ಬರಗಾಲದ ಎಫೆಕ್ಟ್: ಜಾನುವಾರುಗಳಿಗೆ ಮೇವಿಲ್ಲದೆ ಅನ್ನದಾತ ಕಂಗಾಲು, ಬಂದಷ್ಟು ಹಣಕ್ಕೆ ಹಸುಗಳ ಮಾರಾಟ..!

ದನ ಕರು, ಹಸುಗಳನ್ನು ಸಂತೆಗೆ ತಂದು ಮಾರಾಟ ಮಾಡೋಣ ಅಂದ್ರೆ ಬೇಕಾಬಿಟ್ಟಿ ಬೆಲೆಗೆ ಹಸುಗಳನ್ನು ಕೊಂಡುಕೊಳ್ಳಲೂ ದಲ್ಲಾಳಿಗಳ ಹಾವಳಿ ಶುರುವಾಗಿದೆ. 40 ಸಾವಿರ ರೂಪಾಯಿಗೆ ಮಾರಾಟವಾಗ್ತಿದ್ದ ಹಸುವನ್ನು 15 ರಿಂದ 20 ಸಾವಿರಕ್ಕೆ ಕೇಳ್ತಿದ್ದಾರೆ. ಅರ್ಧಕ್ಕೆ ಅರ್ಧ ಕಾಸು ಪಡೆದು ಮತ್ತೇ ಸಾಲದ ಸುಳಿಯಲ್ಲಿ ಸಿಲುಕುವಂತಾಗ್ತಿದೆ. 

No Fodder for the Cattle Due to Drought in Chamarajanagara grg

ವರದಿ - ಪುಟ್ಟರಾಜು. ಆರ್. ಸಿ. ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ(ಅ.05):  ಇದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಹಾಗೂ ಪಶುಸಂಗೋಪನೆ ಸಚಿವ ವೆಂಕಟೇಶ್ ಅವರು ನೋಡ್ಲೇಬೇಕಾದ ಸ್ಟೋರಿ. ಹೌದು, ರಾಜ್ಯದಲ್ಲಿ ಮಳೆ ಇಲ್ಲದೇ ತೀವ್ರ ಬರಗಾಲ ತಾಂಡವಾಡ್ತಿದೆ. ಇತ್ತ ಕಾವೇರಿಯೂ ಕೂಡ ತಮಿಳುನಾಡು ಸೇರ್ತಿದ್ದಾಳೆ. ಬರದ ಮುನ್ಸೂಚನೆ ಹಿನ್ನಲೆಯಲ್ಲಿ ರೈತರು ಮೇವಿನ ಕೊರತೆಯುಂಟಾಗಿ ತಮ್ಮ ಜಾನುವಾರುಗಳನ್ನು ಸಾಕಲಾಗಿದೆ ಮಾರಾಟ ಮಾಡೋ ಪರಿಸ್ಥಿತಿ ಉದ್ಬವವಾಗಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ..

ಹಸುಗಳನ್ನು ಮಾರಾಟಕ್ಕೆ ಹಿಡಿದು ನಿಂತಿರುವ ರೈತರು. ರೈತರ ಬಳಿ ಬಂದು ಚೌಕಾಸಿ ಮಾಡಿ ಖರೀದಿಗೆ ಮುಂದಾಗುವ ದಲ್ಲಾಳಿಗಳು. ಮೇವಿಲ್ಲದೇ ಎಷ್ಟೋ ಸಿಕ್ಕಿದ್ರೆ ಸಾಕು ಅಂತಾ ಮಾರಾಟ ಮಾಡ್ತಿದ್ದ ದೃಶ್ಯ. ಯೆಸ್ ಇದೆಲ್ಲಾ ಕಂಡುಬಂದಿದ್ದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ದನದ ಸಂತೆಯಲ್ಲಿ. ಈಗಾಗ್ಲೇ ಜಿಲ್ಲೆಯ ಮೂರು ತಾಲೂಕುಗಳನ್ನು ರಾಜ್ಯ ಸರ್ಕಾರದ ಬರ ಪೀಡಿತ ಪಟ್ಟಿಗೆ ಸೇರಿಸಲಾಗಿದೆ. ಬರಪೀಡಿತ ಪಟ್ಟಿಗೆ ಸೇರಿಸಿದ್ರೂ ಕೂಡ ರೈತರಿಗೆ ಪ್ರಯೋಜನವಾಗ್ತಿಲ್ಲ. ಕೃಷಿಯ ಜೊತೆಗೆ ಹೈನುಗಾರಿಕೆ ಮೂಲಕ ಬದುಕು ಕಟ್ಟಿಕೊಂಡಿದ್ದ ಅನ್ನದಾತ ಇಂದು ಮಳೆ ಬರದೆ ಹಿನ್ನಲೆ ಮೇವಿನ ಕೊರತೆಯಿಂದಾಗಿ ಜಾನುವಾರುಗಳನ್ನು ಸಾಕಲೂ ಹೊರೆಯಾಗ್ತಿದ್ದು ಮಾರಾಟಕ್ಕೆ ಮುಂದಾಗಿದ್ದಾನೆ. ದನಕರುಗಳಿಗೆ ಬೇಕಾದ ಹಿಂಡಿ, ಬೂಸಾ, ಜೋಳ ಇವು ಸಾಕಷ್ಟು ದುಬಾರಿಯಾಗಿವೆ. ಇದ್ರಿಂದ ಕೊಂಡು ಸಾಕೋದು ರೈತನಿಗೆ ಹೊರೆಯಾಗ್ತಿದೆ. ಇತ್ತ ಮೇವು ಬೆಳೆಯಲು ನೀರಿಲ್ಲ, ಅತ್ತ ದನಕರುಗಳಿಗೆ ಬೇಕಾದ ಹಿಂಡಿ ಬೂಸಾ ಕೂಡ ದುಬಾರಿಯಾಗಿದ್ರಿಂದ ಮಾರಾಟ ಮಾಡ್ತಿದ್ದಾನೆ.

CHAMARAJANAGAR : ಸಮಗ್ರ ಕುಡಿಯುವ ನೀರಿನ ಕ್ರಿಯಾಯೋಜನೆ ತಯಾರಿಸಲು ಸೂಚನೆ

ಇನ್ನೂ ದನ ಕರು, ಹಸುಗಳನ್ನು ಸಂತೆಗೆ ತಂದು ಮಾರಾಟ ಮಾಡೋಣ ಅಂದ್ರೆ ಬೇಕಾಬಿಟ್ಟಿ ಬೆಲೆಗೆ ಹಸುಗಳನ್ನು ಕೊಂಡುಕೊಳ್ಳಲೂ ದಲ್ಲಾಳಿಗಳ ಹಾವಳಿ ಶುರುವಾಗಿದೆ. 40 ಸಾವಿರ ರೂಪಾಯಿಗೆ ಮಾರಾಟವಾಗ್ತಿದ್ದ ಹಸುವನ್ನು 15 ರಿಂದ 20 ಸಾವಿರಕ್ಕೆ ಕೇಳ್ತಿದ್ದಾರೆ. ಅರ್ಧಕ್ಕೆ ಅರ್ಧ ಕಾಸು ಪಡೆದು ಮತ್ತೇ ಸಾಲದ ಸುಳಿಯಲ್ಲಿ ಸಿಲುಕುವಂತಾಗ್ತಿದೆ. ಸಂಘಗಳಲ್ಲೂ ಕೂಡ ಸಾಲಸೋಲ ಮಾಡಿ ಹಸು ತರುತ್ತೇವೆ, ಮೇವಿನ ಕೊರತೆಯಿಂದ ಸಂತೆಗೆ ತಂದು ಮಾರಾಟ ಮಾಡಿದ್ರೆ ನಮಗೆ ನಷ್ಟವಾಗ್ತಿದೆ ಅಂತಾ ರೈತರು ಅಳಲು ತೋಡಿಕೊಳ್ತಾರೆ. ಅಲ್ಲದೆ ಮೇವು, ನೀರಿನ ಕೊರತೆ ಇರೋದ್ರಿಂದ ಕೂಡಲೇ ಪಶುಸಂಗೋಪನೆ ಸಚಿವ ವೆಂಕಟೇಶ್ ಎಚ್ಚೆತ್ತುಕೊಳ್ಳುವ ಶೀಘ್ರ ಗೋ ಶಾಲೆ ಆರಂಭಿಸಲಿ ಅಂತಾರೆ..

ಒಟ್ನಲ್ಲಿ ಬರದ ಎಫೆಕ್ಟ್ ನೇರವಾಗಿ ಅನ್ನದಾತನಿಗಷ್ಟೇ ಅಲ್ಲದೇ ಜಾನುವಾರುಗಳಿಗೂ ತಟ್ಟುತ್ತಿದೆ.ಸಾವಿರಾರು ಕೊಟ್ಟು ಖರೀದಿ ಮಾಡಿದ್ದ ರಾಸುಗಳನ್ನು ಸಾಕಲಾರದೆ ಅರ್ಧದಷ್ಟು ಮೊತ್ತಕ್ಕೆ ರೈತರು ಮಾರಾಟ ಮಾಡ್ತಿದ್ದಾರೆ.ಇನ್ನಾದ್ರೂ ಸರ್ಕಾರ ರೈತರ ನೆರವಿಗೆ ಧಾವಿಸಿ ಜಾನುವಾರುಗಳಿಗೆ ಸೂಕ್ತ ವ್ಯವಸ್ಥೆ ಮಾಡಿಕೊಡ್ತಾರಾ ಅನ್ನೋದನ್ನ ಕಾದುನೋಡಬೇಕಾಗಿದೆ.

Latest Videos
Follow Us:
Download App:
  • android
  • ios