Asianet Suvarna News Asianet Suvarna News

ವಿಜಯಪುರ: ಆಲಮಟ್ಟಿ ಜಲಾಶಯದಲ್ಲಿ ಸದ್ಯಕ್ಕಿಲ್ಲ ನೀರಿನ ತೊಂದರೆ

ಜಲಾಶಯದ ಡೆಡ್‌ ಸ್ಟೋರೇಜ್‌ ತಲುಪಲು ಇನ್ನೂ ಬಾಕಿ ಇದೆ 3 ಟಿಎಂಸಿ ಅಡಿ ನೀರು

No Water Problem in Almatti Dam at Present in Vijayapura grg
Author
First Published Jun 8, 2023, 10:32 PM IST

ಆಲಮಟ್ಟಿ(ಜೂ.08): ಆಲಮಟ್ಟಿ ಜಲಾಶಯದಲ್ಲಿ ನೀರಿನ ಮಟ್ಟ ಕಡಿಮೆಯಾದರೂ, ಜುಲೈ 15ರವರೆಗೂ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಿಲ್ಲ. ಆಲಮಟ್ಟಿ ಜಲಾಶಯದಲ್ಲಿ ಬುಧವಾರ 20.973 ಟಿಎಂಸಿ ಅಡಿ ನೀರು ಸಂಗ್ರಹವಿದ್ದರೂ, ಅದರಲ್ಲಿ ಡೆಡ್‌ ಸ್ಟೋರೇಜ್‌ ನೀರು 17.62 ಟಿಎಂಸಿ ಅಡಿ. ಇದನ್ನು ಬಿಟ್ಟು ಬಳಕೆ ಯೋಗ್ಯ ನೀರು 3.353 ಟಿಎಂಸಿ ಅಡಿ. ಹೀಗಾಗಿ, ಜುಲೈ 15 ರವರೆಗೂ ಕುಡಿಯುವ ನೀರಿಗೆ ಯಾವುದೇ ತೊಂದರೆ ಇಲ್ಲ. ವಿಜಯಪುರ, ಬಾಗಲಕೋಟೆ ಜತೆಗೆ ಕಲಬುರಗಿ, ಯಾದಗಿರಿ, ರಾಯಚೂರ ಜಿಲ್ಲೆಗೆ ಕುಡಿಯುವ ನೀರಿನ ಅಗತ್ಯ ಎನಿಸಿದರೆ ಆಲಮಟ್ಟಿಯಿಂದ ನಾರಾಯಣಪುರ ಜಲಾಶಯಕ್ಕೂ ನೀರು ಹರಿಸಿ, ಕುಡಿಯುವ ನೀರಿನ ಸಮಸ್ಯೆ ನೀಗಿಸಬಹುದು. ಒಟ್ಟಾರೆ ಸದ್ಯಕ್ಕೆ ಕುಡಿಯುವ ನೀರಿಗೆ ಯಾವುದೇ ತೊಂದರೆ ಇಲ್ಲ.

123.081 ಟಿಎಂಸಿ ಅಡಿ ನೀರು ಸಂಗ್ರಹ ಸಾಮಥ್ಯಧದ ಜಲಾಶಯದಲ್ಲಿ 17.62 ಟಿಎಂಸಿ ಅಡಿ ನೀರು ಡೆಡ್‌ ಸ್ಟೋರೇಜ್‌ ಎಂದು ಪರಿಗಣಿಸಲಾಗಿದೆ. ಅನಿವಾರ್ಯ ವೇಳೆಯಲ್ಲಿ 2014, 2015, 2017ರಲ್ಲಿ ಸೇರಿದಂತೆ ಐದಾರು ಬಾರಿ ಡೆಡ್‌ ಸ್ಟೋರೇಜ್‌ ನೀರನ್ನು ಬಳಸಲಾಗಿದೆ. ಮೊದಲೆಲ್ಲಾ ಪ್ರತಿ ವರ್ಷವೂ ಜಲಾಶಯದ ಮಟ್ಟಜೂನ್‌ ವೇಳೆಗೆ ಡೆಡ್‌ ಸ್ಟೋರೇಜ್‌ ತಲುಪುತ್ತಿತ್ತು. ಆದರೆ ಈ ಬಾರಿ ಡೆಡ್‌ ಸ್ಟೋರೇಜ್‌ ತಲುಪಲು ಇನ್ನೂ ಸುಮಾರು 3 ಟಿಎಂಸಿ ಅಡಿ ನೀರು ಬಾಕಿ ಇದೆ.

ಕೇರಳಕ್ಕೆ ಮಾನ್ಸೂನ್‌ ಎಂಟ್ರಿ, ಕೆಲವೇ ಸಮಯದಲ್ಲಿ ಕರ್ನಾಟಕ-ತಮಿಳುನಾಡಿಗೂ ಪ್ರವೇಶ!

ಆಲಮಟ್ಟಿ ಜಲಾಶಯದ ಹಿನ್ನೀರಿನ ಮೂಲಕ ನಾನಾ ಗ್ರಾಮ, ಪಟ್ಟಣಗಳಿಗೆ ಕುಡಿಯುವ ನೀರಿನ ಜಾಕವೆಲ… ಗಳು 505 ಮೀ. ಮಟ್ಟದವರೆಗೆ ಇವೆ. ವಿಜಯಪುರ ನಗರಕ್ಕೆ ಕುಡಿಯುವ ನೀರು ಕಳುಹಿಸುವ ಕೊಲ್ಹಾರ ಬಳಿಯ ಜಾಕವೆಲ… ಬಳಿಯೂ ಸಾಕಷ್ಟುನೀರಿನ ಸಂಗ್ರಹವಿದೆ. ಅಲ್ಲಿಯೂ ಕೂಡ ಯಾವುದೇ ತೊಂದರೆ ಇಲ್ಲ ಎಂದು ಅಧಿಕಾರಿಗಳು ಹೇಳಿದರು.

ಮಹಾರಾಷ್ಟ್ರದಲ್ಲಿ ಮಳೆ ಇಲ್ಲ:

ಆಲಮಟ್ಟಿ ಜಲಾಶಯದ ನೀರಿನ ಮೂಲ ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಸುರಿಯುವ ಮಳೆ. ಅಲ್ಲಿಯೂ ಇನ್ನೂ ಮುಂಗಾರು ಮಳೆ ಆರಂಭಗೊಂಡಿಲ್ಲ. ಅಲ್ಲಿ ಮಳೆ ಆರಂಭಗೊಂಡರೆ ನೆರೆಯ ಭೀತಿ ಆವರಿಸುತ್ತದೆ. ಅದಕ್ಕಾಗಿ ಮಹಾರಾಷ್ಟ್ರದ ಸಾಂಗ್ಲಿಯ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಆಲಮಟ್ಟಿಯ ಕೆಬಿಜೆಎನ್‌ಎಲ… ಅಧಿಕಾರಿಗಳು ಸಭೆ ನಡೆಸಿದ್ದಾರೆ.

ಆಲಮಟ್ಟಿ ಜಲಾಶಯದ ಹಿನ್ನೀರನ್ನು ಕೃಷಿ ಬಳಕೆಗೆ ನಿಷೇಧಿಸಲಾಗಿದೆ. ಸದ್ಯಕ್ಕೆ ಕುಡಿಯುವ ನೀರಿನ ಸಮಸ್ಯೆಯಿಲ್ಲ. ವೈಜ್ಞಾನಿಕವಾಗಿ, ಕಠಿಣ ಕ್ರಮಗಳನ್ನು ಕೈಗೊಂಡು, ನೀರಿನ ಮಟ್ಟವನ್ನು ಸಮರ್ವಕವಾಗಿ ನಿರ್ವಹಣೆ ಮಾಡಿದ್ದರ ಪರಿಣಾಮ, ಕಾಲುವೆಗೆ, ಕೆರೆ ಭರ್ತಿಗೆ ಸಾಕಷ್ಟು ನೀರು ಹರಿಸಿದ್ದರೂ ಕೂಡ ಜಲಾಶಯದಲ್ಲಿ ನೀರು ಇನ್ನೂ ಬಾಕಿ ಇದೆ ಅಂತ ಅಣೆಕಟ್ಟು ವಲಯ ಮುಖ್ಯ ಎಂಜಿನಿಯರ್‌ ಎಚ್‌.ಸುರೇಶ ತಿಳಿಸಿದ್ದಾರೆ. 

Follow Us:
Download App:
  • android
  • ios