ರಾಜಕೀಯದಲ್ಲಿ ಪ್ರಾಮಾಣಿಕತೆಗೆ ಬೆಲೆ ಇಲ್ಲ. ಜನರು ನೋಡುವ ದೃಷ್ಟಿಯೂ ಕೂಡ ಬದಲಾಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಪರಮೇಶ್ವರ್ ಹೇಳಿದರು.
ಕೊರಟಗೆರೆ (ಜ.25): ಪ್ರಾಮಾಣಿಕತೆ ಮತ್ತು ನಿಷ್ಠೆ ಅತ್ಯಂತ ಮಹತ್ವಪೂರ್ಣ ಸ್ಥಾನ ಪಡೆದಿದ್ದು, ಯುವಕರು ಸಮಾಜದಲ್ಲಿ ಇದನ್ನು ರೂಡಿಸಿಕೊಳ್ಳಬೇಕು ಎಂದು ಶಾಸಕ ಡಾ.ಜಿ. ಪರಮೇಶ್ವರ್ ತಿಳಿಸಿದರು.
ಅವರು ಪಟ್ಟಣದ ಗುಂಡಾಂಜನೇಯ ಸ್ವಾಮಿ ದೇವಾಲಯದಲ್ಲಿ ನೂತನ ಸುರಕ್ಷಾ ಚಾರಿಟಬಲ್ ಸೇವಾ ಸಮಿತಿ ಉದ್ಘಾಟನೆ ಹಾಗೂ ಬಡಜನರಿಗೆ ಹೊಸ ಬಟ್ಟೆಯನ್ನು ವಿತರಿಸುವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಟ್ಟಣದ ಗುಂಡಾಂಜನೇಯ ಸ್ವಾಮಿ ದೇವಸ್ಥಾನ ಸುಮಾರು 800 ವರ್ಷಗಳು ಇತಿಹಾಸ ಹೊಂದಿದೆ. ಅದೇ ರೀತಿಯಾಗಿ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ದೇವಾಲಯ 3000 ವರ್ಷಗಳ ಪುರಾತನ ಇತಿಹಾಸ ಹೊಂದಿದೆ. ಕೊರಟಗೆರೆ ವಿಧಾನಸಭಾ ಕ್ಷೇತ್ರದದ್ಯಾಂತ ಅತೀ ಹೆಚ್ಚು ಆಂಜನೇಯ ಸ್ವಾಮಿ ದೇವಾಲಯಗಳಿವೆ. ಮಹರ್ಷಿ ವಾಲ್ಮೀಕಿಯವರು ರಚಿಸಿರುವ ಹಿಂದುಗಳ ಪವಿತ್ರಗ್ರಂಥ ರಾಮಾಯಣದಲ್ಲಿ ಹನುಮ ದೇವರಿಗೆ ವಿಶೇಷ ಸ್ಥಾನ ನೀಡಲಾಗಿದೆ ಎಂದರು.
ನನ್ನ ಮಗಳು ತಪ್ಪು ಮಾಡಿದ್ರೆ ಕ್ರಮ ಕೈಗೊಳ್ಳಲಿ ಎಂದ ಕಾಂಗ್ರೆಸ್ ಶಾಸಕ ..
ರಾಮಾಯಣದಲ್ಲಿ ಶ್ರೀರಾಮರಿಗೆ ಅತ್ಯಂತ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಹನುಮ ದೇವರು ಸದಾಕಾಲ ನಡೆದುಕೊಂಡಿದ್ದೇ ಅವರಿಗೆ ಅತ್ಯಂತ ಶಕ್ತಿ ಮತ್ತು ಆಧುನಿಕ ಜಗತ್ತಿನಲ್ಲಿ ಆರಾಧನೆಗಳು ಹೆಚ್ಚಾಗಿ ನಡೆಯುತ್ತಿವೆ. ಇದನ್ನು ಇಂದಿನ ಯುವ ಸಮಾಜದಿಂದ ನಿರೀಕ್ಷೆಯನ್ನು ಮಾಡಲಾಡುತ್ತಿದೆ. ಪ್ರಸ್ತುತ ಸಮಾಜದಲ್ಲಿ ಅದರಲ್ಲೂ ರಾಜಕೀಯ ರಂಗದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆಗೆ ಬೆಲೆ ಇಲ್ಲದಂತಾಗಿದ್ದು, ಜನರು ಇದನ್ನು ನೋಡುವ ದೃಷ್ಟಿಬದಲಾಗಿದೆ. ದಲಿತ ಸಮಾಜಗಳು ಧಾರ್ಮಿಕ ಕಾರ್ಯಗಳಲ್ಲೂ ಸಹ ಮುಂದೆ ಬರಬೇಕಿದ್ದು, ಶೋಷಿತ ವರ್ಗಗಳೂ ಸಹ ಧಾರ್ಮಿಕ ಸೇವೆಗಳನ್ನು, ಸಾಮಾಜಿಕ ಸೇವೆಗಳನ್ನು ಮಾಡಬಲ್ಲದು ಎಂದು ನಿರೂಪಿಸಬೇಕಿದೆ. ಗುಂಡಾಂಜನೇಯ ದೇವಸ್ಥಾನದ ಅಭಿವೃದ್ಧಿ ತಮ್ಮ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಇಂದು ನಡೆಯುತ್ತಿರುವ ಬಡವರಿಗೆ ಹೊಸ ಬಟ್ಟೆನೀಡುತ್ತಿರುವ ಕೆಲಸ ಅತ್ಯಂತ ಪವಿತ್ರವಾದದ್ದು ಎಂದರು.
ನಿವೃತ್ತ ಐ.ಎ.ಎಸ್ ಅಧಿಕಾರಿ ಬಲದೇವಕೃಷ್ಣ ಮಾತನಾಡಿ ಸುರಕ್ಷಾ ಚಾರಿಟಬಲ್ ಸೇವಾ ಸಮಿತಿ ಮುಂಬರುವ ದಿನಗಳಲ್ಲಿ ಧಾರ್ಮಿಕ ಕಾರ್ಯದೊಂದಿಗೆ ಸಾಮಾಜಿಕ ಸೇವೆಯನ್ನು ಸಹ ರೂಡಿಸಿಕೊಂಡು ಬರಬೇಕು. ಮುಂಬರುವ ದಿನಗಳಲ್ಲಿ ದೇವಸ್ಥಾನದ ಅಭಿವೃದ್ಧಿಯೊಂದಿಗೆ ಬಡಜನರು ಮದುವೆ ಮತ್ತು ಇತರ ಕಾರ್ಯಗಳನ್ನು ಮಾಡಿಕೊಳ್ಳುವ ಸಮುದಾಯ ಭವನವನ್ನು ನಿರ್ಮಿಸಿಕೊಳ್ಳಬೇಕು. ಇದಕ್ಕೆ ಶಾಸಕರು ಸಂಪೂರ್ಣ ಸಹಕಾರ ನೀಡುವ ಭರವಸೆ ಇದೆ ಎಂದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 25, 2021, 10:00 AM IST