ಯಾದಗಿರಿ(ಡಿ.21): ಇನ್ಮುಂದೆ ಶೌಚಾಲಯ ಬಳಸದಿದ್ದರೆ ಪಡಿತರ ಹಾಗೂ ವಿದ್ಯುತ್ ಕಟ್ ಮಾಡುತ್ತೇವೆ ಎಂದು ಸಿಇಒ ಶಿಲ್ಪಾ ಶರ್ಮಾ ಅವರು ವಾರ್ನಿಂಗ್ ಮಾಡಿದ್ದಾರೆ.

ಶನಿವಾರ ಯಾದಗಿರಿ ತಾಲೂಕಿನ ಬಂದಳ್ಳಿ ಗ್ರಾಮಕ್ಕೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಜೊತೆ ಗ್ರಾಮಕ್ಕೆ ಭೇಟಿದ ಅವರು ಶೌಚಾಲಯ ಬಳಸದಿದ್ದರೆ ಸರ್ಕಾರದ ಹಣ ವಾಪಾಸ್ ನೀಡಬೇಕು ಎಂದು ತಾಕೀತು ಮಾಡಿದ್ದಾರೆ. ಬಂದಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಶೌಚಾಲಯದಲ್ಲಿ ಕೋಳಿ ಸಾಕಿದ್ದನ್ನು ಕಂಡ ಗರಂ ಆದ ಸಿಇಒ ಶಿಲ್ಪಾ ಶರ್ಮಾ ಅವರು ಶೌಚಾಲಯ ಬಳಸದಿದ್ದರೆ ಪಡಿತರ ಹಾಗೂ ವಿದ್ಯುತ್ ಕಟ್ ಮಾಡುತ್ತೇವೆ ಎಂದು ಗ್ರಾಮಸ್ಥರಿಗೆ ಎಚ್ಚರಿಕೆ ನೀಡಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಂದಳ್ಳಿ ಗ್ರಾಮಕ್ಕೆ ದಿಢೀರ್ ಭೇಟಿ ನೀಡಿದ ಶಿಲ್ಪಾ ಶರ್ಮಾ ಅವರು, ಶೌಚಾಲಯ ಪರಿಸ್ಥಿತಿ ಅವಲೋಕಿಸಿದ್ದಾರೆ.  ಶೌಚಾಲಯದಲ್ಲಿ ಕೋಳಿ ಸಾಕೋದಲ್ಲ ಶೌಚಾಲಯ ಬಳಸುವಂತೆ ಸಲಹೆ ನೀಡಿದ್ದಾರೆ.