ಮಂಡ್ಯ(ಮಾ.01): ಮದುವೆ ಫಿಕ್ಸ್ ಆದ್ಮೇಲೆ ರೇವತಿ ಅವರ ಜೊತೆ ಫುಲ್ ಶಾಪಿಂಗ್‌ನಲ್ಲಿ ಬ್ಯುಸಿ ಇರ್ಬೋದು ಅನ್ಕೊಂಡ್ರೆ ತಪ್ಪು. ಭಾವೀ ಪತ್ನಿ ಜೊತೆ ಶಾಪಿಂಗ್ ಏನೂ ಎಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಖುದ್ದಾಗಿ ಹೇಳಿದ್ದಾರೆ.

ಮಂಡ್ಯದಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ನನ್ನ ಮದುವೆಯ ಸಿದ್ಧತೆ ನನ್ನ ತಂದೆ ಹಾಗೂ ತಾಯಿ ಜವಾಬ್ದಾರಿ. ಮನೆಯವರೆಲ್ಲಾ ಸೇರಿ ಮದುವೆ ಸಿದ್ಧತೆ ನಡೆಸುತ್ತಿದ್ದಾರೆ. ಸದ್ಯ ನಾನು ಸಿನಿಮಾ ಮಾಡುತ್ತಿದ್ದೇನೆ. ಏಪ್ರಿಲ್ 10 ರ ವರೆಗೆ ಸಿನಿಮಾ ಶೂಟಿಂಗ್ ಇದೆ ಎಂದಿದ್ದಾರೆ.

ಭಾವಿ ಪತ್ನಿಯ ಕೈಬರಹ ಶೇರ್, ನಿಖಿಲ್‌ರಿಂದ ಮತ್ತೊಂದು ವಿಷಯ ಕ್ಲಿಯರ್!

ಆದಷ್ಟು ಬೇಗಾ ಸಿನಿಮಾ ಮಾಡಬೇಕು ಎಂದು ನಾನು ಅಂದುಕೊಂಡಿದ್ದೇನೆ. ಮುಂದಿನಗಳಲ್ಲಿ ನಾನೇ ಖುದ್ದಾಗಿ ಬಂದು ಆಹ್ವಾನ ಪತ್ರಿಕೆ ನೀಡುತ್ತೇನೆ. ನಮ್ಮನ್ನು ಪ್ರೀತಿಸುವ ಜನ ಮಂಡ್ಯ ಭಾಗದಲ್ಲಿ ಹೆಚ್ಚಿದ್ದಾರೆ. ನನ್ನ ಮದುವೆಯಲ್ಲಿ ಎಲ್ಲರೂ ಬಂದು ಆಶೀರ್ವಾದ ಮಾಡಬೇಕು. ಜೊತೆಯಲ್ಲಿ ಊಟ ಮಾಡಬೇಕು ಎನ್ನುವುದು ನನ್ನ ಆಶಯ ಎಂದು ತಿಳಿಸಿದ್ದಾರೆ.

ಭಾವಿ ಪತ್ನಿ ಜೊತೆ ಶಾಪಿಂಗ್ ಇಲ್ಲ. ಶಾಪಿಂಗ್ ಏನು ಮಾಡ್ತಾ ಇಲ್ಲ. ನಾನು ಶೂಟಿಂಗ್ ಮುಗಿಸಿದ ಬಳಿಕ ಭೇಟಿಯಾಗುತ್ತೇವೆ ಅಷ್ಟೇ. ವಿಶೇಷವಾಗಿ ಶಾಪಿಂಗ್ ಅಂತಾ ಏನು ಇಲ್ಲ ಎಂದು ನಿಖಿಲ್ ಸ್ವಷ್ಟಪಡಿಸಿದ್ದಾರೆ.

Photos: ಭಾವೀ ಪತ್ನಿ ರೇವತಿ ಜತೆ ನಿಖಿಲ್ ಫಸ್ಟ್ ವ್ಯಾಲೆಂಟೈನ್ಸ್​ ಡೇ ಸೆಲೆಬ್ರೇಶನ್

ಕೆ.ಆರ್‌.ಪೇಟೆ ಕ್ಷೇತ್ರದಲ್ಲಿ ದೇವೇಗೌಡರ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮ ಕಾರ್ಯಕರ್ತರನ್ನ ಅಲ್ಲಿ ಟಾರ್ಗೆಟ್ ಮಾಡ್ತಾ ಇದ್ದಾರೆ. ದ್ವೇಷದ ರಾಜಕೀಯ ಮಾಡುತ್ತಿದ್ದಾರೆ. ರಾಜಕೀಯ ಮಾಡಲಿ ಆದರೆ ದ್ವೇಷದ ರಾಜಕೀಯ ಮಾಡುವುದು ಸರಿಯಲ್ಲ. ದೊಡ್ಡಗೌಡರು ಮೊದಲಿಂದಲೂ ಹೋರಾಟ ಮಾಡಿಕೊಂಡು ಬಂದವರು. ಅವರ ಹೋರಾಟ ನಮಗೆ ಮಾದರಿ. ಅವರು ಹೋರಾಟ ಬಿಡಲ್ಲ, ಕಾರ್ಯಕರ್ತರ‌‌‌‌ ಪರ ನಿಂತಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರ ಪರ ನಾವು ನಿಂತುಕೊಳ್ಳುತ್ತೇವೆ ಎಂದಿದ್ದಾರೆ.

"