'ಬಿಜೆಪಿ ಆಡಳಿತದಲ್ಲಿ ಕೋಮು ಗಲಭೆ ನಡದೇ ಇಲ್ಲ'
ಬಿಜೆಪಿ ವಿಶ್ವದಲ್ಲಿಯೇ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಪಕ್ಷ| ಕಾಂಗ್ರೆಸ್‌ನವರು ಮಾತ್ರ ಬಿಜೆಪಿ ಮುಸ್ಲಿಮರ ವಿರೋಧಿ ಎಂದು ಆರೋಪಿಸುತ್ತಿರುವುದು ಅಸಮಂಜಸ| ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರನ್ನು ಕೇವಲ ವೋಟ್‌ಗಾಗಿ ಬಳಸಿಕೊಂಡಿದೆ| ಬಿಜೆಪಿಯಲ್ಲಿರುವುದು ದೇಶ ಮೊದಲು ನಂತರ ನಾವು ಎಂಬ ಸಿದ್ಧಾಂತ: ಸಿಸಿ ಪಾಟೀಲ್|
ನರಗುಂದ(ಮಾ.15): ಇಸ್ ದೇಶ ಕಾ ಖಾನಾ-ಪೀನಾ, ಸೋಚ್ ಥಾ ಪಾಕಿಸ್ತಾನ ಕಾ ಎನ್ನುವವರಿಗೆ ಬಿಜೆಪಿಯಲ್ಲಿ ಯಾವುದೇ ಸ್ಥಾನಮಾನಗಳಿಲ್ಲ. ಈ ಹಿಂದೆ ಬಿ.ಆರ್. ಯಾವಗಲ್ಲ ಅಧಿಕಾರದಲ್ಲಿದ್ದಾಗ ಹಿಂದೂ-ಮುಸ್ಲಿಂ ಗಲಾಟೆಗಳಾಗಿವೆಯೇ ಹೊರತು ಬಿಜೆಪಿ ಸರ್ಕಾರದಲ್ಲಿ ನಡೆದಿಲ್ಲ ಎಂಬುದನ್ನು ಕ್ಷೇತ್ರದ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.
ತಾಲೂಕಿನ ಶಿರೋಳ ಗ್ರಾಮದಲ್ಲಿ ಪ್ರಕಾಶಗೌಡ ತಿರುಕನಗೌಡ್ರ ನೇತೃತ್ವದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿರುವ ನೂರಾರು ಕಾರ್ಯಕರ್ತರಿಗೆ ಶುಕ್ರವಾರ ಪಕ್ಷದ ಧ್ವಜವನ್ನು ನೀಡಿ ಅವರು ಮಾತನಾಡಿದರು. ಬಿಜೆಪಿ ವಿಶ್ವದಲ್ಲಿಯೇ ಅತಿ ಹೆಚ್ಚು ಕಾರ್ಯಕರ್ತರನ್ನು ಹೊಂದಿರುವ ಪಕ್ಷ. ಈ ಪಕ್ಷದಲ್ಲಿ ಎಲ್ಲ ಸಮಾಜದವರನ್ನು ಸಮಾನ ರೀತಿಯಲ್ಲಿ ಕಾಣಲಾಗುತ್ತದೆ. ಆದರೆ, ಕಾಂಗ್ರೆಸ್‌ನವರು ಮಾತ್ರ ಬಿಜೆಪಿ ಮುಸ್ಲಿಮರ ವಿರೋಧಿ ಎಂದು ಆರೋಪಿಸುತ್ತಿರುವುದು ಅಸಮಂಜಸವಾದದ್ದು. ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರನ್ನು ಕೇವಲ ವೋಟ್‌ಗಾಗಿ ಬಳಸಿಕೊಂಡಿದ್ದಾರೆ. ಬಿಜೆಪಿಯಲ್ಲಿರುವುದು ದೇಶ ಮೊದಲು ನಂತರ ನಾವು ಎಂಬ ಸಿದ್ಧಾಂತ. ಇದಕ್ಕಾಗಿಯೇ ರಾಜ್ಯದ ಜನರು ಬಿಜೆಪಿ ಪ್ರೀತಿಸುತ್ತಿದ್ದಾರೆ ಎಂದರು.
40 ವರ್ಷ ಕಾಂಗ್ರೆಸ್‌ನಲ್ಲಿದ್ದ ಹಿರಿಯ ಮುಖಂಡ ಬಿಜೆಪಿಗೆ ಸೇರ್ಪಡೆ
ರಾಷ್ಟ್ರೀಯ ಬದ್ಧತೆ, ಸಮರ್ಥ ನಾಯಕತ್ವ ಹೊಂದಿರುವ ಬಿಜೆಪಿ ಮುಂದಿನ 20 ವರ್ಷಗಳ ಕಾಲ ಯಾವುದೇ ಅಡೆತಡೆಗಳಿಲ್ಲದೇ ಅಧಿಕಾರವನ್ನು ನಿರ್ವಹಿಸಲಿದೆ. ಮುಂಬರುವ ತಾಪಂ, ಜಿಪಂ ಚುನಾವಣೆಗಳಲ್ಲಿ ಪಕ್ಷವು ಉತ್ತಮ ಸಾಧನೆ ಮಾಡಬೇಕಾಗಿದೆ. ಇದಕ್ಕೆ ಕಾರ್ಯಕರ್ತರು ಉತ್ತಮ ರೀತಿಯಲ್ಲಿ ಸಜ್ಜುಗೊಳ್ಳಬೇಕು. ಅಲ್ಪಸಂಖ್ಯಾತರ ಕಲ್ಯಾಣಕ್ಕೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ . 150 ಕೋಟಿ ಮೀಸಲಿಟ್ಟಿದೆ. ಅದರಂತೆ ಎಲ್ಲ ಸಮಾಜದವರಿಗೂ ಆದ್ಯತೆ ನೀಡಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಲ್ಲಿ ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.
ಪ್ರಕಾಶಗೌಡ ತಿರಕನಗೌಡ್ರ ಮಾತನಾಡಿ, ನಮ್ಮ ಗ್ರಾಮದ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ ಸೇರ್ಪಡೆಗೊಂಡಿದ್ದೇನೆ ಎಂದರು. ಎಂ.ಎಸ್. ಕರಿಗೌಡ್ರ ಮಾತನಾಡಿದರು. ನಿಂಗಣ್ಣ ಗಾಡಿ, ಬಾಬಣ್ಣ ಹಿರೇಹೊಳಿ, ಲಾಲಸಾಬ್ ಅರಗಂಜಿ, ಬಾಬುಗೌಡ ತಿಮ್ಮನಗೌಡ್ರ, ಶಂಕರಗೌಡ ಯಲ್ಲಪ್ಪಗೌಡ್ರ, ಗುರುದೇವಿ ಶಾನವಾಡಮಠ, ನೇತಾಜಿಗೌಡ ಕೆಂಪನಗೌಡ್ರ, ಶಾರದಾ ಜವಳಿ, ವಿ.ಕೆ. ಮರಿಗುದ್ದಿ, ಎಂ.ಎಸ್. ಪಾಟೀಲ, ಅನಿಲ್ ಧರಿಯಣ್ಣವರ, ಉಮೇಶಗೌಡ ಪಾಟೀಲ, ಜಗದೀಶ ಬ್ಯಾಡಗಿ, ಅಶೋಕ ಹೆಬ್ಬಳ್ಳಿ, ಶ್ರೀದೇವಿ ಗುಂಡ್ಲೂರ, ಸಿದ್ದಯ್ಯ ಹೊಸಮನಿ, ಗುರುಬಸಯ್ಯ ನಾಗಲೋಟಿಮಠ, ಬೀರಪ್ಪ ಕಾಡಪ್ಪನವರ ಉಪಸ್ಥಿತರಿದ್ದರು.