ಉಡುಪಿ(ಜೂ.11): ಜಿಲ್ಲೆಯಲ್ಲಿ ಎರಡನೇ ದಿನ ಬುಧವಾರವೂ ನಿರಾಳ, ಯಾವುದೇ ಕೊರೋನಾ ಪ್ರಕರಣಗಳು ಪತ್ತೆಯಾಗಿಲ್ಲ. ಬುಧವಾರ ಒಟ್ಟು 34 ಕೋವಿಡ್‌ ವರದಿಗಳು ಬಂದಿದ್ದು ಎಲ್ಲವೂ ನೆಗೆಟಿವ್‌ ಆಗಿವೆ.

ಕಳೆದ ಕೆಲವು ದಿನ ನೂರಕ್ಕೂ ಮಿಕ್ಕಿ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿ ಜಿಲ್ಲೆಯೇ ಆತಂಕ್ಕೊಳಗಾಗಿತ್ತು. ಮಂಗಳವಾರವೂ ಯಾವುದೇ ಪ್ರಕರಣಗಳು ಪತ್ತೆಯಾಗಿರಲಿಲ್ಲ. ಅಷ್ಟರಮಟ್ಟಿಗೆ ಜಿಲ್ಲಾಡಳಿತ ಮತ್ತು ಜಿಲ್ಲೆಯ ಜನತೆ ಸಮಾಧಾನ ಪಟ್ಟುಕೊಳ್ಳುತಿದ್ದಾರೆ.

ಮಂಗಳೂರಲ್ಲಿ ನಿರಂತರ ಮಳೆ, ಮುಂದಿನ 4 ದಿನ ಆರೆಂಜ್‌ ಅಲರ್ಟ್‌

ಆದರೆ ಮತ್ತೆ 123 ಕೊರೋನ ಶಂಕಿತರ ಗಂಟಲದ್ರವವನ್ನು ಸಂಗ್ರಹಿಸಿ ಕಳುಹಿಸಲಾಗಿದ್ದು, ಅದರಲ್ಲಿ 117 ಮಂದಿ ಕೊರೋನಾ ಹಾಟ್‌ಸ್ಪಾಟ್‌ ಮುಂಬೈಯಿಂದ ಬಂದವರಾಗಿದ್ದಾರೆ. ಆದ್ದರಿಂದ ಜಿಲ್ಲೆಯಲ್ಲಿ ಮತ್ತೆ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗುವ ಅತಂಕ ಉಂಟಾಗಿದೆ. ಉಳಿದಂತೆ 3 ಮಂದಿ ಶೀತಜ್ವರ, 2 ಮಂದಿ ಕೊರೋನಾ ಸಂಪರ್ಕಿತರು ಮತ್ತು ಒಬ್ಬರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದವರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ಕುಕ್ಕೆ ಸುಬ್ರಮಣ್ಯದಲ್ಲಿ ಎರಡನೇ ದಿನ 2 ಸಾವಿರಕ್ಕೂ ಅಧಿಕ ಭಕ್ತರು

ಇದರೊಂದಿಗೆ ಜಿಲ್ಲೆಯಿಂದ ಕಳುಹಿಸಲಾದ 123 ಮಾದರಿಗಳ ವರದಿ ಬರುವುದಕ್ಕೆ ಬಾಕಿಯಾಗಿವೆ. ಜಿಲ್ಲೆಯಿಂದ ಪ್ರತಿದಿನ ನೂರರಷ್ಟುಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿ ಬುಧವಾರ 93 ಮಂದಿ ಬಿಡುಗಡೆಯಾಗಿದ್ದಾರೆ. ಇದುವರೆಗೆ ಒಟ್ಟು 459 ಮಂದಿ ಬಿಡುಗಡೆಯಾಗಿದ್ದು, ಇದೀಗ 486 ಮಂದಿ ಮಾತ್ರ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತಿದ್ದಾರೆ.