂದು ಮಹತ್ವ ನೀಡಬೇಕಿಲ್ಲ ಎಂದು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಟಿಪ್ಪು ಜಯಂತಿ (Tippu Sultan)ಕುರಿತಂತೆ ಸಿದ್ದರಾಮಯ್ಯ ಹೇಳಿಕೆಗೆ ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.

ಬಿಟ್‌ಕಾಯಿನ್‌ ಬಿಟ್ಹಾಕಿ, ಚೆನ್ನಾಗಿ ಕೆಲಸ ಮಾಡಿ: ಮೋದಿ ಕಿವಿಮಾತು!

ಬಿಟ್‌ಕಾಯಿನ್‌ ಪ್ರಕರಣದಲ್ಲಿ (Bitcoin Scam) ಪ್ರತಿಪಕ್ಷಗಳ ವಾಗ್ದಾಳಿಗೆ ಗುರಿಯಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavraj Bommai) ಅವರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಧೈರ್ಯ ತುಂಬಿದ್ದಾರೆ. ಬಿಟ್‌ಕಾಯಿನ್‌ ವಿಚಾರದಲ್ಲಿ ತಲೆಕೆಡಿಸಿಕೊಳ್ಳಬೇಡಿ, ಜನಪರ ಕೆಲಸ ಮಾಡುವತ್ತ ಗಮನ ಕೊಡಿ ಎಂದು ಪ್ರಧಾನಿ ಕಿವಿಮಾತು ಹೇಳಿದ್ದಾರೆ. ರಾಜ್ಯದಲ್ಲಿ ಬಿಟ್‌ಕಾಯಿನ್‌ ಹಗರಣ ಆಡಳಿತ (Ruling) ಮತ್ತು ಪ್ರತಿಪಕ್ಷಗಳ (Opposition) ನಡುವೆ ತೀವ್ರ ವಾಕ್ಸಮರಕ್ಕೆ ಸಾಕ್ಷಿಯಾಗಿರುವ ನಡುವೆಯೇ ಗುರುವಾರ (ನ.11) ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಈ ವಿಚಾರ ತಿಳಿಸಿದರು. ಮೋದಿ ಜತೆಗಿನ ಭೇಟಿ ವೇಳೆ ಬಿಟ್‌ಕಾಯಿನ್‌ ವಿಚಾರ ಚರ್ಚೆಗೇ ಬರಲಿಲ್ಲ, ನಾನೇ ಈ ವಿಚಾರ ಅವರ ಮುಂದೆ ಪ್ರಸ್ತಾಪಿಸಲು ಪ್ರಯತ್ನಿಸಿದೆ ಎಂದು ಸ್ಪಷ್ಟನೆ ನೀಡಿದರು.

Follow Us:
Download App:
  • android
  • ios