ಮೈಸೂರು  (ಆ.22): ನಂಜನಗೂಡು ತಾಲೂಕು ಆರೋಗ್ಯಾಧಿಕಾರಿ ಡಾ.ನಾಗೇಂದ್ರ ಆತ್ಮಹತ್ಯೆಯ ಹಿನ್ನೆಲೆ ವೈದ್ಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರತಿಭಟಿಸಿದ್ದರಿಂದ ಶುಕ್ರವಾರ ಯಾವುದೇ ಕೋವಿಡ್‌ 19ಕ್ಕೆ ಸಂಬಂಧಪಟ್ಟಂತೆ ಎಲ್ಲಾ ಸೇವೆಗಳೂ ಬಂದ್‌ ಆಗಿದ್ದವು. 

ಈ ಹಿನ್ನೆಲೆಯಲ್ಲಿ ಕೋವಿಡ್‌ ಪರೀಕ್ಷೆ ನಡೆದಿಲ್ಲ. ಹೀಗಾಗಿ ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವ್‌ ಪ್ರಕರಣವೂ ವರದಿಯಾಗಿಲ್ಲ. ಮಾತ್ರವಲ್ಲದೆ ಜಿಲ್ಲೆಯಲ್ಲಿ ಗುಣಮುಖರಾಗಿ ಡಿಸ್ಚಾಜ್‌ರ್‍ ಆದವರು, ಕೋವಿಡ್‌ನಿಂದ ಮೃತಪಟ್ಟವರ ಅಂಕಿ ಅಂಶಗಳಾವುವೂ ಲಭ್ಯವಾಗಿಲ್ಲ. 

ಇನ್ನೆರಡು ವರ್ಷದೊಳಗೆ ಕೊನೆಯಾಗುತ್ತೆ ಕೊರೋನಾ: ವಿಶ್ವ ಆರೋಗ್ಯ ಸಂಸ್ಥೆ..

ಹೀಗಾಗಿ, ಆರೋಗ್ಯ ಇಲಾಖೆಯ ಬಿಡುಗಡೆಗೊಳಿಸುವ ಕೊರೋನಾ ಹೆಲ್ತ್‌ ಬುಲೆಟಿನ್‌ನಲ್ಲಿ ಮೈಸೂರು ಜಿಲ್ಲೆಗೆ ಸಂಬಂಧಿಸಿದಂತೆ ಶೂನ್ಯ ಎಂದು ನಮೂದಾಗಿದೆ.