ಮಂಡ್ಯಕ್ಕಿಲ್ಲ ಕೊರೋನಾ ಆತಂಕ : ಮಾಸ್ಕ್ ಧರಿಸುವ ಅಗತ್ಯವೂ ಇಲ್ಲ !
ಮಂಡ್ಯ ಜಿಲ್ಲೆಗೆ ಕೊರೋನಾ ಸೋಂಕಿತ ಭೀತಿ ಇಲ್ಲ. ಇಲ್ಲಿನ ಜನರು ಮಾಸ್ಕ್ ಧರಿಸುವ ಅಗತ್ಯವೂ ಇಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಮಂಡ್ಯ [ಮಾ. 11] : ಮಂಡ್ಯದಲ್ಲಿ ಮಾಸ್ಕ್ ಗಳನ್ನು ಉಪಯೋಗಿಸುವ ಅಗತ್ಯವಿಲ್ಲ. ಕೋವಿಡ್ 19 ವೈರಾಣು ಶೀತ ಪ್ರದೇಶದಲ್ಲಿ ಮಾತ್ರ ಜೀವಿಸುತ್ತದೆ. ಇಲ್ಲಿ ಬಿಸಿಲು ಹೆಚ್ಚಾಗಿದೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಹೇಳಿದ್ದಾರೆ.
ಕೊರೋನಾ ವೈರಸ್ ಗಾಳಿಯಿಂದ ಹಬ್ಬುತ್ತದೆ ಎನ್ನುವ ತಪ್ಪು ಕಲ್ಪನೆ ಇದೆ. ಆದರೆ ಈ ವೈರಸ್ ಗಾಳಿಯಿಂದ ಹರಡುವುದಿಲ್ಲ ಎಂದು ಮಂಡ್ಯ ಜಿಲ್ಲಾಧಿಕಾರಿ ತಿಳಿಸಿದರು.
ಇನ್ನು ಈ ಬೇಸಿಗೆಯಲ್ಲಿ ರೋಗ ನಿರೊಧಕ ಶಕ್ತಿ ಹೆಚ್ಚಿಸುವ ನಿಂಬೆ, ಕಿತ್ತಳೆ, ಸೀಬೆಹಣ್ಣುಗಳನ್ನು ಸೇವಿಸಬೇಕು. ಆಸ್ಪತ್ರೆ ಸೇರಿದಂತೆ ಜನವಸತಿ ಪ್ರದೇಶಗಳಲ್ಲಿ ಎನ್ 95 ಮಾಸ್ಕ್ ಧರಿಸಬೇಕು ಎಂದರು.
ಕೊರೊನಾ ಭೀತಿ : 9,500 ಕೋಳಿ ಜೀವಂತ ಸಮಾಧಿ...
ಆದರೆ ಮಂಡ್ಯದಲ್ಲಿ ಮಾಸ್ಕ್ ಉಪಯೋಗಿಸುವ ಅಗತ್ಯವಿಲ್ಲ. ಮಂಡ್ಯ ಗ್ರಾಮೀಣ ಭಾಗಕ್ಕೆ ಹೊಂದಿಕೊಂಡಿರುವುದರಿಂದ ಬೆಂಗಳೂರು - ಮುಂವೈ ನಗರಗಳಂತೆ ಜನರ ಒಂದೆಡೆ ಹೆಚ್ಚು ಸೇರುವುದಿಲ್ಲ. ಇದರಿಂದ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದರು.
ಇನ್ನು ಜನರು ಮಾಂಸಾಹಾರ ಸೇವನೆ ಮಾಡುವಾಗ ಹೆಚ್ಚು ಬೇಯಿಸಿ ಸೇವಿಸುವುದು ಸೂಕ್ತ. ಅರೆಬೆಂದ ಮಾಂಸವನ್ನು ಸೇವಿಸಬೇಡಿ. ಚೀನಾದಿಂದ ಆಮದಾಗುವ ಆಹಾರ ಪದಾರ್ಥಗಳನ್ನು ಸೇವಿಸಬೇಡಿ. ಆದರೆ ಹೆಚ್ಚು ಭಯಪಡುವ ಅಗತ್ಯವಿಲ್ಲ. ಈಗಾಗಲೇ ವಿಶೇಷ ವಾರ್ಡ್ ತೆರೆದು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟೇಶ್ ಹೇಳಿದರು.