ಡಿಸಿಸಿ ಬ್ಯಾಂಕ್‌ನಲ್ಲಿ ಹಗರಣವೂ ನಡೆದಿಲ್ಲ, ತನಿಖೆಯೂ ಇಲ್ಲ: ಶಾಸಕ ನಂಜೇಗೌಡ

ಡಿಸಿಸಿ ಬ್ಯಾಂಕ್‌ನಲ್ಲಿ ಯಾವುದೇ ಹಗರಣಗಳು ನಡೆದಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರವೂ ಸಹ ತನಿಖೆಯನ್ನು ನಡೆಸುತ್ತಿಲ್ಲ ಎಂದು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಹೇಳಿದ್ದಾರೆ.

No scam no investigation in DCC Bank Says MLA KY Nanjegowda gvd

ಕೋಲಾರ (ಜು.26): ಡಿಸಿಸಿ ಬ್ಯಾಂಕ್‌ನಲ್ಲಿ ಯಾವುದೇ ಹಗರಣಗಳು ನಡೆದಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರವೂ ಸಹ ತನಿಖೆಯನ್ನು ನಡೆಸುತ್ತಿಲ್ಲ ಎಂದು ಮಾಲೂರು ಶಾಸಕ ಕೆ.ವೈ.ನಂಜೇಗೌಡ ಹೇಳಿದ್ದಾರೆ. ಕೋಲಾರದ ಡಿಸಿಸಿ ಬ್ಯಾಂಕ್‌ನಲ್ಲಿ ನಡೆದಿರುವ ಹಣ ದುರ್ಬಳಕೆಯ ಆರೋಪದ ಬಗ್ಗೆ ತನಿಖೆ ನಡೆಸುವಂತೆ ವಿಧಾನಸಭಾ ಅಧಿವೇಶನದಲ್ಲಿ ಕೆಲವು ಶಾಸಕರು ಒತ್ತಾಯಿಸಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ನಂಜೇಗೌಡರು ಈ ರೀತಿ ಪ್ರತಿಕ್ರಿಯಿಸಿದರು. ನಷ್ಟದಲ್ಲಿದ್ದ ಡಿಸಿಸಿ ಬ್ಯಾಂಕ್‌ ಪುನರುಜ್ಜೀವನಕ್ಕಾಗಿ ಆಡಳಿತ ಮಂಡಳಿಯವರು ಅಪಾರವಾಗಿ ಶ್ರಮಿಸಿದ್ದಾರೆ ಎಂದರು.

ಜಿಲ್ಲೆಯ ಯಾವ ಶಾಸಕರೂ ತನಿಖೆಗೆ ಒತ್ತಾಯಿಸಿಲ್ಲ: ಅವಿಭಜಿತ ಕೋಲಾರ ಜಿಲ್ಲೆಯ ಯಾವುದೇ ಶಾಸಕರೂ ಡಿಸಿಸಿ ಬ್ಯಾಂಕ್‌ ಹಗರಣದ ಆಪಾದನೆಯ ತನಿಖೆಗೆ ಒತ್ತಾಯಿಸಿಲ್ಲ. ಯಾವುದೋ ದೂರರ್ಜಿಯನ್ನು ಆಧರಿಸಿ ಡಿಸಿಸಿ ಬ್ಯಾಂಕ್‌ನ ವಿರುದ್ದದ ಆರೋಪಗಳ ಬಗ್ಗೆ ಸಹಕಾರ ಸಚಿವರು ವರದಿ ಕೇಳಿದ್ದಾರೆ. ಆದರೆ, ತನಿಖೆಯನ್ನು ನಡೆಸಿ ಕ್ರಮವಹಿಸುವಂತೆ ಸಚಿವರು ಸೂಚಿಸಿಲ್ಲ. ಡಿಸಿಸಿ ಬ್ಯಾಂಕ್‌ನಿಂದ ಅವಿಭಜಿತ ಕೋಲಾರ ಜಿಲ್ಲೆಯ ಸಾವಿರಾರು ಮಹಿಳಾ ಸಂಘಗಳಿಗೆ ನೂರಾರು ಕೋಟಿ ರೂಪಾಯಿ ಸಾಲವನ್ನು ಕೊಡಲಾಗಿದೆ. ಸಿದ್ದರಾಮಯ್ಯ ಅವರು ಈ ಹಿಂದೆ ಬಡ್ಡಿರಹಿತವಾಗಿ ಸಾಲ ಕೊಟ್ಟಯೋಜನೆಯನ್ನು ಸ್ತ್ರೀ ಶಕ್ತಿ ಸಂಘಗಳ ಆರ್ಥಿಕ ಸಬಲೀಕರಣಕ್ಕಾಗಿ ಬಳಸಲಾಗುತ್ತಿದೆ. ಡಿಸಿಸಿ ಬ್ಯಾಂಕ್‌ ಮೂಲಕ ಮಹಿಳೆಯರು ಮತ್ತು ರೈತರಿಗೆ ಮತ್ತಷ್ಟುಅನುಕೂಲವಾಗಲಿ ಎಂದು ಹಾರೈಸುತ್ತೇನೆ ಎಂದು ನಂಜೇಗೌಡ ಹೇಳಿದರು.

ಹಾರಂಗಿ ಜಲಾಶಯದಿಂದ ಭಾರಿ ಪ್ರಮಾಣದ ನೀರು ಹೊರಕ್ಕೆ: ಕೆಳಭಾಗದ ಗ್ರಾಮಗಳಿಗೆ ಪ್ರವಾಹದ ಭೀತಿ

ಬ್ಯಾಂಕ್‌ಗೆ ಶಕ್ತಿ ತುಂಬಬೇಕು: ಯಾವುದೇ ಕಾಂಗ್ರೆಸ್‌ ಶಾಸಕರು ದೂರು ಕೊಟ್ಟಿಲ್ಲ, ಡಿಸಿಸಿ ಬ್ಯಾಂಕ್‌ ಮುಚ್ಚಿದ ಸಂದರ್ಭದಲ್ಲಿ ಅಧ್ಯಕ್ಷರು- ನಿರ್ದೇಶಕರು ಸಾಕಷ್ಟುಕಷ್ಟಪಟ್ಟಿದ್ದಾರೆ. ನಾನೇ ಶಾಸಕನಾಗಿ ಡಿಸಿಸಿ ಬ್ಯಾಂಕ್‌ನಲ್ಲ ಏನೋ ಅವ್ಯವಹಾರವಾಗಿದೆ ಅದನ್ನು ತನಿಖೆ ಮಾಡಿ ಎಂದು ಕೇಳಿಲ್ಲ. ಡಿಸಿಸಿ ಬ್ಯಾಂಕ್‌ನಲ್ಲಿ ಅಂತಹ ದುರುಪಯೋಗ ಯಾವುದೂ ನಡೆದಿಲ್ಲ, ಹಗರಣ ಆಗಿದೆ ಅನ್ನೋದನ್ನ ನಾನು ಒಪ್ಪೋದಿಲ್ಲ. ಇಂತಹ ಕೆಲಸವನ್ನು ಯಾವ ಕಾಂಗ್ರೆಸ್‌ ಶಾಸಕರು ಮಾಡೋಡಿಲ್ಲ, ಡಿಸಿಸಿ ಬ್ಯಾಂಕ್‌ ಬಗ್ಗೆ ಏನೇನೋ ಮಾತನಾಡುವ ಬದಲು ಬ್ಯಾಂಕ್‌ನ್ನು ಉಳಿಸಿಕೊಂಡು ಅದಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದರು.

ಗೃಹಲಕ್ಷ್ಮೀ ಸೌಲಭ್ಯಕ್ಕಾಗಿ ಸರತಿ ಸಾಲಿನಲ್ಲಿ ಗೃಹಲಕ್ಷ್ಮಿಯರು: ಯೋಜನೆಗೆ ಅರ್ಜಿ ಸಲ್ಲಿಸಲು ಎರರ್ ಕಾಟ

ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡುವ ವಿಚಾರದಲ್ಲಿ ಡಿಸಿಸಿ ಬ್ಯಾಂಕ್‌ನಲ್ಲಿನ ಸಾಲ ಪಡೆದಿರುವ ಮಹಿಳಾ ಸಂಘಗಳ ಸಾಲ ಮನ್ನಾ ಮಾಡೋದಾಗಿ ಕೋಲಾರ ಜಿಲ್ಲೆಯ ಶಾಸಕರ ಒತ್ತಾಯದಂತೆ ಮಾತು ಕೊಟ್ಟಿದ್ದು ನಿಜ, ಇದೀಗ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ. ಈಗಾಗಲೇ 5 ಜನಪರ ಗ್ಯಾರಂಟಿಗಳನ್ನ ಜಾರಿಗೆ ತಂದಿದ್ದಾರೆ. ಅದಕ್ಕೆ ಹಣಕಾಸನ್ನು ಒದಗಿಸುವ ಸಲುವಾಗಿ ಶ್ರಮಿಸುತ್ತಿದ್ದಾರೆ. ಮುಂದಿನ ಬಜೆಟ್‌ನಲ್ಲಿ ಮಹಿಳಾ ಸಂಘಗಳ ಸಾಲವನ್ನ ಮನ್ನಾ ಮಾಡುವ ವಿಚಾರವಾಗಿ ಜಿಲ್ಲೆಯ ಎಲ್ಲಾ ಶಾಸಕರು ಅವರನ್ನು ಒತ್ತಾಯ ಮಾಡುವುದಾಗಿ ಹೇಳಿದರು.

Latest Videos
Follow Us:
Download App:
  • android
  • ios