ಬಹುತೇಕ ಮಂದಿಗೆ ಮೊದಲ ಡೋಸ್‌  ಕೋವ್ಯಾಕ್ಸಿನ್‌  2ನೇ ಡೋಸ್‌ ನೀಡಲು ತಾಲೂಕಿನಲ್ಲಿ ಕೋವ್ಯಾಕ್ಸಿನ್‌ ಖಾಲಿ ಲಸಿಕಾ ಕೇಂದ್ರಕ್ಕೆ ಬಂದು ವಾಪಸಾಗುತ್ತಿರುವ ಜನ

ಪಾಂಡವಪುರ (ಮೆ.17): ತಾಲೂಕಿನಲ್ಲಿ ಬಹುತೇಕ ಮಂದಿಗೆ ಮೊದಲ ಡೋಸ್‌ ನೀಡುವಾಗ ಕೋವ್ಯಾಕ್ಸಿನ್‌ ಹಾಕಲಾಗಿದ್ದು, ಕೋವಿಶೀಲ್ಡ್‌ ಅನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಿರಲಿಲ್ಲ. ಇದೀಗ 2ನೇ ಡೋಸ್‌ ನೀಡಲು ತಾಲೂಕಿನಲ್ಲಿ ಕೋವ್ಯಾಕ್ಸಿನ್‌ ಲಸಿಕೆ ದಾಸ್ತಾನು ಖಾಲಿಯಾಗಿದೆ. 

ಇದರಿಂದಾಗಿ ಪಟ್ಟಣದ ಲಸಿಕಾ ಕೇಂದ್ರ ಭಾನುವಾರ ಖಾಲಿ ಖಾಲಿ ಕಂಡುಬಂತು. 2ನೇ ಡೋಸ್‌ ಪಡೆದುಕೊಳ್ಳಲು ಆಗಮಿಸಿದ್ದ ಅನೇಕರು, ಕೇವಲ ಕೋವಿಶೀಲ್ಡ್‌ ಇರುವ ಕಾರಣ ವಾಪಾಸ್ಸಾದರು. 

ಹುಟ್ಟೂರು ಮಂಡ್ಯದ ನೆರವಿಗೆ ಮುಂದಾದ ಕೆಜಿಎಫ್‌ ನಿರ್ಮಾಪಕ ..

ಎರಡು ದಿನದಿಂದ ಕೊರೊನೊ ಲಸಿಕೆ ಹಾಕಿಸಿಕೊಳ್ಳುವವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಶನಿವಾರ ಕೋವಿಶೀಲ್ಡ್‌ನ್ನು ಎರಡನೇ ಡೋಸ್‌ ಆಗಿ ಕೇವಲ 18 ಮಂದಿಗೆ ಮಾತ್ರ ಹಾಕಲಾಗಿದ್ದು, ಭಾನುವಾರ 2ನೇ ಹಂತದ ಕೋವಿಶೀಲ್ಡ್‌ ಲಸಿಕೆಯನ್ನು ಯಾರೂ ಹಾಕಿಸಿಕೊಂಡಿಲ್ಲ. ರಾಜ್ಯದ ಬಹುತೇಕ ಕಡೆ ಇದೇ ರೀತಿಯ ಚಿತ್ರಣ ಕಂಡುಬಂದಿದ್ದು, ಕೋವ್ಯಾಕ್ಸಿನ್‌ಗೆ ಭಾರೀ ಬೇಡಿಕೆ ಕಂಡುಬಂದಿದೆ.