ಸುಬ್ರಹ್ಮಣ್ಯ (ಡಿ.15):   ಕುಕ್ಕೆ‌ ಸುಬ್ರಹ್ಕಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ಮಹೋತ್ಸವದ ಸಂಭ್ರಮ ಹಿನ್ನೆಲೆ  ಶ್ರೀಕ್ಷೇತ್ರ ಕುಕ್ಕೆಗೆ ನಾಲ್ಕು ದಿನಗಳ ಕಾಲ ಭಕ್ತರ ಪ್ರವೇಶ ನಿಷೇಧಿಸಲಾಗಿದೆ. 

ಕೋವಿಡ್ ಎರಡನೇ ಅಲೆಯ ಆತಂಕದ ಹಿನ್ನೆಲೆ ಪ್ರವೇಶ ನಿಷೇಧ ಮಾಡಲಾಗಿದೆ.  ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅದೇಶ ನೀಡಿದ್ದಾರೆ.  ದೇವಾಲಯಕ್ಕೆ ಹಾಗೂ ರಥಬೀದಿಗೆ ಡಿಸೆಂಬರ್ 17ರಿಂದ 20 ವರೆಗೆ ಪ್ರವೇಶ ನಿಷೇಧ ಮಾಡಿ ಆದೇಶ ನೀಡಲಾಗಿದೆ. 

ಎಲ್ಲಾ ಅಂತಾರಾಜ್ಯ, ಅಂತರ್ ಜಿಲ್ಲಾ ಪ್ರಯಾಣಿಕರು ಮತ್ತು ಭಕ್ತಾದಿಗಳಿಗೆ ಆಗಮಿಸದಂತೆ  ಸೂಚನೆ ನೀಡಲಾಗಿದೆ.  ದೇವಸ್ಥಾನದಲ್ಲಿ ರಥೋತ್ಸವ ಸೇವೆಗಳಿಗೆ ಮುಂಗಡ ನೋಂದಾಯಿಸಿರುವ ಭಕ್ತಾದಿಗಳಲ್ಲಿ ಇಬ್ಬರಿಗಷ್ಟೇ ಅವಕಾಶ ನೀಡಲಾಗುತ್ತದೆ. 

ಕುಕ್ಕೆ ದೇವಾಲಯದ ವಿರುದ್ಧ ಗರಂ ಆಯ್ತು ಭಕ್ತ ವೃಂದ .

ಆದೇಶ ಪಾಲಿಸದಿದ್ದರೆ ಕರ್ನಾಟಕ ಸಾಂಕ್ರಾಮಿಕ ರೋಗಗಳ ಅಧ್ಯಾದೇಶ 2020 ಕಲಂ 5(3), 6(1) (2) ರನ್ವಯ ಕಾನೂನು  ಕ್ರಮದ ಎಚ್ಚರಿಕೆಯನ್ನು ನೀಡಲಾಗಿದೆ. 

ಚಂಪಾಷಷ್ಠಿ ಮಹೋತ್ಸವದ ವಿಶೇಷ ದಿನಗಳಾದ ಚೌತಿ, ಪಂಚಮಿಯಂದು ಭಕ್ತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದ್ದು  ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. 

ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ ಚುನಾವಣೆ ಕರ್ತವ್ಯದಲ್ಲಿರುವ ಹಿನ್ನೆಲೆ  ಜನರ ನಿಯಂತ್ರಣ ಅಸಾಧ್ಯ ಹಿನ್ನೆಲೆ ಪ್ರವೇಶ‌ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.