ಅಪಘಾತದ ಆಘಾತವನ್ನು ಯಾವ ಪರಿಹಾರವೂ ಅಳಿಸಲಾಗದು: ಸುಪ್ರೀಂ
ಅಪಘಾತದ ಬಳಿಕ ಸಂತ್ರಸ್ತರು ಅನುಭವಿಸುವ ಆಘಾತವನ್ನು ಯಾವುದೇ ಪ್ರಮಾಣದ ಆರ್ಥಿಕ ಅಥವಾ ಇನ್ಯಾವುದೇ ಸ್ವರೂಪದ ಪರಿಹಾರ ಕೂಡಾ ಅಳಿಸಿಹಾಕಲಾಗದು: ಸುಪ್ರೀಂಕೋರ್ಟ್
ನವದೆಹಲಿ(ಡಿ.25): ಅಪಘಾತದ ಬಳಿಕ ಸಂತ್ರಸ್ತರು ಅನುಭವಿಸುವ ಆಘಾತವನ್ನು ಯಾವುದೇ ಪ್ರಮಾಣದ ಆರ್ಥಿಕ ಅಥವಾ ಇನ್ಯಾವುದೇ ಸ್ವರೂಪದ ಪರಿಹಾರ ಕೂಡಾ ಅಳಿಸಿಹಾಕಲಾಗದು. ಆದರೂ ಆರ್ಥಿಕ ಪರಿಹಾರ ಸಂತ್ರಸ್ತರ ಪಾಲಿಗೆ ಮರುಜೀವನದ ಒಂದಷ್ಟು ಭರವಸೆಯನ್ನು ಕಲ್ಪಿಸುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
2015ರಲ್ಲಿ ಬೀದರ್ ಸರ್ಕಾರಿ ಆಸ್ಪತ್ರೆ ಕಟ್ಟಡದ ಕೆಲಸ ಮಾಡುವ ವೇಳೆ ಮಹಿಳೆಯೊಬ್ಬರ ಮೇಲೆ ಸೆಂಟ್ರಿಂಗ್ ಪ್ಲೇಟ್ ಬಿದ್ದು ಆಕೆ 2ನೇ ಮಹಡಿಯಿಂದ ನೆಲ ಮಹಡಿಗೆ ಉರುಳಿಬಿದ್ದಿದ್ದಳು. ಇದರಿಂದ ಆಕೆಯ ತಲೆ, ಬೆನ್ನುಹುರಿ ಮತ್ತು ದೇಹದ ಇತರೆ ಭಾಗಗಳಿಗೆ ಪೆಟ್ಟಾಗಿತ್ತು. ಇದರಿಂದ ಆಕೆ ಕೆಲಸ ಮಾಡುವ ಸಾಮರ್ಥ್ಯ ಕಳೆದುಕೊಂಡಿದ್ದರು. ಈ ಪ್ರಕರಣದಲ್ಲಿ ಆಕೆಗೆ 9.30 ಲಕ್ಷ ರು. ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ.
ಬೀದರ್: 4 ನೀರಾವರಿ ಯೋಜನೆಗಳಿಗೆ ಸಚಿವ ಸಂಪುಟ ಅಸ್ತು, ಕೇಂದ್ರ ಸಚಿವ ಖೂಬಾ
ಜತೆಗೆ, ‘ಎಷ್ಟೇ ಮೊತ್ತದ ಆರ್ಥಿಕ ಪರಿಹಾರ ನೀಡಿದರೂ ಅದು ಸಂತ್ರಸ್ತರು ಅಪಘಾತದಿಂದ ಅನುಭವಿಸಿದ ಆಘಾತ, ನೋವು ಮತ್ತು ತೊಂದರೆಯನ್ನು ಅಳಿಸಿ ಹಾಕಲಾಗದು. ಆದರೆ ಆರ್ಥಿಕ ಪರಿಹಾರ ಎಂಬುದು ಬದುಕುಳಿದ ಸಂತ್ರಸ್ತರಿಗೆ ಸಮಾಜ ಮರುಜೀವನ ಕಲ್ಪಿಸಿಕೊಳ್ಳಲು ನೀಡುವ ಭರವಸೆ ಎಂಬುದು ಕಾನೂನಿನ ಅಭಿಪ್ರಾಯ’ ಎಂದು ನ್ಯಾ. ಕೃಷ್ಣ ಮುರಾರಿ ಮತ್ತು ನ್ಯಾ. ಎಸ್.ರವೀಂದ್ರ ಭಟ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.