ಕೆಜಿಎಫ್‌ (ನ.05): ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವ ವೇಳೆ ಹೆಲ್ಮಟ್‌ ಧರಿಸದ ಪರಿಣಾಮವಾಗಿ ರಸ್ತೆ ಅಪಘಾತಗಳು ಉಂಟಾಗಿ ವಾಹನ ಸವಾರರು ಮರಣ ಹೊಂದಿರುವ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿ ವಾಹನ ಸವಾರರು ಸುರಿಕ್ಷಿತವಾಗಿ ಚಾಲನೆ ಮಾಡಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ದೇವಿಕಾ ಮನವಿ ಮಾಡಿದ್ದಾರೆ.

ಕೆಜಿಎಫ್‌ ಉಪ ಪ್ರದೇಶಿಕ ಸಾರಿಗೆ ಇಲಾಖೆಗೆ ಒಳಪಡುವ ಮಾಲೂರು, ಬಂಗಾರಪೇಟೆ, ಕೆಜಿಎಫ್‌ ತಾಲೂಕಿನಲ್ಲಿ ವಾಹನ ಸಾವರರು ಕಡ್ಡಾಯವಾಗಿ ಹೆಲ್ಮಟ್‌ ಧರಿಸದಿದ್ದರೆ ಅತಂಹ ವ್ಯಕ್ತಿಗಳ ವಾಹನ ಪರವಾನಗಿಯನ್ನು ಮೂರು ತಿಂಗಳ ಕಾಲ ರದ್ದು ಮಾಡಲಾಗುವುದು ಅಲ್ಲದೆ ದಂಡ ವಿಧಿಸಲಾಗುವುದು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.

ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೈಕ್ ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

ಒಂದು ವೇಳೆ ದಂಡ ಕಟ್ಟಿದ ನಂತರ ಎರಡನೇ ಸಲವು ಎಲ್ಮೆಟ್‌ ಇಲ್ಲದೆ ವಾಹನವನ್ನು ಚಾಲಯಿಸಿದರೆ ಅಂತಹ ವ್ಯಕ್ತಿಗಳ ವಿರುದ್ದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮೂರು ತಿಂಗಳ ಕಾಲ ಜೈಲು ಶಿಕ್ಷಯನ್ನು ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.