Asianet Suvarna News Asianet Suvarna News

ಸಿಎಂ ಬದಲಾವಣೆ ಬಗ್ಗೆ ಪ್ರತಿಕ್ರಿಯಿಸದ ಸಚಿವ ಎಸ್‌ಟಿಎಸ್

  • ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್
  • ಕಬಿನಿ ಜಲಾಶಯಕ್ಕೆ ಒಳಹರಿವು ಕಡಿಮೆ ಆಗಿದೆ
  •  30 ಸಾವಿರ ಕ್ಯೂಸೆಕ್  ಹೊರ ಹರಿವು ಇದೆ. ಸುಮಾರು 60- 70 ಸಾವಿರ ಕ್ಯೂಸೆಕ್ ನೀರು ಹರಿದರೆ ಮಾತ್ರ ಪ್ರವಾಹ
No flood situation in Mysuru District Says Minister St Somashekar snr
Author
Bengaluru, First Published Jul 25, 2021, 12:12 PM IST
  • Facebook
  • Twitter
  • Whatsapp

ಮೈಸೂರು (ಜು.25):  ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
 
ಕಬಿನಿ ಜಲಾಶಯಕ್ಕೆ ಒಳಹರಿವು ಕಡಿಮೆ ಆಗಿದೆ. ಈಗ 30 ಸಾವಿರ ಕ್ಯೂಸೆಕ್  ಹೊರ ಹರಿವು ಇದೆ. ಸುಮಾರು 60- 70 ಸಾವಿರ ಕ್ಯೂಸೆಕ್ ನೀರು ಹರಿದರೆ ಮಾತ್ರ ಪ್ರವಾಹ ಆಗುತ್ತದೆ ಎಂದು ಸೋಮಶೇಖರ್ ಇಂದು ಮೈಸೂರಿನಲ್ಲಿ ಹೇಳಿದರು.
 
ಕೆಆರ್‌ಎಸ್‌ ಡ್ಯಾಂನಿಂದ ಒಂದೂವರೆ ಲಕ್ಷ ಕ್ಯೂಸೆಕ್ ಹೊರಹರಿವು ಇದ್ದರೆ ತೊಂದರೆ ಆಗುತ್ತದೆ. ಸದ್ಯಕ್ಕೆ ಅಂತಹ ಪರಿಸ್ಥಿತಿ ಇಲ್ಲ. ಹೀಗಾಗಿ ಜಿಲ್ಲೆಯಲ್ಲಿ ಪ್ರವಾಹದ ಭೀತಿ ಇಲ್ಲ ಎಂದು ಎಸ್.ಟಿ.ಸೋಮಶೇಖರ್ ಹೇಳಿದರು.

ಮೈಸೂರಿನಲ್ಲಿ ಇ-ಆಸ್ತಿ ತೆರಿಗೆ ವೆಬ್ ಸೈಟ್ ಲೋಕಾರ್ಪಣೆ

ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಲು ಸಚಿವ ಎಸ್‌.ಟಿ.ಸೋಮಶೇಖರ್ ನಿರಾಕರಿಸಿದ್ದು, ಪ್ರಧಾನಿ, ರಾಷ್ಟ್ರೀಯ ಅಧ್ಯಕ್ಷರು ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಒಂದು ಸಾಲಿನ ಉತ್ತರ ನೀಡಿ ತೆರಳಿದರು. 

Follow Us:
Download App:
  • android
  • ios