Asianet Suvarna News Asianet Suvarna News

Bitcoin Scam: ರಾಜ್ಯಕ್ಕೆ 3ನೇ ಬಿಜೆಪಿ ಸಿಎಂ ಖಚಿತ: ಪ್ರಿಯಾಂಕ್‌!

*ಸಿಎಂ ಬದಲಾಗುತ್ತಾರೆಂಬ ಮಾತಿಗೆ ಈಗಲೂ ಬದ್ಧ
*ನನ್ನ ಬಿಟ್‌ಕಾಯಿನ್‌ ಪ್ರಶ್ನೆಗೆ ಸಿಎಂ ಉತ್ತರಿಸಲಿ!
*ಚರ್ಚೆಗೆ ಬರಲಿ ಎಲ್ಲಾ ರೀತಿಯ ಉತ್ತರ ಕೊಡುತ್ತೇನೆ

Speaking about Bitcoin Scam congress MLA priyank Kharge said Karnataka will get its 3rd CM mnj
Author
Bengaluru, First Published Nov 12, 2021, 12:46 AM IST

ಬೆಂಗಳೂರು(ನ.12) : ಬಿಟ್‌ ಕಾಯಿನ್‌  ಹಗರಣದ (Bitcoin Scam) ಮಾಹಿತಿ ಹೊರ ಬಂದರೆ ಮುಖ್ಯಮಂತ್ರಿ (Chief Minister) ಬದಲಾಗುತ್ತಾರೆ ಎಂಬ ಹೇಳಿಕೆಗೆ ಈಗಲೂ ಬದ್ಧ. ರಾಜ್ಯ ಬಿಜೆಪಿ ಸರ್ಕಾರದಲ್ಲಿ ಮೂರನೇ ಮುಖ್ಯಮಂತ್ರಿ ಅಧಿಕಾರಕ್ಕೆ ಬರುವುದು ಖಚಿತ ಎಂದು ಪುನರುಚ್ಚರಿಸಿರುವ ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ (Priyank Kharge), ಬಿಟ್‌ ಕಾಯಿನ್‌ ಬಗ್ಗೆ ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತಾಂತ್ರಿಕ ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ. ಬಿಟ್ ಕಾಯಿನ್ ಹಗರಣ  ರಾಜ್ಯ ರಾಜಕೀಯ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದ್ದು, ರಾಜಕೀಯ ನಾಯಕರು ಆರೋಪ-ಪ್ರತ್ಯಾರೋಗಳನ್ನ ಮಾಡುತ್ತಿದ್ದಾರೆ. ಈ ಮಧ್ಯೆ ಶಾಸಕ ಪ್ರಿಯಾಂಕ್‌ ಖರ್ಗೆ ಹೇಳಿಕೆ ಭಾರೀ ಸಂಚಲನ ಮೂಡಿಸಿದೆ. 

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಟ್‌ ಕಾಯಿನ್‌ ಹಗರಣಕ್ಕೆ ಸಂಬಂಧಿಸಿದಂತೆ ನಾನು ಹೇಳಿರುವ ಮಾಹಿತಿ ಸರಿಯಿಲ್ಲ ಎನ್ನುವುದಾದರೆ ನಾನು ಎತ್ತಿರುವ ಪ್ರಶ್ನೆಗಳಿಗೆ ಮುಖ್ಯಮಂತ್ರಿಗಳು ಉತ್ತರ ನೀಡಲಿ. ತನಿಖೆಯ ಮಾಹಿತಿ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು. ಹಗರಣದಲ್ಲಿ ಕಾಂಗ್ರೆಸ್‌ನವರು (Congress) ಇದ್ದಾರೆ ಎಂದು ಹೇಳುತ್ತಾರೆ. ಕಾಂಗ್ರೆಸ್ಸಿನವರ ವಿಚಾರ ಏಕೆ? ಕಾಂಗ್ರೆಸ್‌ನವರನ್ನು ಸಂಧಾನಕ್ಕೆ ಕರೆಯುತ್ತಿದ್ದೀರಾ? ಎಂದು ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದರು.

ನಮ್ಮ ಬಳಿ ಇರುವುದು ಸರ್ಕಾರಿ ಮಾಹಿತಿ. ಈ ಹಗರಣದ ಆಳ, ಅಗಲ ಬಹಳ ಇದೆ. ಇದು ಅಳತೆಗೂ ಸಿಗುತ್ತಿಲ್ಲ. ಜಂಟಿ ಆಯುಕ್ತರು (Join Secretary) ಕೊಟ್ಟಿರುವ ಮಾಹಿತಿಯೇ ಗಾಬರಿ ಹುಟ್ಟಿಸುತ್ತಿದೆ. ಇನ್ನು ಚಾರ್ಜಶೀಟ್‌ನಲ್ಲಿ ಏನೆಲ್ಲಾ ಮಾಹಿತಿ ಇರಬೇಡ? ಶ್ರೀಕಿ (Hacker Sriki) ಯಾರಿಗೆ ಅನುಕೂಲ ಮಾಡಿದ್ದಾರೆ ಎನ್ನುವುದನ್ನು ಕೇಳುತ್ತಿದ್ದೇವೆ? ಅದನ್ನು ಬಹಿರಂಗ ಮಾಡಲು ಸರ್ಕಾರಕ್ಕೆ ಏನು ತೊಂದರೆ? ಕಾಂಗ್ರೆಸ್‌ ಹೆಸರು ಹೇಳಿ ಏಕೆ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದೀರಿ? ಎಂದು ಪ್ರಶ್ನಿಸಿದರು.

ಪೇಪರ್‌ಸಿಂಹಗೆ ಪ್ರತಿಕ್ರಿಯಿಸಲ್ಲ!

ಸಂಸದ ಪ್ರತಾಪ್‌ಸಿಂಹ (Pratap Simha) ತಮ್ಮ ವಿರುದ್ಧ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ‘ಪೇಪರ್‌ ಸಿಂಹ ಹೇಳಿರುವ ಮಾತುಗಳಿಗೆ ಪ್ರತಿಕ್ರಿಯೆ ನೀಡಲ್ಲ. ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಎರಡೂ ಅವರ ಬಳಿಯೇ ಇದೆ. ತನಿಖೆ ಮಾಡಿ ಮಾಹಿತಿ ತರಿಸಿಕೊಳ್ಳಲಿ. ನಮ್ಮ ಆರೋಪಗಳಿಗೆ ಉತ್ತರ ಕೊಡಲಾಗದಿದ್ದಾಗ ವೈಯಕ್ತಿಕ ಟೀಕೆ ಮಾಡುತ್ತಾರೆ. ಇದು ಬಿಜೆಪಿಯ ಮಂತ್ರ’ ಎಂದರು.

ರೈತರ ಕಷ್ಟಗಳನ್ನ ಸಿಎಂ ಗಮನಕ್ಕೆ ತಂದ ಸಿದ್ದರಾಮಯ್ಯ, ಇಲ್ಲಿದೆ ಪತ್ರದ ಪೂರ್ಣ ಪಾಠ

ನಮ್ಮ ಬಳಿ ಒಂದೇ ನಂಬರಿನ ಕಾರು ಇದ್ದರೆ ಆ ಬಗ್ಗೆ ಆರ್‌ಟಿಓ (RTO) ಕೇಳಬೇಕು. ಮೈಸೂರನ್ನು (Mysore) ಪ್ಯಾರಿಸ್‌ ಮಾಡುತ್ತೇನೆ ಎಂದು ಮತ ಹಾಕಿಸಿಕೊಂಡು ಮರೆತು ಈಗ ವೈಯಕ್ತಿಕ ಟೀಕೆ ಮಾಡುತ್ತಿದ್ದಾರೆ. ಅವರು ಚರ್ಚೆಗೆ ಬರಲಿ ಎಲ್ಲಾ ರೀತಿಯ ಉತ್ತರ ಕೊಡುತ್ತೇನೆ ಎಂದು ಸವಾಲು ಹಾಕಿದರು.

ಸಿಎಂ ಬದಲಾವಣೆ ಹೇಳಿಕೆ : ಅಶ್ವಥ್ ನಾರಾಯಣ ಮಹತ್ವದ ಪ್ರತಿಕ್ರಿಯೆ!

ಬಿಟ್ ಕಾಯಿನ್ ಪ್ರಕರಣದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಬಲಿಯಾಗುತ್ತಿದೆ ಎನ್ನುವ ಆರೋಪಗಳನ್ನ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬದಲಾವಣೆ ವದಂತಿಗಳ ವಿಚಾರವಾಗಿ ಉನ್ನತ ಶಿಕ್ಷಣ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ ಪ್ರತಿಕ್ರಿಯಿಸಿದ್ದಾರೆ.

ಡಿಕೆಶಿ ಧಮ್ ಸವಾಲಿಗೆ ತಿರುಗೇಟು ಕೊಟ್ಟ ಗೃಹ ಸಚಿವ ಆರಗ ಜ್ಞಾನೇಂದ್ರ

ಮಾಗಡಿಯ ಕೆಂಪಸಾಗರ ಗ್ರಾಮದಲ್ಲಿ ಶ್ರೀವಿಶ್ವೇಶ್ವರ ಸ್ವಾಮಿ ದೇವಾಲಯದ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಟ್ ಕಾಯಿನ್ ವಿಚಾರದಲ್ಲಿ ಸಿಎಂ ಬದಲಾವಣೆ ಬೆಳವಣಿಗೆ ಇಲ್ಲ, ಯಾವುದು ಸತ್ಯ ಅಲ್ಲ ಎಂದು ಅಲ್ಲಗಳೆದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಗುರುವಾರ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ಬೇರೆ ಕಾರಣಗಳಿವೆ. ಕೆಲ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ ಮಾಡಲು ಭೇಟಿ ಮಾಡುತ್ತಿದ್ದಾರೆ. ಪ್ರತಿಪಕ್ಷದವರ ಎಲ್ಲಾ ಟೀಕೆಗಳಿಗೆ ಸಮರ್ಪಕವಾಗಿ ಉತ್ತರಿಸುತ್ತೇವೆ ಎಂದರು. 

Follow Us:
Download App:
  • android
  • ios