Asianet Suvarna News Asianet Suvarna News

ಸದನದಲ್ಲಿ ಸಮಸ್ಯೆ ಬಗ್ಗೆ ಚರ್ಚಿಸಲು ಹೆಚ್ಚಿನ ಕಾಲಾವಕಾಶ ಯಾವುದೇ ಶಾಸಕರು ಕೋರಿಲ್ಲ: ಖಾದರ್‌

ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಹೇಳಿಕೊಳ್ಳಲು ಸದನದಲ್ಲಿ ಸಮಯಾವಕಾಶ ಸಿಗುತ್ತಿಲ್ಲ ಎಂದು ಯಾವೊಬ್ಬ ಶಾಸಕರೂ ತಮಗೆ ಮನವಿ ಮಾಡಿಕೊಂಡಿಲ್ಲ. ಒಂದೊಮ್ಮೆ ಶಾಸಕರಿಂದ ಮನವಿ ಬಂದರೆ ಹೆಚ್ಚಿನ ಅವಕಾಶ ನೀಡಲಾಗುವುದು ಎಂದು ತಿಳಿಸಿದ ಸಭಾಪತಿ ಖಾದರ್‌ 

No MLA Asked for More Time to Discuss the Issue in the Session Says UT Khader grg
Author
First Published Aug 11, 2023, 9:30 PM IST

ವಿಜಯಪುರ(ಆ.11): ಸದನದಲ್ಲಿ ತಮ್ಮ ಕ್ಷೇತ್ರದ ಸಮಸ್ಯೆ ಬಗ್ಗೆ ಚರ್ಚಿಸಲು ಸಮಯಾವಕಾಶ ಸಿಗುತ್ತಿಲ್ಲ ಎಂದು ಯಾವುದೇ ಶಾಸಕರು ತಮ್ಮಲ್ಲಿ ಮನವಿ ಮಾಡಿಕೊಂಡಿಲ್ಲ ಎಂದು ವಿಧಾನಸಭೆ ಸಭಾಪತಿ ಯು.ಟಿ.ಖಾದರ್‌ ಹೇಳಿದರು.

ಗುರುವಾರ ಜಿಲ್ಲೆಯ ಸಿಂದಗಿಗೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಅವರು, ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸದನದಲ್ಲಿ ಚರ್ಚಿಸಲು ಕೆಲ ಶಾಸಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಹೇಳಿಕೊಳ್ಳಲು ಸದನದಲ್ಲಿ ಸಮಯಾವಕಾಶ ಸಿಗುತ್ತಿಲ್ಲ ಎಂದು ಯಾವೊಬ್ಬ ಶಾಸಕರೂ ತಮಗೆ ಮನವಿ ಮಾಡಿಕೊಂಡಿಲ್ಲ. ಒಂದೊಮ್ಮೆ ಶಾಸಕರಿಂದ ಮನವಿ ಬಂದರೆ ಹೆಚ್ಚಿನ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.

ವಿಜಯಪುರ: ಉದ್ಯೋಗದಾಸೆ ತೋರಿಸಿ 95 ಲಕ್ಷ ವಂಚಿಸಿದ್ದ ಇಬ್ಬರ ಬಂಧನ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಮಾಜಿ ಸಚಿವ ಆರಗ ಜ್ಞಾನೇಂದ್ರ ಅವರು ಅವಹೇಳನಕಾರಿ ಹೇಳಿಕೆ ನೀಡಿದ ಬಗ್ಗೆ ಸಭಾಪತಿ ಖಾದರ್‌ ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ಕಗ್ಗಂಟು ಬಗ್ಗೆ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ಅದು ಬಿಜೆಪಿಗೆ ಬಿಟ್ಟವಿಚಾರವಾಗಿದೆ. ಈ ಬಗ್ಗೆ ನಾನೇನೂ ಹೇಳಲಿ ಮರುಪ್ರಶ್ನೆ ಹಾಕಿದರು.

ಕಾಂಗ್ರೆಸ್‌ ಗ್ಯಾರಂಟಿ ಯೋಜನೆಯಿಂದ ಇತರೆ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಸರ್ಕಾರ, ವಿಧಾನಸಭೆ ಸದಸ್ಯರು ನೋಡಿಕೊಳ್ಳುತ್ತಾರೆ. ಈ ಬಗ್ಗೆ ನಾನು ಹೇಳುವಂಥದ್ದು ಏನೂ ಇಲ್ಲ ಎಂದು ಚುಟುಕಾಗಿ ಉತ್ತರಿಸಿದರು.

Follow Us:
Download App:
  • android
  • ios