Asianet Suvarna News Asianet Suvarna News

ಚೀನಾದಿಂದ ಬಂದ ವಸ್ತುವಿನಲ್ಲಿರಲಿಲ್ಲ ವೈರಸ್, ಜ್ಯುಬಿಲಿಯಂಟ್‌ ಕೊರೋನಾ ಹರಡಿದ್ದು ಹೇಗೆ..?

ಚೀನಾದಿಂದ ಆಮದು ಮಾಡಿಕೊಂಡಿದ್ದ ಕಚ್ಚಾ ವಸ್ತುವಿನ ಮಾದರಿಯಲ್ಲಿ ಕೋವಿಡ್‌- 19 ರ ಯಾವುದೇ ಕುರುಹುಗಳು ಕಂಡು ಬಂದಿಲ್ಲ. ಕಚ್ಚಾ ವಸ್ತು(ಚೀನಾದಿಂದ ಆಮದಾಗಿದ್ದ) ಪುಣೆಯಲ್ಲಿನ ರಾಷ್ಟ್ರೀಯ ವೈರಾಲಜಿ ಸಂಸ್ಥೆಯಲ್ಲಿ ಕೋವಿಡ್‌-19 ನೆಗೆಟಿವ್‌ ಎಂಬ ವರದಿ ಬಂದಿದೆ ಎಂದು ನಂಜನಗೂಡು ಜ್ಯುಬಿಲಿಯಂಟ್‌ ಜನರಿಕ್ಸ್‌ ಲಿಮಿಟೆಡ್‌ ಸ್ಪಷ್ಟಪಡಿಸಿದೆ.

 

no virus found in raw materials imported from china in mysore says Jubilant
Author
Bangalore, First Published Apr 17, 2020, 8:46 AM IST

ಮೈಸೂರು(ಏ.17): ಚೀನಾದಿಂದ ಆಮದು ಮಾಡಿಕೊಂಡಿದ್ದ ಕಚ್ಚಾ ವಸ್ತುವಿನ ಮಾದರಿಯಲ್ಲಿ ಕೋವಿಡ್‌- 19 ರ ಯಾವುದೇ ಕುರುಹುಗಳು ಕಂಡು ಬಂದಿಲ್ಲ. ಕಚ್ಚಾ ವಸ್ತು(ಚೀನಾದಿಂದ ಆಮದಾಗಿದ್ದ) ಪುಣೆಯಲ್ಲಿನ ರಾಷ್ಟ್ರೀಯ ವೈರಾಲಜಿ ಸಂಸ್ಥೆಯಲ್ಲಿ ಕೋವಿಡ್‌-19 ನೆಗೆಟಿವ್‌ ಎಂಬ ವರದಿ ಬಂದಿದೆ ಎಂದು ನಂಜನಗೂಡು ಜ್ಯುಬಿಲಿಯಂಟ್‌ ಜನರಿಕ್ಸ್‌ ಲಿಮಿಟೆಡ್‌ ಸ್ಪಷ್ಟಪಡಿಸಿದೆ.

ಚೀನಾದಿಂದ ಆಮದು ಮಾಡಿಕೊಳ್ಳಲಾಗಿದ್ದ ಕಚ್ಚಾ ವಸ್ತು ಕುರಿತಂತೆ ಸಾರ್ವಜನಿಕರಲ್ಲಿ ಮತ್ತು ಮಾಧ್ಯಮದಲ್ಲಿ ತಪ್ಪು ಕಲ್ಪನೆ ಉಂಟಾಗಿದ್ದು ದುರದೃಷ್ಟಕರ. ಅದೇ ರೀತಿ ರೋಗಿ ಪಿ52 ಕಳೆದ ಆರು ತಿಂಗಳಲ್ಲಿ ಚೀನಾ ಅಥವಾ ಯಾವುದೇ ವಿದೇಶ ಪ್ರವಾಸವಾಗಲೀ ಕೈಗೊಂಡಿರಲಿಲ್ಲ. ಹಾಗೆಯೇ, ಕಳೆದ 6 ತಿಂಗಳುಗಳಲ್ಲಿ ವಿದೇಶ ಪ್ರವಾಸ ಮಾಡಿದ್ದ ಯಾವುದೇ ಉದ್ಯೋಗಿಯಲ್ಲೂ ಪಾಸಿಟಿವ್‌ ಪತ್ತೆಯಾಗಿಲ್ಲ ಎಂದು ಕಂಪನಿ ಸ್ಪಷ್ಟನೆ ನೀಡಿದೆ.

ದೆಹಲಿ ನಿಜಾಮುದ್ದೀನ್ ಆಯ್ತು, ಈಗ ಸರ್ಕಾರಕ್ಕೆ ನಿದ್ದೆಗೆಡಿಸಿದ ಮೈಸೂರಿನ ಜ್ಯುಬಿಲಿಯಂಟ್‌ ಕಾರ್ಖಾನೆ

ಜ್ಯುಬಿಲಿಯಂಟ್‌ನಲ್ಲಿ ರೋಗಿಗಳ ಜೀವ ಉಳಿಸಲು ಅಗತ್ಯವಾದ ಔಷಧಗಳಲ್ಲಿ ಬಳಸುವ ಆಕ್ಟಿವ್‌ ಫಾರ್ಮಾಸ್ಯೂಟಿಕಲ್‌ ವಸ್ತುಗಳನ್ನು ತಯಾರಿಸುತ್ತದೆ. ಇದರಲ್ಲಿ ಕೋವಿಡ್‌- 19 ಪಿಡುಗಿನ ವಿರುದ್ಧ ಹೋರಾಡಲು ಅಗತ್ಯವಾದ ಅಜಿತ್ರೋಮೈಸಿನ್‌ ಡೈಹೈಡ್ರೇಟ್‌ ಮತ್ತು ಅಜಿತ್ರೋಮೈಸಿನ್‌ ಮೋನೋಹೈಡ್ರೇಟ್‌ ಕೂಡಾ ಸೇರಿವೆ.

ನಂಜನಗೂಡು ಘಟಕದಿಂದ ಮೊದಲ ಪಾಸಿಟಿವ್‌ ಪ್ರಕರಣವೆನಿಸಿದ ಪಿ52 ಕಚ್ಚಾ ಮಾದರಿಗಳ ಸಂಪರ್ಕಕ್ಕೆ ಎಂದೂ ಬಂದಿರಲಿಲ್ಲ ಅಥವಾ ಅವುಗಳನ್ನು ಪಡೆದುಕೊಳ್ಳುವುದರಲ್ಲಿ, ರವಾನೆ ಮಾಡುವುದರಲ್ಲಿ, ನಿರ್ವಹಣೆಯಲ್ಲಿ ಅಥವಾ ಸಂಗ್ರಹ ಮಾಡುವುದರಲ್ಲಿ ಆತನ ಪಾತ್ರವೇನೂ ಇರಲಿಲ್ಲ ಎಂದು ಕಾರ್ಖಾನೆ ಸ್ಪಷ್ಟಪಡಿಸಿದೆ.

ಶಾಸಕರ ಹೇಳಿಕೆ:

ವರದಿ ನೆಗೆಟಿವ್‌ ಬಂದಿರಬಹುದು. ಆದರೆ ಜನರ ಪರವಾದ ನನ್ನ ನಿಲುವು ಪಾಸಿಟಿವ್‌ ಆಗಿದೆ ಎಂದು ನಂಜನಗೂಡು ಶಾಸಕ ಬಿ. ಹರ್ಷವರ್ಧನ್‌ ಪ್ರತಿಕ್ರಿಯಿಸಿದ್ದಾರೆ. ಚೀನಾದಿಂದ ಜಲ್‌ ಮತ್ತು ಪೌಡರ್‌ ಕಂಟೈನ್‌ಮೆಂಟ್‌ ತರಿಸಿರುವುದು ನಿಜವಾಗಿದೆ. ಜಲ್‌ ತಂಪು ಹಾಗೂ ಪೌಡರ್‌ ಹಾಟ್‌ ಸ್ಟೋರೇಜ್‌ ಮೂಲಕ ತರಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

Follow Us:
Download App:
  • android
  • ios