ಮಾ.8ಕ್ಕೆ ಬೆಂಗಳೂರಲ್ಲಿ ಈ ಮಾರ್ಗದ ಮೆಟ್ರೋ ಸೇವೆ ಇರಲ್ಲ

ಮಾರ್ಚ್ 8 ರಂದು ಬೆಂಗಳೂರಿನ ಈ ಮಾರ್ಗದಲ್ಲಿ ಮೆಟ್ರೋ ಸೇವೆ ಇರುವುದಿಲ್ಲ. ಸಿವಿಲ್ ನಿರ್ವಹಣೆ ಹಿನ್ನೆಲೆಯಲ್ಲಿ ಸೇವೆಯಲ್ಲಿ ವ್ಯತ್ಯಯವಾಗಲಿದೆ. 

No Metro between Nagasandra-Malleswaram On March 8

ಬೆಂಗಳೂರು [ಮಾ.06]:  ನಾಗಸಂದ್ರ ಮತ್ತು ಮಂತ್ರಿ - ಸಂಪಿಗೆ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಮಾ.8ರಂದು 2 ಗಂಟೆ ಸಮಯ ಮೆಟ್ರೋ ರೈಲು ಸೇವೆ ವ್ಯತ್ಯಯವಾಗಲಿದೆ. ಅಂದು ಬೆಳಗ್ಗೆ 7ರಿಂದ 9ರವರೆಗೆ ಸಿವಿಲ್‌ ನಿರ್ವಹಣಾ ಕಾರ್ಯ ನಡೆಯಲಿರುವ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ಮೆಟ್ರೋ ರೈಲು ಸೇವೆ ಸ್ಥಗಿತಗೊಳ್ಳಲಿದೆ.

ಹಸಿರು ಮಾರ್ಗ (ಯಲಚೇನಹಳ್ಳಿ- ನಾಗಸಂದ್ರ)ದಲ್ಲಿರುವ ಮಹಾಕವಿ ಕುವೆಂಪು ರಸ್ತೆ ಮತ್ತು ರಾಜಾಜಿನಗರ ಮೆಟ್ರೋ ನಿಲ್ದಾಣಗಳ ನಡುವೆ ಸಿವಿಲ್‌ ಕಾರ್ಯವನ್ನು ಬಿಎಂಆರ್‌ಸಿಎಲ್‌ ಕೈಗೆತ್ತಿಕೊಂಡಿದೆ. ಹೀಗಾಗಿ ನಾಗಸಂದ್ರ ಮತ್ತು ಮಂತ್ರಿಸ್ಕೆ$್ವೕರ್‌- ಸಂಪಿಗೆ ರಸ್ತೆ ಮೆಟ್ರೋ ನಿಲ್ದಾಣಗಳ ನಡುವೆ ಮಾ.8ರಂದು ಬೆಳಗ್ಗೆ 7ರಿಂದ 9ಗಂಟೆ ವರೆಗೆ ರೈಲು ಸೇವೆ ಸ್ಥಗಿತಗೊಳ್ಳಲಿದೆ.

ನಮ್ಮ ಮೆಟ್ರೋದಲ್ಲಿ ಬಿರುಕು; ಪಿಲ್ಲರ್ ಬೇಗ ಕಟ್ರೋ..!...

ಆದರೆ, ಅಂದು ಸಿವಿಲ್‌ ಕಾಮಗಾರಿ ವೇಳೆಯಲ್ಲಿ ಯಲಚೇನಹಳ್ಳಿ ಮತ್ತು ಮಂತ್ರಿ - ಸಂಪಿಗೆ ರಸ್ತೆ ನಿಲ್ದಾಣಗಳ ನಡುವೆ ಎಂದಿನಂತೆ ಮೆಟ್ರೋ ರೈಲು ಸೇವೆ ಕಾರ್ಯನಿರ್ವಹಿಸಲಿದೆ. ಸಿವಿಲ್‌ ಕಾರ್ಯ ಪೂರ್ಣಗೊಂಡ ಬಳಿಕ ನಾಗಸಂದ್ರ ಮತ್ತು ಯಲಚೇನಹಳ್ಳಿ ನಿಲ್ದಾಣಗಳ ನಡುವೆ ರೈಲು ಸೇವೆ ಪುನರಾರಂಭಗೊಳ್ಳಲಿದೆ. ಈ ಅವಧಿಯಲ್ಲಿ ಮೆಟ್ರೋ ರೈಲು ಪ್ರಯಾಣಿಕರು ಸಹಕರಿಸುವಂತೆ ಮನವಿ ಮಾಡಿರುವ ಮೆಟ್ರೋ ರೈಲು ನಿಗಮ, ನೇರಳೆ ಮಾರ್ಗದ ಮೆಟ್ರೋ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಮಾಹಿತಿ ನೀಡಿದೆ.

Latest Videos
Follow Us:
Download App:
  • android
  • ios