Asianet Suvarna News Asianet Suvarna News

ಬೆಂಗಳೂರು : ಫ್ಲ್ಯಾಟ್‌ ದುರಂತಕ್ಕೆ ಕಾರಣ ಇನ್ನೂ ನಿಗೂಢ!

  • ಬನ್ನೇರುಘಟ್ಟರಸ್ತೆಯಲ್ಲಿರುವ ದೇವರ ಚಿಕ್ಕನಹಳ್ಳಿಯಲ್ಲಿರುವ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ನಡೆದ ಅಗ್ನಿ ದುರಂತ
  • ಅಗ್ನಿ ದುರಂತದ ಕಾರಣ ಇನ್ನು ನಿಗೂಢ
No clarity yet on cause of fire Bengaluru flat snr
Author
Bengaluru, First Published Sep 23, 2021, 7:42 AM IST

ಬೆಂಗಳೂರು (ಸೆ.23):  ಬನ್ನೇರುಘಟ್ಟರಸ್ತೆಯಲ್ಲಿರುವ ದೇವರ ಚಿಕ್ಕನಹಳ್ಳಿಯಲ್ಲಿರುವ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ನಡೆದ ಅಗ್ನಿ ದುರಂತದ ಕಾರಣ ಇನ್ನು ನಿಗೂಢವಾಗಿಯೇ ಉಳಿದಿದೆ.

ಬುಧವಾರ ವಿಧಿವಿಜ್ಞಾನ ಪ್ರಯೋ​ಗಾ​ಲಯ ಸಿಬ್ಬಂದಿ, ಬೆಸ್ಕಾಂ, ಇಂಡಿ​ಯನ್‌ ಗ್ಯಾಸ್‌ ಸಂಸ್ಥೆ ಹಾಗೂ ಅಗ್ನಿ​ಶಾ​ಮಕ ದಳ​ದ ಅಧಿ​ಕಾ​ರಿ​ಗಳು ದುರಂತ ನಡೆದ ಫ್ಲ್ಯಾಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಪ್ರಾಥ​ಮಿಕ ಮಾಹಿತಿ ಪ್ರಕಾರ ಗ್ಯಾಸ್‌ ಪೈಪ್‌ ಸೋರಿಕೆ ಅಥವಾ ಸಿಲಿಂಡರ್‌ ಸ್ಫೋಟ ಹಾಗೂ ಶಾರ್ಟ್‌ ಸಕ್ರ್ಯೂ​ಟ್‌​ನಿಂದ ಘಟನೆ ಸಂಭ​ವಿ​ಸಿಲ್ಲ ಎಂಬುದು ಪತ್ತೆ​ಯಾ​ಗಿ​ದೆ ಎಂದು ತಿಳಿದು ಬಂದಿದೆ.

ಬೆಳಗ್ಗೆ 11ರ ಸುಮಾ​ರಿಗೆ ಅಪಾ​ರ್ಟ್‌​ಮೆಂಟ್‌ಗೆ ಆಗ​ಮಿ​ಸಿದ ತನಿಖಾ ಸಂಸ್ಥೆಯ ಅಧಿ​ಕಾ​ರಿ​ಗಳು 210 ಸಂಖ್ಯೆಯ ಫ್ಲ್ಯಾಟನ್ನು ಸಂಪೂ​ರ್ಣ​ವಾಗಿ ಪರಿ​ಶೀ​ಲಿ​ಸಿದ್ದು, ಅಡುಗೆ ಮನೆ, ಬಾತ್‌​ರೂಮ್‌, ಹಾಲ್‌, ಬೆಡ್‌ ರೂಮ್‌, ಜತೆಗೆ ಟಿವಿ, ಫ್ರಿಡ್ಜ್‌, ವಾಷಿಂಗ್‌ ಮೆಷಿನ್‌, ಮೊಬೈಲ್‌ ಚಾರ್ಜಿಂಗ್‌ ಹಾಕುವ ಸ್ಥಳ​ ಸೇರಿ ಎಲ್ಲೆಡೆ ಶೋಧಿಸಿದ್ದಾರೆ. ಆದರೆ, ಎಲ್ಲಿಯೂ ಶಾರ್ಟ್‌ ಸಕ್ರ್ಯೂ​ಟ್‌​ನಿಂದ ಘಟನೆ ನಡೆ​ದಿ​ರುವ ಬಗ್ಗೆ ಯಾವುದೇ ಸುಳಿ​ವು ಲಭ್ಯವಾಗಿಲ್ಲ. ಒಂದು ವೇಳೆ ಶಾರ್ಟ್‌ ಸಕ್ರ್ಯೂ​ಟ್‌​ನಿಂದ ಬೆಂಕಿ ಹೊತ್ತಿ​ಕೊಂಡಿ​ದ್ದರೆ ಇಷ್ಟುದೊಡ್ಡ ಪ್ರಮಾ​ಣ​ದಲ್ಲಿ ಬೆಂಕಿ ಆಗಲು ಸಾಧ್ಯ​ವಿಲ್ಲ ಎಂದು ಅಧಿ​ಕಾ​ರಿ​ಗಳು ಅಭಿ​ಪ್ರಾಯ ವ್ಯಕ್ತ​ಪ​ಡಿ​ಸಿ​ದ್ದಾ​ರೆ ಎನ್ನಲಾಗಿದೆ.

ಇಂಡಿ​ಯನ್‌ ಗ್ಯಾಸ್‌ ಏಜೆನ್ಸಿ ಸಿಬ್ಬಂದಿ ಗ್ಯಾಸ್‌ ಸಿಲಿಂಡರ್‌, ಗ್ಯಾಸ್‌ ಪೈಪ್‌​ಗ​ಳ​ನ್ನು ಪರಿ​ಶೀ​ಲಿ​ಸಿ​ದ್ದಾರೆ. ಎಲ್ಲಿಯೂ ಸೋರಿಕೆ ಬಗ್ಗೆ ಸ್ಪಷ್ಟತೆ ಸಿಗು​ತ್ತಿಲ್ಲ. ಮತ್ತೊಂದೆಡೆ ದುರಂತದ ಬಳಿಕ ಅಗ್ನಿ​ಶಾ​ಮಕ ಸಿಬ್ಬಂದಿಯೇ ಮನೆ​ಯ​ಲ್ಲಿದ್ದ ಎರಡು ಸಿಲಿಂಡ​ರ್‌​ಗ​ಳನ್ನು ಹೊರ​ಗ​ಡೆ ತಂದಿ​ದ್ದಾರೆ. ಇನ್ನು ಈ ಮನೆ​ಯ​ವರು ಒಳ​ಗ​ಡೆಯೇ ಸಿಲಿಂಡರ್‌ ಇಟ್ಟು​ಕೊಂಡಿದ್ದು, ಅಪಾ​ರ್ಟ್‌​ಮೆಂಟ್‌​ನಲ್ಲಿ ಅಳ​ವ​ಡಿ​ಸಿದ್ದ ಗ್ಯಾಸ್‌ ಪೈಪ್‌ ಬಳಕೆ ಮಾಡು​ತ್ತಿ​ರ​ಲಿಲ್ಲ ಎಂದು ಹೇಳಲಾಗಿ​ದೆ.

ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ದುರಂತ, ಮುಂದುವರೆದ ಖಾಕಿ ಕಾರ್ಯಾಚರಣೆ

ಬೆಸ್ಕಾಂ ಅಧಿ​ಕಾ​ರಿ​ಗಳು ಮನೆಯ ವಿದ್ಯುತ್‌ ಮೀಟ​ರ್‌, ಪ್ರತಿ​ಯೊಂದು ಸ್ವಿಚ್‌ ಬೋರ್ಡ್‌​ಗ​ಳನ್ನು ಪರಿ​ಶೀ​ಲಿ​ಸಿ​ದ್ದಾರೆ. ಜತೆಗೆ ಅಪಾ​ರ್ಟ್‌​ಮೆಂಟ್‌ ಆವ​ರ​ಣ​ದಲ್ಲಿ​ರುವ ಅಳ​ವ​ಡಿ​ಸಿ​ರುವ ಟ್ರಾನ್ಸ್‌​ಫಾ​ರ್ಮ​ರ್‌ ಕೂಡ ಪರೀ​ಕ್ಷಿ​ಸಿ​ದ್ದಾ​ರೆ. ಒಂದೆ​ರಡು ದಿನ​ಗ​ಳಲ್ಲಿ ವರದಿ ಬರ​ಲಿದ್ದು, ಘಟ​ನೆಗೆ ಸ್ಪಷ್ಟತೆ ಸಿಗ​ಲಿದೆ ಎಂದು ಪೊಲೀಸ್‌ ಮೂಲ​ಗಳು ತಿಳಿ​ಸಿ​ವೆ.

ರಕ್ಷಣೆಗೆ ತೊಡಕಾದ ಗ್ರಿಲ್‌

ಫ್ಲ್ಯಾಟ್‌ನ ಬಾಲ್ಕ​ನಿ​ಯಲ್ಲಿ ಕಬ್ಬಿ​ಣದ ಗ್ರೀಲ್‌ ಅಳ​ವ​ಡಿ​ಸಿ​ದ್ದ​ರಿಂದಲೇ ಮಹಿ​ಳೆ​ಯರು ಮೃತ​ಪ​ಟ್ಟಿ​ದ್ದು, ​ಅ​ಲ್ಲದೆ ರಕ್ಷಣಾ ಕಾರ್ಯಾಕ್ಕೂ ತೊಡ​ಕಾ​ಗಿದೆ ಎಂದು ಅಗ್ನಿ​ಶಾ​ಮಕ ಸಿಬ್ಬಂದಿ ಅಭಿ​ಪ್ರಾ​ಯ​ಪ​ಟ್ಟಿ​ದ್ದಾರೆ. ಒಂದು ವೇಳೆ ಗ್ರೀಲ್‌ ಇಲ್ಲ​ದಿ​ದ್ದರೆ, ಬಾಲ್ಕ​ನಿ​ಯಲ್ಲಿದ್ದ ಒಬ್ಬ ಮಹಿ​ಳೆ​ಯನ್ನು ಏಣಿ ಮೂಲಕ ತೆರಳಿ ಬದು​ಕಿ​ಸ​ಬ​ಹು​ದಿತ್ತು ಎಂದು ಅಗ್ನಿ​ಶಾ​ಮಕ ಸಿಬ್ಬಂದಿ ಅಭಿ​ಪ್ರಾ​ಯ​ವ್ಯ​ಕ್ತ​ಪ​ಡಿ​ಸಿ​ದರು.

ದುರ್ಘ​ಟ​ನೆಗೆ ಅಪಾ​ರ್ಟ್‌​ಮೆಂಟ್‌ ಮಾಲೀಕ ಮತ್ತು ಬಿಬಿ​ಎಂಪಿಯ ನಿರ್ಲ​ಕ್ಷ್ಯವೇ ಕಾರಣ ಎಂದು ಹೇಳ​ಲಾ​ಗಿದೆ. ಅಪಾ​ರ್ಟ್‌​ಮೆಂಟ್‌​ನಲ್ಲಿ ಬೆಂಕಿ ಹೊತ್ತಿ​ಕೊಂಡಾಗ ಜನ​ರನ್ನು ಎಚ್ಚ​ರಿ​ಸ​ಲು ಸೈರನ್‌ ಇಲ್ಲ. ಬೆಂಕಿ ನಂದಿ​ಸಲು ವಾಟರ್‌ ಲೈನ್‌ ವ್ಯವಸ್ಥೆ ಇಲ್ಲ. ಫೈರ್‌ ಎಕ್ಸ್‌​ಟೆ​ನ್ಶನ್‌ ನಿರ್ವ​ಹಣೆ ಇಲ್ಲ ಎಂದು ಅಪಾ​ರ್ಟ್‌​ಮೆಂಟ್‌ ನಿವಾ​ಸಿ​ಗಳು ಆರೋ​ಪಿ​ಸಿ​ದ್ದಾ​ರೆ.

Follow Us:
Download App:
  • android
  • ios