ಕಾರ್ಕಳ: ನಕ್ಸಲ್‌ ಪೀಡಿತ ಈದು ಗ್ರಾಮದಲ್ಲಿ 'ಇಲ್ಲ' ಗಳ ನಡುವೆ ಬದುಕು!

ಈದು ಗ್ರಾಮ ವ್ಯಾಪ್ತಿಯಲ್ಲಿ ಎಂಡೋಸಲ್ಫಾನ್ ಪೀಡಿತರು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರ ಅವರಿಗಾಗಿ ಬಸ್ ಪಾಸ್ ವ್ಯವಸ್ಥೆ ಕಲಿಸಿದೆ. ಈ ಪ್ರದೇಶದ ಎಂಡೋಸಲ್ಮಾನ್ ಪೀಡಿತರಿಗೆ ಬಸ್ ಪಾಸ್ ಇದ್ದರೂ ಒಂದೇ ಒಂದು ಸರಕಾರಿ ಬಸ್ ಇಲ್ಲಿ ಇಲ್ಲ. 

no basic infrastructure in Naxal-affected Iduvi village at Karkala in Udupi grg

ರಾಂ ಅಜೆಕಾರು 

ಕಾರ್ಕಳ(ನ.14): ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಒಂದಾದ ಈದುವಿನಲ್ಲಿ ಸಮಸ್ಯೆಗಳನ್ನೇ ಸರಮಾಲೆ ಎದ್ದು ಕಾಣುತ್ತಿದೆ. ರಸ್ತೆಗಳಲ್ಲಿ ಹೊಂಡಾಗುಂಡಿ, ನೆಟ್ವರ್ಕ್ ಸಮಸ್ಯೆಗಳು ಗ್ರಾಮವಾಸಿಗಳನ್ನು ಕಾಡುತ್ತಿದೆ. ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗಾಗಿ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. 

ಬಸ್ ಪಾಸ್ ಇದ್ದರೂ ಬಸ್ ಇಲ್ಲ: 

ಈದು ಗ್ರಾಮ ವ್ಯಾಪ್ತಿಯಲ್ಲಿ ಎಂಡೋಸಲ್ಫಾನ್ ಪೀಡಿತರು ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರ ಅವರಿಗಾಗಿ ಬಸ್ ಪಾಸ್ ವ್ಯವಸ್ಥೆ ಕಲಿಸಿದೆ. ಈ ಪ್ರದೇಶದ ಎಂಡೋಸಲ್ಮಾನ್ ಪೀಡಿತರಿಗೆ ಬಸ್ ಪಾಸ್ ಇದ್ದರೂ ಒಂದೇ ಒಂದು ಸರಕಾರಿ ಬಸ್ ಇಲ್ಲಿ ಇಲ್ಲ. ಕಾರ್ಕಳನಕಲ್ ಪೀಡಿತ ಪ್ರದೇಶಗಳಾದ ಕಾಡಂಚಿನ ನಾರಾವಿ, ನೂರಲ್ಲೆಟ್ಟು, ಗುಮ್ಮೆತ್ತು, ಗಂಗೆನೀರು ಭಾಗಗಳಲ್ಲಿ ಸುಮಾರು 7000ಕ್ಕೂ ಹೆಚ್ಚು ಜನಸಂಖ್ಯೆ ಇದೆ. ನೂರಾಲ್‌ಲೆಟ್ಟು ಗ್ರಾಮವು ಈದು ಗ್ರಾಮ ಪಂಚಾಯತಿ ಕಾರ್ಯಾಲಯದಿಂದ ಸುಮಾರು ಐದು ಕಿ.ಮೀ ದೂರದಲ್ಲಿದೆ. ಈ ಭಾಗದಲ್ಲಿ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಗಳಿಗೆ ಹೋಗಲು ರಿಕ್ಷಾ ಹಾಗೂ ಇತರ ವಾಹನಗಳನ್ನು ಆಶ್ರಯಿಸಬೇಕಿದೆ. ಇಲ್ಲದಿದ್ದರೆ ಅರ್ಧಕ್ಕೆ ಮೊಟಕುಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಭಾಗದಲ್ಲಿ ಸರ್ಕಾರಿ ಬಸ್‌ಗಳ ಸಂಚಾರ ಆರಂಭವಾದರೆ ವಿದ್ಯಾರ್ಥಿಗಳು ಹಾಗೂ ಕೂಲಿಕಾರ್ಮಿಕರಿಗೂ ಅನುಕೂಲವಾಗಲಿದೆ. 

ಕಾಂಗ್ರೆಸ್‌ನಿಂದ ಕಾರ್ಕಳ ಪ್ರವಾಸೋದ್ಯಮ ಕಗ್ಗೋಲೆ: ಸುನಿಲ್ ಕುಮಾರ್

ಟವರ್‌ಉಂಟು, ನೆಟ್ವರ್ಕ್ ಇಲ್ಲ: 

ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಒಂದಾದ ನೂರಾಲ್‌ಬೆಟ್ಟು ಗ್ರಾಮದಲ್ಲಿ ಕಳೆದ ಒಂದು ವರ್ಷ ಹಿಂದೆ ಬಿಎಸ್ಎನ್‌ಎಲ್ ಟವರ್ ನಿರ್ಮಾಣ ಮಾಡಲಾಗಿದೆಯಾದರೂ ಇಲ್ಲಿ ಇನ್ನೂ ನೆಟ್ವರ್ಕ್ ಸಿಗುವುದಿಲ್ಲ. ಸ್ಥಳೀಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮುಂದುವರೆಯಲು ನೆಟ್ವರ್ಕ್ ಸಮಸ್ಯೆ ಗಳು ಕಾಡುತ್ತಿವೆ. ಮನೆಯಿಂದ ಕೆಲಸಮಾಡುವ ನೌಕರರಿಗೆ ನೆಟ್ವರ್ಕ್‌ ಸಮಸ್ಯೆ ಹಿನ್ನೆಲೆಯಲ್ಲಿಊರಿನಿಂದ ನಾಲೈದು ಕಿ.ಮೀ. ದೂರದೂರಿಗೆ ಹೋಗಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ.

ಗುಂಡಿ ನಡುವೆ ರಸ್ತೆ!: 

ಅರಣ್ಯ ಪ್ರದೇಶದಿಂದ ಆವೃತವಾದ ಮಾಳದ ಹುಕ್ರಟ್ಟೆ ಮಾರ್ಗವಾಗಿ ನೂರಾಲ್‌ಬೆಟ್ಟು ಹೊಸಾರು ಗುಂಡೋನಿವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ವಾಹನಗಳ ಸಂಚಾರವು ತೀರಾ ದುಸ್ತವಾಗಿದ್ದು ಜಲ್ಲಿಕಲ್ಲುಗಳು ಎದು ಚೆಲ್ಲಪಿಲ್ಲಿಯಾಗಿವೆ. ದ್ವಿಚಕ್ರ ಸಹಿ ಸಹಿತ ಯಾವುದೇ ವಾಹನಗಳ ಸಂಚಾರಕ್ಕೆ ಈ ರಸ್ತೆ ಯೋಗ್ಯವಾಗಿಲ್ಲ. 2020-21ರ ಸಾಲಿನ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಲ್ಲಿ ಹೊಸಾರು ಗುಂಡೋನಿ 4.5 ಕಿ.ಮೀ. ವರೆಗಿನ ರಸ್ತೆ ಅಭಿವೃದ್ಧಿ ಗಾಗಿ ಸುಮಾರು 1 ಕೋಟಿ ರುಪಾಯಿ ಮಂಜೂರಾಗಿ ಮೇಲ್ದರ್ಜೆಗೆ ಏರಿಸಲಾಗಿತ್ತು. ಈಗ ಈ ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲ. ಅದರಲ್ಲೂ ಕಾರ್ಕಳ ಹೊಸ್ತಾರು ನಾರಾವಿ ಸಾಗುವ ರಾಜ್ಯ ಹೆದ್ದಾರಿಯಲ್ಲಿ ಹೊಂಡಾಗುಂಡಿಗಳೇ ತುಂಬಿ ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ.

ವಿದ್ಯುತ್ ಪೂರೈಕೆ ಇಲ್ಲ; 

ಪಶ್ಚಿಮ ತೀರಾ ತಪ್ಪಲಿನ ಪ್ರದೇಶದ ಈದು ಗ್ರಾಮದ ಕನ್ಯಾಲು ಭಾಗದ ಮಲೆಕುಡಿಯ ಸಮುದಾಯದ ಮನೆಗಳಲ್ಲಿ ವಿದ್ಯುತ್ ಪೂರೈಕೆಯೇ ಇಲ್ಲವಾಗಿದೆ. ಕುದುರೆಮುಖವನ್ಯ ಜೀವಿ ವಿಭಾಗದ ವ್ಯಾಪ್ತಿಯಲ್ಲಿ ಬರುವ ಕಾರಣ ಅರಣ್ಯ ಪ್ರದೇಶದಲ್ಲಿ ವಿದ್ಯುತ್ ಕಂಬಗಳನ್ನು ಹಾಕಲು ಇಲಾಖೆ ಸಹಕರಿಸುತಿಲ್ಲ.

ಕಾರ್ಕಳದಿಂದ ಈದು. ನೂರಲ್ಲೆಟ್ಟು, ಉಡುಪಿ ಕಾರ್ಕಳ ಬಜಗೋಳಿ ಹೊಸ್ಮಾರ್  ನಾರಾವಿ, ನಾರಾವಿ ಶಿರ್ತಾಡಿ, ಮೂಡುಬಿದಿರೆ ಮಾರ್ಗವಾಗಿ ಸರಕಾರಿ ಬಸ್‌ ಕಲ್ಪಿಸುವಂತೆ ಜಿಲ್ಲಾಡಳಿತ ಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಈದು ಗ್ರಾ.ಪಂ ಅಧ್ಯಕ್ಷ ಸದಾನಂದ ಪೂಜಾರಿ ತಿಳಿಸಿದ್ದಾರೆ. 

ಹಿಂದೂ-ಮುಸ್ಲಿಂ ಬಿಟ್ರೆ ಅವರಿಗೆ ಬೇರೇನು ಗೊತ್ತಿಲ್ಲ: ಯತ್ನಾಳ್ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿ

ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು, ಮನೆಯಿಂದ ಕೆಲಸ ಮಾಡುತ್ತಿದ್ದೇನೆ. ನೆಟ್ವರ್ಕ್ ಇಲ್ಲದ ಕಾರಣ ಮನೆಯಿಂದ 5 ಕಿ.ಮೀ. ದೂರ ಕ್ರಮಿಸಿ ಹೊಸ್ಕಾರಿನಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದಿದೆ. ನೆಟ್ವರ್ಕ್ ಬೇಕಾದರೆ ಗುಡ್ಡ ಹತ್ತಿ ಕೂರಬೇಕು ಎಂದು ರಾಜೀವಿ ನೂರಲ್ಲೆಟ್ಟು ಹೇಳಿದ್ದಾರೆ. 

ಈದು ಗ್ರಾಮಕ್ಕೆ ವಿಶೇಷ ಪ್ಯಾಕೇಜ್ ನೀಡಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ನೂರಬ್ಬೆಟ್ಟು ಗ್ರಾಮ ವ್ಯಾಪ್ತಿಯಲ್ಲಿ ಸರಕಾರಿ ಬಸ್ ಸಂಪರ್ಕಕ್ಕಾಗಿ ಮನವಿ ಸಲ್ಲಿಸಿದರೆ ಪರಿಶೀಲನೆ ನಡೆಸಲಾಗುವುದು. ಬಿಎಸ್‌ಎನ್‌ಎಲ್ ಟವರ್ ಬಗ್ಗೆ ಮಾಹಿತಿ ತರಿಸಿಕೊಂಡು ಶೀಘ್ರದಲ್ಲೇ ನೆಟ್ವರ್ಕ್ ಕಲ್ಪಿಸಲು ಕ್ರಮಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios